ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 17ರಂದು ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಎಲ್.ಸಾಮಗ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಅಂದು ಬೆಳಗ್ಗೆ ಮಲ್ಪೆಯ ಸಿಟಿಜನ್ ಸರ್ಕಲ್‌ನಿಂದ ದೇವಸ್ಥಾನದ ವರೆಗೆ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು. ನಂತರ ರಾಷ್ಟ್ರ ಮತ್ತು ಪರಿಷತ್ ಧ್ವಜಾರೋಹಣ ನಡೆಯಲಿದೆ. ಕನ್ನಡದ ಹಿರಿಯ ವಿಮರ್ಶಕ ಎಸ್. ಆರ್. ವಿಜಯಶಂಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಸಾಹಿತಿ ಎಚ್. ಡುಂಡಿರಾಜ್ ಉಪಸ್ಥಿತರಿರುತ್ತಾರೆ. ಸಾಧಕರಾದ ಜಯನ್ ಮಲ್ಪೆ, ಸಿ.ಎಸ್.ರಾವ್, ವಿ.ಜಿ.ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ಹರಿಪ್ರಸಾದ್ ರೈ, ವಾದಿರಾಜ್ ಭಟ್, ವೆಂಕಟೇಶ್ ಪೈ, ವಿನಯ್ ಆಚಾರ್ಯ ಮುಂಡ್ಕೂರ್ ಅವರಿಗೆ ಅಭಿನಂದನೆ ಮತ್ತು ನಾಲ್ಕು ಪುಸ್ತಕಗಳು ಲೋಕಾರ್ಪಣೆಯಾಗಲಿದೆ.ನಂತರ ದಿನವಿಡೀ ವಿಶಿಷ್ಟ ರೀತಿಯ ಯಕ್ಷ ಕವಿಗೋಷ್ಠಿ, ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ಇದರ ಕುರಿತಾದ ವಿಚಾರಗೋಷ್ಠಿ, ಸಮ್ಮೇಳನ ಅಧ್ಯಕ್ಷ ರೊಂದಿಗೆ ಮಾತುಕತೆ ನಡೆಯಲಿದೆ.ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಮಣ್ಯ ಜಿ. ಕುರ್ಯ, ಡೊನಾಥ್ ಡಿ.ಅಲ್ಮೇಡಾ, ಮಂಜುನಾಥ್ ಭಟ್ ಮೂಡುಬೆಟ್ಟು, ನಾರಾಯಣ ಸರಳಾಯ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಚಂದ್ರ ಚಿತ್ತ, ಅನಿಲ್ ಶಂಕರ್, ಪ್ರಕಾಶ್ ಕೊಡಂಕೂರು, ಡಾ.ಸುರೇಶ್ ಶೆಣೈ, ಮಂಜುನಾಥ್ ಕಾಮತ್, ಬಾಲಕೃಷ್ಣ ಕೊಡವೂರು, ಬಾಲಕೃಷ್ಣ ಮೆಂಡನ್, ರಮೇಶ್ ಮಂಚಿ, ಪ್ರಶಾಂತ್ ಕಡಿಯಾಳಿ, ವಿದುಷಿ ಶಾಂಭವಿ ಆಚಾರ್ಯ, ಕುಸುಮ ಕಾಮತ್, ವಾಣಿ ಬಾಲಚಂದ್ರ, ಸ್ವರಾಜ್ಯಲಕ್ಷ್ಮಿ, ಅವನಿ, ಮುಕ್ತಾ ಶ್ರೀನಿವಾಸ್, ಅಶ್ವಿನಿ ಶ್ರೀನಿವಾಸ್, ಸುರೇಖಾ ಭಟ್, ಆಶ್ಲೇಷ್ ಆರ್. ಭಟ್, ಮಾನ್ಸಿ ಕೆ. ಕೋಟ್ಯಾನ್, ಮಾನ್ಸಿ ಎಸ್.ಎ. ಅವರನ್ನು ಸನ್ಮಾನಿಸಲಾಗುವುದು.ಸಮಾರೋಪ ಭಾಷಣವನ್ನು ಸಾಹಿತಿ ಡಾ. ನಿಕೇತನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳದಿಂದ ಕುಮಾರವ್ಯಾಸ ಭಾರತದ ಆಯ್ದ ಭಾಗ ‘ಆರೊಡನೆ ಕಾದುವೇನು’ ನಾಟಕ ಪ್ರದರ್ಶನಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್, ಸ್ವಾಗತ ಸಮಿತಿಯ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು ಉಪಸ್ಥಿತರಿದ್ದರು.