ಸಾರಾಂಶ
ಕರಾವಳಿಯಲ್ಲಿ 2 ದಿನ ಗುಡುಗು, ಮಿಂಚು ಸಹಿತ ಭಾರಿ ಮಳೆ ಮುನ್ಸೂಚನೆಕನ್ನಡಪ್ರಭ ವಾರ್ತೆ ಉಡುಪಿ
ಸೋಮವಾರ ಸಂಜೆ ಸುರಿದ ಅನಿರೀಕ್ಷಿತ ಗಾಳಿ, ಮಳೆಗೆ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಹಾನಿಯಾಗಿದೆ. ಉಡುಪಿಯ 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿವೆ. ಜೊತೆಗೆ ಕುಂದಾಪುರ ತಾಲೂಕಿನ ರೈತರೊಬ್ಬರ ತೋಟಕ್ಕೂ ಹಾನಿಯಾಗಿದೆ. ಈ ಮುಂಗಾರುಪೂರ್ವ ಮಳೆಗೆ ಜಿಲ್ಲೆಯಲ್ಲಿ ಒಟ್ಟು 15,66,000 ರು.ಗಳಷ್ಟು ನಷ್ಟ ಸಂಭವಿಸಿದೆ.ಈ ದಿನ ಕಾರ್ಕಳ ತಾಲೂಕಿನಲ್ಲಿ ಅತೀಹೆಚ್ಚು 14.30 ಮಿ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ವಿಮಲಾ ಪಾಂಡುರಂಗ ಮತ್ತು ಜಯಂತಿ ಸದಾನಂದ ಮನೆಗಳಿಗೆ ಸಂಪೂರ್ಣ ಹಾನಿಯಾಗಿ ತಲಾ 5,00,000 ರು. ನಷ್ಟವಾಗಿದೆ. ಕಾಪು ತಾಲೂಕಿನ ಶಿರ್ವ ಗ್ರಾಮದ ಪದ್ಮ ಪೂಜಾರಿ ಮನೆಗೆ 1,00,000 ರು.ಗಳಷ್ಟು ನಷ್ಟ ಅಂದಾಜಿಸಲಾಗಿದೆ.ಉಡುಪಿ ತಾಲೂಕಿನ ಕೊಡವೂರು ಗ್ರಾಮದ ವಸಂತಿ ಭಾಸ್ಕರ, ಪುತ್ತೂರು ಗ್ರಾಮದ ಶಿವಾನಂದ ದುಗ್ಗಪ್ಪ, ಪೆರ್ಡೂರು ಗ್ರಾಮದ ರಾಜಮ್ಮ, ಗೋಪಿ ಸುಂದರ, ಪಡುತೊನ್ಸೆ ಗ್ರಾಮದ ಶಬ್ಬಿರ್ ಮಹಮ್ಮದ್, ಶಿವಳ್ಳಿ ಗ್ರಾಮದ ನೀರಜಾ ಭಟ್, ಡಾ. ವಿ. ಎಸ್. ಆಚಾರ್ಯ ಅವರುಗಳ ಮನೆಗಳಿಗೆ ತಲಾ 15,000 ರು., ಕಡೆಕಾರು ಗ್ರಾಮದ ಶಂಕರ ಅವರ ಮನೆಗೆ 10000 ರು., ಪೆರ್ಣಂಕಿಲ ದೇವೇಂದ್ರ ಪ್ರಭು ಮನೆಗೆ 45000 ರು.ಗಳಷ್ಟು ಹಾನಿಯಾಗಿದೆ.
ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ನಾಗು ಪೂಜಾರಿ ಮನೆಗೆ 10,000 ರು., ಅಂಪಾರು ಗ್ರಾಮದ ಗಿರಿಜಮ್ಮ ಶೆಡ್ತಿ, ಪಾರ್ವತಿ ಶೆಡ್ತಿ, ರಾಜೀವ ಮೂಗವೀರ, ಪದ್ಮಾವತಿ ಶೆಡ್ತಿ ಮನೆಗಳಿಗೆ ತಲಾ 10,000 ರು., ಹೊಸಂಗಡಿ ಗ್ರಾಮದ ಶಾರದ ಮನೆಗೆ 15,000 ರು. ನಷ್ಟ ಉಂಟಾಗಿದೆಕಾಪು ತಾಲೂಕಿನ ಕುತ್ಯಾರು ಗ್ರಾಮ ನೀಲಾ ಪೂಜಾರಿ ಮತ್ತು ಇನ್ನಂಜೆ ಗ್ರಾಮದ ಸುಮತಿ ಪೂಜಾರಿ ಮನೆಗಳಿಗೆ ತಲಾ 30,000, ಶಿರ್ವ ಗ್ರಾಮದ ಪದ್ಮ ಪೂಜಾರಿ ಮನೆಗೆ 1,00,000, ಯೆಣಗುಡ್ಡೆ ಗ್ರಾಮದ ಸೆಲೆಸ್ತಿನ್ ಲೋಬೊ ಮನೆಗೆ 25,000, ಮಟ್ಟು ಗ್ರಾಮದ ಶ್ರೀನಿವಾಸ ರಾವ್ ಅವರ ಮನೆಗೆ 35,000 ರು.ಗಳ ಹಾನಿಯಾಗಿದೆ.ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಅಮೃತ ಸುರೇಂದ್ರ ಅವರ ಮನೆಗೆ 25,000 ರು. ಮತ್ತು ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಶಾರದಾ ಶ್ರೀಧರ ಖಾರ್ವಿ ಮನೆಗೆ 8,000 ರು.ಗಳಷ್ಟು ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಚೆನ್ನಾಡಿ ಶಿವರಾಮ ದೇವಾಡಿಗ ಮನೆಗೆ 10,000, ಕಡ್ತಲ ಗ್ರಾಮದ ಕುಮಾರಿ ಜೋಸ್ ಮನೆಗೆ 5,000, ನೂರಾಲ್‌ಬೆಟ್ಟು ಗ್ರಾಮದ ಗುಲಾಬಿ ದೇವಾಡಿಗ ಮನೆಗೆ 30,000 ರು., ಕೂಕ್ರ ಮೂಲ್ಯ ಮನೆಗೆ 48,000 ರು.ಗಳಷ್ಟು ನಷ್ಟ ಸಂಭವಿಸಿದೆ.ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಶಂಕರ ಗಾಣಿಗ ತೋಟದಲ್ಲಿ ಅಡಕೆ ತೆಂಗಿನ ಮರಗಳು ಉರುಳಿ ಸುಮಾರು 15,000 ರು. ಹಾನಿಯಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಸಾರಿ 6.70 ಮಿ.ಮೀ ಮಳೆಯಾಗಿದೆ. ತಾಲೂಕುವಾರು ಕಾರ್ಕಳ 14.30, ಕುಂದಾಪುರ 1.70, ಉಡುಪಿ 4.60, ಬೈಂದೂರು 0.90, ಬ್ರಹ್ಮಾವರ 6.90 ಕಾಪು 6.80 ಮತ್ತು ಹೆಬ್ರಿ 12.80 ಮಿ.ಮೀ. ಮಳೆ ದಾಖಲಾಗಿದೆ.