ಉಡುಪಿ: ಎಪಿಸಿಆರ್ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆ ಆಯ್ಕೆ

| Published : Aug 05 2024, 12:39 AM IST

ಉಡುಪಿ: ಎಪಿಸಿಆರ್ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಜಾಗೃತಿಯನ್ನು ಸಹ‌ ಮೂಡಿಸುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆಯವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಶಾಮ್ ರಾಜ್ ಬಿರ್ತಿ ಮತ್ತು ನಜ್ಮಾ, ಪ್ರಧಾನ ಕಾರ್ಯದರ್ಶಿಯಾಗಿ ಸಲಾವುದ್ದೀನ್, ಜೊತೆ ಕಾರ್ಯದರ್ಶಿ ಆಗಿ ಪ್ರಶಾಂತ್ ಮೊಗವೀರ, ಕೋಶಾಧಿಕಾರಿಯಾಗಿ ಮುಜಾಹಿದ್ ಅಲಿ ನಾವುಂದ ಮತ್ತು ಸಂಪರ್ಕ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಶಾರೂಕ್ ತೀರ್ಥಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.ನೂತನ ಸಲಹಾ ಸಮಿತಿಯ ಸದಸ್ಯರಾಗಿ ರಿಯಾಜ್ ಕೋಡಿ,‌ ನ್ಯಾಯವಾದಿ ಅಸಾದುಲ್ಲಾ, ರಿಹಾನ್ ತ್ರಾಸಿ, ನ್ಯಾಯವಾದಿ ಮಂಜುನಾಥ್ ಗಿಳಿಯಾರ್, ದಿನಕರ ಬೆಂಗ್ರೆ, ನ್ಯಾಯವಾದಿ ರಘು, ತಾಜುದ್ದೀನ್, ಮುನೀರ್ ಕಂಡ್ಲೂರ್, ಇದ್ರೀಸ್ ಹೂಡೆ, ನ್ಯಾಯವಾದಿ ಅಫ್ವಾನ್ ಹೂಡೆ, ಮುಹಮ್ಮದ್ ತೌಫೀಕ್ ಗಂಗೊಳ್ಳಿ, ರಿಯಾಜ್ ಮುದ್ರಂಗಡಿ, ಸಿದ್ದೀಕ್ ಕಣ್ಣಂಗಾರ್, ಝಕರಿಯಾ ನೇಜಾರ್, ಅಯಾನ್ ಮಲ್ಪೆ, ಸಮೀರ್, ಸಿಮ್ರಾನ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುನ್ಞಿ ಅಧಿಕಾರದ ಆಸೆ ನಮ್ಮಲ್ಲಿ ಇರಬಾರದು. ಆದರೆ ಬಂದ ಅಧಿಕಾರವನ್ನು ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ನಿಭಾಯಿಸಬೇಕು, ಎಪಿಸಿಆರ್ ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜದಲ್ಲಿರುವ ಶೋಷಿತ, ಮರ್ದಿತ ಸಮುದಾಯಕ್ಕೆ ಕಾನೂನಿನ ಪ್ರಕಾರ ನ್ಯಾಯವನ್ನು ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅದರ ಜೊತೆಯಲ್ಲಿ ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಜಾಗೃತಿಯನ್ನು ಸಹ‌ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ವಸೀಮ್ ಅಬ್ದುಲ್ಲಾ ಉಪಸ್ಥಿತರಿದ್ದರು.