ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನಾ ಸಪ್ತಾಹಕ್ಕೆ ಚಾಲನೆ

| Published : Aug 11 2024, 01:39 AM IST

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನಾ ಸಪ್ತಾಹಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಊರ ಪರವೂರಿನ ಅನೇಕ ಭಜನಾ ಮಂಡಳಿಗಳು ಭಾಗವಹಿಸುವ ಈ ಆಹೋರಾತ್ರಿ ಭಜನಾ ಸಪ್ತಾಹವು ಆ.10ರಂದು ಆರಂಭಗೊಂಡು ಆ.17ರ ತನಕ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ 124ನೇ ಭಜನಾ ಸಪ್ತಾಹಕ್ಕೆ ಶನಿವಾರ ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್ ಚಾಲನೆ ನೀಡಿದರು.

ಸೇರಿದ ಭಕ್ತರು ಜೈ ವಿಠಲ್, ಹರಿ ವಿಠಲ್ ಎಂದು ಜೋರಾಗಿ ಹೇಳುತ್ತಾ ಶ್ರೀ ವಿಠೋಭ ರುಖುಮಾಯಿ ದೇವರನ್ನು ರಜತ ಮಂಟಪದಲ್ಲಿ ಕುಳ್ಳಿರಿಸಿದರು. ನಂತರ ಮಹಾಪೂಜೆ ನಡೆಯಿತು.

ಊರ ಪರವೂರಿನ ಅನೇಕ ಭಜನಾ ಮಂಡಳಿಗಳು ಭಾಗವಹಿಸುವ ಈ ಆಹೋರಾತ್ರಿ ಭಜನಾ ಸಪ್ತಾಹವು ಶನಿವಾರದಿಂದ ಆರಂಭಗೊಂಡು ಆ.17ರ ತನಕ ನಡೆಯಲಿದೆ.ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ವಿಠಲ್ ದಾಸ್ ಶೆಣೈ, ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ, ಪ್ರಮುಖರಾದ ಅಲೆವೂರು ಗಣೇಶ ಕಿಣಿ, ಶಾಂತಾರಾಮ ಪೈ, ಪ್ರಕಾಶ್ ಭಕ್ತ, ಕೈಲಾಸನಾಥ ಶೆಣೈ, ನಾರಾಯಣ ಪ್ರಭು, ಉಮೇಶ್ ಪೈ, ಮಟ್ಟಾರ್ ವಸಂತ ಕಿಣಿ, ವಿಶ್ವನಾಥ ಭಟ್, ಪ್ರಕಾಶ್ ಶೆಣೈ, ಅಶೋಕ ಬಾಳಿಗಾ, ರೋಹಿತಾಕ್ಷ ಪಡಿಯಾರ್, ಪುಂಡಲೀಕ್ ಕಾಮತ್, ಅರ್ಚಕರಾದ ವಿನಾಯಕ ಭಟ್, ದೀಪಕ್ ಭಟ್, ಗಿರೀಶ ಭಟ್, ವಿವೇಕ ಶಾನಭೋಗ, ಕುಲ್ಯಾಡಿ ಪ್ರಕಾಶ್ ಪೈ, ವಿಶಾಲ್ ಶೆಣೈ, ಜಿಎಸ್‌ಬಿ ಯುವಕ ಮಂಡಲ ಅಧ್ಯಕ್ಷ ನಿತೇಶ್ ಶೆಣೈ, ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಶೆಣೈ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ಹಾಗೂ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.