ಸಾರಾಂಶ
ಉಡುಪಿ: ಇಲ್ಲಿನ ಕುತ್ಪಾಡಿಯ ಶ್ರೀ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾಲೇಜಿನ ದ್ರವ್ಯಗುಣ ವಿಭಾಗ, ರೋಟರಾಕ್ಟ್ ಕ್ಲಬ್ ಮತ್ತು ಉದ್ಯಾವರ ರೋಟರಿ ಕ್ಲಬ್ ಸಹಯೋಗದೊಂದಿಗೆ ಇತ್ತೀಚೆಗೆ ಉದ್ಯಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಸುಮಾರು ೨೫ ಔಷಧೀಯ ಸಸ್ಯಗಳನ್ನು ಶಾಲಾ ವಿದ್ಯಾರ್ಥಿಗಳಿಂದ ನೆಡಿಸಲಾಯಿತು ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು. ಕಾಲೇಜಿನ ರೋಟರಾಕ್ಟ್ ಕ್ಲಬ್ ಸಂಯೋಜಕ ಡಾ. ಯೋಗೇಶ್ ಆಚಾರ್ಯ, ಡಾ. ಧನಶ್ರೀ ಪಾಟೀಲ್, ಉದ್ಯಾವರ ರೋಟರಿ ಕ್ಲಬ್ ಅಧ್ಯಕ್ಷ ರೋಟೇರಿಯನ್ ಅಶೋಕ್ ಪಾಲನ್, ಕಾರ್ಯದರ್ಶಿ ರೋಟೇರಿಯನ್ ಗಿರಿರಾಜ್ ಮತ್ತು ಸದಸ್ಯರು ರೋಟೇರಿಯನ್ ರಾಜೇಶ್ ಪಾಲನ್, ರೋಟೇರಿಯನ್ ಆನಂದ್ ಉದ್ಯಾವರ ಮತ್ತು ರೋಟೇರಿಯನ್ ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಪ್ರಾಧ್ಯಾಪಕ, ರೋಟೇರಿಯನ್ ಡಾ. ಮೊಹಮ್ಮದ್ ಫೈಸಲ್ ಸಂಯೋಜಿಸಿದರು. ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿ ಸಂಯೋಜಕರು, ಶಾಲಾ ಮುಖ್ಯೋಪಾಧ್ಯಾಯಿನಿ ಮೂಕಾಂಬೆ, ಶಿಕ್ಷಕರು, ಶಾಲಾ ಮಕ್ಕಳು, ಆಹ್ವಾನಿತರ ಉಪಸ್ಥಿತಿಯಲ್ಲಿ ಮತ್ತು ಕಾಲೇಜು ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ. ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.