ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: 125ನೇ ವರ್ಷದ ಭಜನಾ ಸಪ್ತಾಹಕ್ಕೆ ಚಾಲನೆ

| Published : Aug 01 2025, 12:30 AM IST

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: 125ನೇ ವರ್ಷದ ಭಜನಾ ಸಪ್ತಾಹಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನಾ ಆರಾಧ್ಯ ದೇವರಾದ ವಿಠೋಬಾ-ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ ಈ ಬಾರಿ, 125 ವರ್ಷದ ಭಜನಾ ಸಪ್ತಾಹಕ್ಕೆ ಚಾಲನೆ ದೊರಕಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನಾ ಆರಾಧ್ಯ ದೇವರಾದ ವಿಠೋಬಾ-ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ ಈ ಬಾರಿ, 125 ವರ್ಷದ ಭಜನಾ ಸಪ್ತಾಹಕ್ಕೆ ದೇವಳದ ಪ್ರಧಾನ ಅರ್ಚಕ ವಿನಾಯಕ ಭಟ್ ದೀಪ ಬೆಳಗಿಸಿ, ಮಹಾ ಮಂಗಳಾರತಿ ಮಾಡಿ ಚಾಲನೆ ನೀಡಿದರು.ಈ ಸಂದರ್ಭ ಧಾರ್ಮಿಕ ಪೂಜಾವಿಧಿಗಳಿಗೆ ಅರ್ಚಕ ದಯಾಘನ್ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು. ಭಜನಾ ಸಪ್ತಾಹದ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ನೂರಾರು ಭಕ್ತರು ಜೈ ವಿಠಲ್ ಹರಿ ವಿಠಲ್ ಎಂದು ನಾಮ ಸ್ಮರಣೆ ಹಾಡುತ್ತ ಭಜನಾ ಸೇವೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮಂಡಳಿ ಪ್ರಮುಖರಾದ ಪಿ.ವಿ.ಶೆಣೈ, ವಿಶ್ವನಾಥ್ ಭಟ್, ವಸಂತ್ ಕಿಣಿ, ಶಾಂತಾರಾಮ್ ಪೈ, ಗಣೇಶ್ ಕಿಣಿ, ಉಮೇಶ್ ಪೈ, ಕೈಲಾಸನಾಥ ಶೆಣೈ, ನಾರಾಯಣ ಪ್ರಭು, ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಪದಾದಿಕಾರಿಗಳಾದ ಪ್ರಕಾಶ್ ಭಕ್ತ, ಭಾಸ್ಕರ ಶೆಣೈ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಜಿ.ಎಸ್.ಬಿ ಯುವಕ ಮಂಡಳಿ ಸದಸ್ಯರು, ಭಗಿನಿ ವೃಂದ ಸದಸ್ಯರು, ಜಿ.ಎಸ್.ಬಿ ಮಹಿಳಾ ಮಂಡಳಿ ಸದಸ್ಯರು, ಭಜನಾ ಮಹೋತ್ಸವ ಸಮಿತಿಯ ಸದಸ್ಯರು, ಊರ ಪರಊರ ನೂರಾರು ಭಜನಾ ಮಂಡಳಿಯ ಸದಸ್ಯರು, ಸಾವಿರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.ಈ ಭಜನಾ ಸಪ್ತಾಹ ಜು. 30 ರಿಂದ 7 ದಿನಗಳ ಕಾಲ ಊರಪರಊರ ಹತ್ತಾರು ಭಜನಾ ತಂಡಗಳಿಂದ ಅಹೋರಾತ್ರಿ ನಿರಂತರ ವೈಭವದಿಂದ ನಡೆಯಲಿದೆ. ಈ ಸಂಪ್ರದಾಯ ಕಳೆದ 125 ವರ್ಷಗಳಿಂದ ಅನಾಚೂನವಾಗಿ ನಡೆದುಕೊಂಡು ಬರುತ್ತಿದೆ.