ಸಾರಾಂಶ
ಶ್ರೀಮನ್ ಮಧ್ವಾಚಾರ್ಯ, ಟೀಕಾಚಾರ್ಯ, ವ್ಯಾಸರಾಜಾದಿ ಯತಿಗಳ ಪ್ರತಿಮಾ ಸ್ಥಾನೀಯರಾದ ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪ್ರತಿಮೆಗಳಿಗೆ ಬೆಳಗ್ಗೆ 8 ರಿಂದ 12 ರವರೆಗೆ ಮಹಾಭಿಷೇಕ ನೆರವೇರಿಸುವರು. ಸಂಸ್ಥಾನದ ಮುಖ್ಯ ಆರಾಧ್ಯ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣ ದೇವರು, ಶ್ರೀ ಮೂಲ ಪಟ್ಟಾಭಿರಾಮ ದೇವರು ಮತ್ತು ಪರಂಪರಾಗತ ಸಾಲಿಗ್ರಾಮಗಳಿಗೆ ಹಾಲು, ಮೊಸರು, ತುಪ್ಪ, ಜೇನು, ಎಳನೀರು ಸಹಿತ ಪಂಚಾಮೃತ ಅಭಿಷೇಕ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೃಷ್ಣಮೂರ್ತಿಪುರಂನ ಸೋಸಲೆ ವ್ಯಾಸರಾಜರ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಯುಗಾದಿ ಮಹೋತ್ಸವ ಅಂಗವಾಗಿ ಮಂಗಳವಾರ ದೇವರಿಗೆ ಮಹಾಭಿಷೇಕ ಹಮ್ಮಿಕೊಳ್ಳಲಾಗಿದೆ.ಶ್ರೀಮನ್ ಮಧ್ವಾಚಾರ್ಯ, ಟೀಕಾಚಾರ್ಯ, ವ್ಯಾಸರಾಜಾದಿ ಯತಿಗಳ ಪ್ರತಿಮಾ ಸ್ಥಾನೀಯರಾದ ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪ್ರತಿಮೆಗಳಿಗೆ ಬೆಳಗ್ಗೆ 8 ರಿಂದ 12 ರವರೆಗೆ ಮಹಾಭಿಷೇಕ ನೆರವೇರಿಸುವರು. ಸಂಸ್ಥಾನದ ಮುಖ್ಯ ಆರಾಧ್ಯ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣ ದೇವರು, ಶ್ರೀ ಮೂಲ ಪಟ್ಟಾಭಿರಾಮ ದೇವರು ಮತ್ತು ಪರಂಪರಾಗತ ಸಾಲಿಗ್ರಾಮಗಳಿಗೆ ಹಾಲು, ಮೊಸರು, ತುಪ್ಪ, ಜೇನು, ಎಳನೀರು ಸಹಿತ ಪಂಚಾಮೃತ ಅಭಿಷೇಕ ಮಾಡಲಾಗುವುದು.
ನಂತರ ಕನಕಾಭಿಷೇಕ, ಮಹಾ ಮಂಗಳಾರತಿ, ಯತಿಭಿಕ್ಷೆ ಇತರ ಸೇವಾ ಕಾರ್ಯ ನಡೆಯಲಿದೆ. ಇದೇ ಸಂದರ್ಭ ಪ್ರಸಿದ್ಧ ಪಂಡಿತರಿಂದ ಪ್ರವಚನವೂ ನೆರವೇರಲಿದೆ.ಸಂಜೆ 6.30ಕ್ಕೆ ವಿದ್ವಾಂಸರಿಂದ ಪಂಚಾಂಗ ಶ್ರವಣವಿರುತ್ತದೆ. ಭಕ್ತರು ಭಾಗವಹಿಸಬೇಕು ಎಂದು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ. ಮಧುಸೂದನಾಚಾರ್ಯ ತಿಳಿಸಿದ್ದಾರೆ.