ಉದ್ಯಾವರ ಮಂಜುನಾಥ್ 12ನೇ ಸಂಸ್ಮರಣಾ ಕಾರ್ಯಕ್ರಮ

| Published : Sep 01 2024, 01:49 AM IST

ಉದ್ಯಾವರ ಮಂಜುನಾಥ್ 12ನೇ ಸಂಸ್ಮರಣಾ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಕಾರ್ಯಕರ್ತರಾಗಿದ್ದ ದಿ.ಮಂಜುನಾಥ್ ಉದ್ಯಾವರ್ ಅವರ 12ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಶ್ರೀ ವಿಠೋಬಾ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉದ್ಯಾವರಇಲ್ಲಿನ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿ.ಮಂಜುನಾಥ್ ಉದ್ಯಾವರ್ ಅವರ 12ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಇಲ್ಲಿನ ಶ್ರೀ ವಿಠೋಬಾ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ ಮಾತನಾಡಿ, ಮಾಜಿ ಲೋಕಸಭಾ ಸದಸ್ಯರಾದ ದಿ. ಆಸ್ಕರ್ ಫರ್ನಾಂಡಿಸ್ ಅವರ ಆಪ್ತ ಸಹಾಯಕನಾಗಿ ಲೋಕಸಭಾ ಸದಸ್ಯರ ಅನುದಾನವನ್ನು ಎಲ್ಲಿ ಅಭಿವೃದ್ಧಿ ಕೆಲಸ ಆಗಬೇಕು ತಿಳಿದುಕೊಂಡು ಆ ಕೆಲಸಗಳಿಗೆ ಆದ್ಯತೆಯ ಮೇರೆಗೆ ಯಾವುದೇ ವಸೂಲಿಬಾಜಿ ಇಲ್ಲದೆ ನೀಡುತ್ತಾ ಬಂದ ಮಂಜಣ್ಣ, ಉದ್ಯಾವರ ಗ್ರಾಮದಲ್ಲಿ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರ ಗೆಳೆಯರು ಅವರ ನೆನಪು ಮಾಡಿಕೊಳ್ಳುತ್ತಾ ಅವರ ಕನಸುಗಳನ್ನು ನನಸು ಮಾಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ನವೀನ್ ಡಿಸೋಜ, ನ್ಯಾಯವಾದಿ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಾವರ ಬಿಲ್ಲವ ಮಹಾಜನ ಸಂಘ ಅಧ್ಯಕ್ಷ ಸತೀಶ್ ಕೋಟ್ಯಾನ್ ಭಾಗವಹಿಸಿದ್ದರು.ಸಂಘದ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್ ಮತ್ತು ಶರತ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ವಂದಿಸಿದರು. ನಿರ್ದೇಶಕ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಅರ್ಹರಿಗೆ ಒಂದು ಲಕ್ಷ ರು. ವೈದ್ಯಕೀಯ ನೆರವು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಕಲಾಭಿ ಥಿಯೇಟರ್ ಕಲಾವಿದರಿಂದ ಜಪಾನಿನ ಬುನ್ರಾಕು ಗೊಂಬೆಯಾಟ ‘ಪುರ್ಸನ ಪುಗ್ಗೆ’ (ನಿ:ಶ್ರವಣ್ ಹೆಗ್ಗೋಡು) ಪ್ರದರ್ಶನಗೊಂಡಿತು.