ಶೀರೂರು ಮಠ ಹಿಂದಿನ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಶಯದಂತೆ ಮತ್ತು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ನೆನಪಿಗಾಗಿ, ಕೃಷ್ಣಮಠದ ಉತ್ತರ ದಿಕ್ಕಿನಲ್ಲಿರುವ ಅಂಬಾಗಿಲು ಜಂಕ್ಷನ್ ನಲ್ಲಿ ಶ್ರೀ ಪರಶುರಾಮ ಸ್ವಾಗತ ಗೋಪುರವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 9 ಗಂಟೆಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಉಡುಪಿ: ಶೀರೂರು ಮಠ ಹಿಂದಿನ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಶಯದಂತೆ ಮತ್ತು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ನೆನಪಿಗಾಗಿ, ಕೃಷ್ಣಮಠದ ಉತ್ತರ ದಿಕ್ಕಿನಲ್ಲಿರುವ ಅಂಬಾಗಿಲು ಜಂಕ್ಷನ್ ನಲ್ಲಿ ಶ್ರೀ ಪರಶುರಾಮ ಸ್ವಾಗತ ಗೋಪುರವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 9 ಗಂಟೆಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ.ಈ ಬಗ್ಗೆ ಬುಧವಾರ ಪರ್ಯಾಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ದಕ್ಷಿಣ ದಿಕ್ಕಿನ ಕಿನ್ನಿಮುಲ್ಕಿಯಲ್ಲಿ ಪುತ್ತಿಗೆ ಶ್ರೀಗಳು ಈಗಾಗಲೇ ಉಡುಪಿಗೆ ಬರುವ ಯಾತ್ರಾರ್ಥಿಗಳಿಗೆ ಸ್ವಾಗತಿಸುವಂತೆ ಗೀತಾಚಾರ್ಯಕೃಷ್ಣ ಗೋಪರ ನಿರ್ಮಿಸಿದ್ದಾರೆ. ಅದರಂತೆ ಉತ್ತರದಿಕ್ಕಿನಲ್ಲಿ, ತುಳುನಾಡಿನ ಸೃಷ್ಟಿಕರ್ತ ಭಗವಾನ್ ಪರಶುರಾಮರ ಹೆಸರಿನಲ್ಲಿ ಸ್ವಾಗತ ಗೋಪುರವನ್ನು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಸುಮಾರು 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ, ಶಿರೂರು ಮಠಕ್ಕೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ ಎಂದರು.ಇಂದು ದೀಪಾಲಂಕಾರ ಚಾಲನೆ:

ನಾಡಹಬ್ಬದ ರೀತಿಯಲ್ಲಿ ನಡೆಸಲಾಗುವ ಶೀರೂರು ಮಠದ ಪರ್ಯಾಯೋತ್ಸವಕ್ಕೆ ಇನ್ನಷ್ಟು ವೈಭವವನ್ನು ತುಂಬುವುದಕ್ಕಾಗಿ ಉಡುಪಿ ನಗರಸಭೆ ವತಿಯಿಂದ 50 ಲಕ್ಷ ರು. ವೆಚ್ಚದಲ್ಲಿ ನಗರದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ದೀಪಾಲಂಕಾರವನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಇಂದು ಸಂಜೆ 7 ಗಂಟೆಗೆ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆ ಮುಂಭಾಗದಲ್ಲಿ ಉದ್ಘಾಟಿಸಲಾಗುತ್ತದೆ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪರು ಮತ್ತು ಜಿಲ್ಲಾಧಿಕಾರಿ ಅವರು ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿ ಮೋಹನ್ ಭಟ್, ಪ್ರಮುಖರಾದ ಮಧುಕರ ಮುದ್ರಾಡಿ, ನಂದನ್ ಜೈನ್ ಮುಂತಾದವರಿದ್ದರು.