ಸಾರಾಂಶ
ಉಡುಪಿ: ಬೆಂಗಳೂರು ಮತ್ತು ಕೋಲಾರದಲ್ಲಿ ಚಿನ್ನಾಭರಣ ಮಳಿಗೆಗಳ ಮೂಲಕ ಹೆಸರುವಾಸಿಯಾಗಿರುವ ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್ ಪ್ರೈ.ಲಿ.ನ 3ನೇ ಮಳಿಗೆ ಉಡುಪಿಯಲ್ಲಿ ಆರಂಭವಾಗುತ್ತಿದೆ.13ರಂದು ಬೆಳಗ್ಗೆ 10 ಗಂಟೆಗೆ ನಗರದ ಹೆಡ್ ಪೋಸ್ಟಾಫೀಸ್ ಮುಂಭಾಗದಲ್ಲಿ 3 ಅಂತಸ್ತಿನ 8000 ಚದರಡಿ ವಿಸ್ತೀರ್ಣ ಈ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಈ ಮಳಿಗೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ಅತಿಥಿಯಾಗಿ ಸಿನೆಮಾ ನಟ ದ್ರುವ ಸರ್ಜಾ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ, ಶಾಸಕ ಸಮೃದ್ಧಿ ವಿ. ಮಂಜುನಾಥ್ ಹೇಳಿದ್ದಾರೆ.ಗುರುವಾರ ತಮ್ಮ ನೂತನ ಮಳಿಗೆಯಲ್ಲಿ ಪೂಜಾದಿ ಕಾರ್ಯಕ್ರಮಗಳನ್ನು ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಪ್ಪಟ ಕರ್ನಾಟಕ ಮೂಲದ ತಮ್ಮ ಈ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಚಿನ್ನಾಭರಣಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಉಡುಪಿಯ ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಉಡುಪಿಯ ಜನರ ಚಿನ್ನಾಭರಣಗಳ ಮೇಲಿನ ಆಸಕ್ತಿಯನ್ನು ಗಮನದಲ್ಲಿಟ್ಟು ಈ ಮಳಿಗೆ ಆರಂಭಿಸಲಾಗಿದೆ ಎಂದವರು ಹೇಳಿದರು.ಸಂಸ್ಥೆಯ ನಿರ್ದೇಶಕರಾದ ಅಂಬರೀಶ್ ಮತ್ತು ರಾಘವೇಂದ್ರ ಪೂಜಾರಿ ಇದ್ದರು.