ಶ್ರೀಶೈಲದಲ್ಲಿ ಏ.6ರಿಂದ ಯುಗಾದಿ ಮಹೋತ್ಸವ ಆರಂಭ

| Published : Mar 26 2024, 01:02 AM IST

ಸಾರಾಂಶ

ವಿಜಯಪುರ: ಈ ಬಾರಿ ಏಪ್ರಿಲ್ 6ರಿಂದ 10ರ ವರೆಗೆ ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು ನಡೆಯಲಿವೆ. ಐದು ದಿನಗಳ ಕಾಲ ನಡೆಯುವ ಈ ಯುಗಾದಿ ಉತ್ಸವದಲ್ಲಿ 6 ಲಕ್ಷಕ್ಕೂ ಮೀರಿ ಭಕ್ತರು ಕ್ಷೇತ್ರವನ್ನು ಸಂದರ್ಶಿಸಬಹುದು ಎಂದು ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ. ಯುಗಾದಿ ಉತ್ಸವಗಳು ಪ್ರಾರಂಭವಾಗುವ 10 ದಿನಗಳ ಮೊದಲು ಅಂದರೆ ಮಾ.27ರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ.

ವಿಜಯಪುರ: ಈ ಬಾರಿ ಏಪ್ರಿಲ್ 6ರಿಂದ 10ರ ವರೆಗೆ ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು ನಡೆಯಲಿವೆ. ಐದು ದಿನಗಳ ಕಾಲ ನಡೆಯುವ ಈ ಯುಗಾದಿ ಉತ್ಸವದಲ್ಲಿ 6 ಲಕ್ಷಕ್ಕೂ ಮೀರಿ ಭಕ್ತರು ಕ್ಷೇತ್ರವನ್ನು ಸಂದರ್ಶಿಸಬಹುದು ಎಂದು ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ. ಯುಗಾದಿ ಉತ್ಸವಗಳು ಪ್ರಾರಂಭವಾಗುವ 10 ದಿನಗಳ ಮೊದಲು ಅಂದರೆ ಮಾ.27ರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ. ಈ ಉತ್ಸವಗಳಿಗೆ ಕರ್ನಾಟಕದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಕ್ತರು ಮತ್ತು ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ ಹಾಗೂ ಇತರೆ ಭಾಗಗಳಿಂದ ಕೂಡ ಭಕ್ತರು ಸೇರುತ್ತಾರೆ. ಯುಗಾದಿ ಮಹೋತ್ಸವಗಳಲ್ಲಿ ಭಕ್ತರಿಗೆ ಅನುಕೂಲಕರ ದರ್ಶನಕ್ಕಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕಾರಿಕ ದರ್ಶನ (ಲಘು ದರ್ಶನ) ವನ್ನು ಒದಗಿಸಲಾಗುವುದು. ಯುಗಾದಿ ಉತ್ಸವ ದಿನಗಳಲ್ಲಿ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶವಿಲ್ಲ. ಆದಾಗ್ಯೂ, ಉತ್ಸವಗಳ 10 ದಿನಗಳ ಹಿಂದಿನಿಂದ ಅಂದರೆ ಮಾರ್ಚ್ 27ರಿಂದ ಏಪ್ರಿಲ್ 5ರ ವರೆಗೆ ಭಕ್ತರಿಗೆ ನಿತ್ಯ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಶ್ರೀ ಸ್ವಾಮಿಯನ್ನು ಸ್ಪರ್ಶಿಸುವ ಸ್ಪರ್ಶದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ದರ್ಶನದ ಟಿಕೆಟ್ ಶುಲ್ಕ ₹500 ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ 1500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಭಕ್ತರು ನಿರ್ದಿಷ್ಟ ಸಮಯಗಳಲ್ಲಿ ಕರೆಂಟ್ ಬುಕಿಂಗ್ ಮೂಲಕ ಈ ಟಿಕೆಟ್‌ಗಳನ್ನು ದೇವಸ್ಥಾನದಲ್ಲಿಯೇ ಪಡೆಯಬಹುದು ಎಂದು ಕಮೀಟಿ ತಿಳಿಸಿದೆ.