ಉಡುಪಿ: ಮಳೆಗಿಂತ ಗಾಳಿ ಆರ್ಭಟವೇ ಹೆಚ್ಚು

| Published : Jul 27 2025, 12:04 AM IST

ಸಾರಾಂಶ

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆ ಕಳೆದ 3 ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು (ಭಾನುವಾರ) ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಸ್ವಲ್ಪ ಇಳಿಮುಖವಾಗುವ ಸಾಧ್ಯತೆಯ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾದ್ಯಂತ ನಿರಂತರ ಮಳೆ ಮುಂದುವರಿದಿದೆ. ಶನಿವಾರ ಮಳೆಗಿಂತಲೂ ಗಾಳಿಯ ಆರ್ಭಟವೇ ಜಾಸ್ತಿಯಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ, ಗಾಳಿಗೆ ಸುಮಾರು 18 ಮನೆಗಳಿಗೆ, 3 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿವೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆ ಕಳೆದ 3 ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು (ಭಾನುವಾರ) ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಸ್ವಲ್ಪ ಇಳಿಮುಖವಾಗುವ ಸಾಧ್ಯತೆಯ ಸೂಚನೆ ನೀಡಲಾಗಿದೆ.ಕುಂದಾಪುರ ತಾಲೂಕಿನಲ್ಲಿ ಗಾಳಿಗೆ ಮರಗಳು ಉರುಳಿ 8 ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ತಲ್ಲೂರು ಗ್ರಾಮದ ಮಂಜಿ ದೇವಾಡಿಗ ಅವರ ಮನೆಗೆ 20 ಸಾವಿರ ರು., ಬಸ್ರೂರು ಗ್ರಾಮದ ರಾಮ ಆಚಾರಿ ಅವರ ಮನೆಗೆ 80 ಸಾವಿರ, ಶಂಕರನಾರಾಯಣ ಗ್ರಾಮದ ಚಿಕ್ಕಯ್ಯ ಮೊಗವೀರ ಅವರ ಮನೆಗೆ 5 ಸಾವಿರ ರು., ರಟ್ಟಾಡಿ ಗ್ರಾಮದ ಲಕ್ಷ್ಮಣ ಕುಲಾಲ್ ಅವರ ಮನೆಗೆ 10 ಸಾವಿರ ರು., ರಟ್ಟಾಡಿ ಸಾಧು ಕುಲಾಲ್ ಅವರ ಮನೆಗೆ 10 ಸಾವಿರ, ಬಳ್ಕೂರು ಗ್ರಾಮದ ಶಾರದಾ ಪೂಜಾರಿ ಅವರ ಮನೆಗೆ 50 ಸಾವಿರ, ಗುಜ್ಜಾಡಿ ಗ್ರಾಮದ ನಾಗಮ್ಮ ಕೃಷ್ಣ ಅವರ ಮನೆಗೆ 35 ಸಾವಿರ ರು., ಯಾಡ್ಯಾಡಿ ಮುತ್ಯಾಡಿ ಗ್ರಾಮದ ಸುಭಾಷ್ ಐತ ಕೊರಗ ಅವರ ಮನೆಗೆ 50 ಸಾವಿರ ರು.ಗಳಷ್ಟು ಹಾನಿ ಮರಗಳುಬಿದ್ದು ಸಂಭವಿಸಿದೆ.ಇನ್ನು ಇದೇ ತಾಲೂಕಿನಲ್ಲಿ ಗಾಳಿಮಳೆಗೆ ಆನಗಳ್ಳಿ ಗ್ರಾಮದ ಕೆ. ಶಂಕರನಾರಾಯಣ ಹೆಬ್ಬಾರ್ ಅವರ ಮನೆಗೆ 1 ಲಕ್ಷ ರು., ಲಕ್ಷ್ಮೀ ಭಟ್ ಅವರ ಮನೆಗೆ 50 ಸಾವಿರ, ವಡೇರಹೋಬಳಿ ಗ್ರಾಮದ ಶಂಕರ್ ನರಸಿಂಹ ಅವರ ಮನೆಗೆ 30 ಸಾವಿರ ರು., ಭಾರತಿ ನವೀನ್ ಅವರ ಮನೆಗೆ 15 ಸಾವಿರ, ಗುಲ್ವಾಡಿ ಗ್ರಾಮದ ಗಿರಿಜಾ ಭದ್ರ ಅವರ ಮನೆಗೆ 2.50 ಲಕ್ಷ ರು.,ಕೋಣಿ ಗ್ರಾಮದ ಶಾರದಾ ಅವರ ಮನೆಗೆ 1.30 ಲಕ್ಷ ರು. ನಷ್ಟ ಸಂಭವಿಸಿದೆ.ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ರಾಜೀವಿ ಶೆಟ್ಟಿ ಅವರ ಮನೆ ಮೇಲೆ ಮರಬಿದ್ದು 10 ಸಾವಿರ, ಹರೀಶ ಸಂಜೀವ ಪೂಜಾರಿ ಅವರ ಮನೆಗೆ 10 ರು., ಕಾಪು ತಾಲೂಕಿನ ಬೆಳ್ಳೆ ಗ್ರಾಮದ ರವಿರಾಜ್ ಆಚಾರ್ಯ ಅವರ ಮನೆಗೆ 80 ಸಾವಿರ, ಎಲ್ಲೂರು ಗ್ರಾಮದ ಚಕ್ರಪಾಣಿ ಉಡುಪ ಅವರ ಮನೆಯ ಮೇಲೆ ಮರಬಿದ್ದು 70,000 ರು. ಹಾನಿಯಾಗಿದೆ.ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೀತಾ ಗಣೇಶ್ ಅವರ ಜಾನುವಾರು ಕೊಟ್ಟಿಗೆಗೆ 2 ಸಾವಿರ, ಬೇಲೂರು ಗ್ರಾಮದ ಚಂದು ಅವರ ಜಾನುವಾರು ಕೊಟ್ಟಿಗೆಗೆ 10 ಸಾವಿರ ಮತ್ತು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪ್ರವೀಣ್ ಆಚಾರ್ ಅವರ ಜಾನುವಾರು ಕೊಟ್ಟಿಗೆ 50 ರು. ಹಾನಿಯಾಗಿದೆ.ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 57 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಕಾರ್ಕಳ 50.90, ಕುಂದಾಪುರ 61.40, ಉಡುಪಿ 36.80, ಬೈಂದೂರು 50.90, ಬ್ರಹ್ಮಾವರ 62.7, ಕಾಪು 20.90, ಹೆಬ್ರಿ 92.50 ಮಿ.ಮೀ. ಮಳೆಯಾಗಿದೆ.76 ಬಡಗುಬೆಟ್ಟು ಗ್ರಾಪಂ ಕಚೇರಿ ಬಳಿ ಗಾಳಿಮಳೆಗೆ ಉರುಳಿಬಿದ್ದ ಭಾರೀ ಮರ