ಮನೆಗಳಿಗೆ ನುಗ್ಗಿದ ಯುಜಿಡಿ ನೀರು: ಪ್ರತಿಭಟನೆ

| Published : May 23 2024, 01:02 AM IST

ಮನೆಗಳಿಗೆ ನುಗ್ಗಿದ ಯುಜಿಡಿ ನೀರು: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ನಗರದ ಎರಡು, ಮೂರನೆ ವಾರ್ಡುಗಳ ವಾಸಿಗಳು ರಾಜಕಾಲುವೆಗಳ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಕಂದವಾರ ಕೆರೆಯಿಂದ ಅಮಾನಿ ಗೋಪಾಲ ಕೃಷ್ಣ ಕೆರಗೆ ಹರಿದು ಹೋಗುವ ರಾಜಕಾಲುವೆ ಯಾವಾಗ ಉಕ್ಕಿ ಹರಿಯುತ್ತದೋ ಹೇಳಕ್ಕಾಗಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮೂರು ದಿನಗಳ ಹಿಂದೆ ಬಿದ್ದ ಮಳೆಗೆ ನಗರದ 9 ನೇ ವಾರ್ಡಿನಲ್ಲಿ ಉಂಟಾದ ಅವ್ಯವಸ್ಥೆಗೆ ಆಕ್ರೋಶಗೊಂಡ ನಾಗರೀಕರು ತಮ್ಮ ನಗರಸಭೆ ಸದಸ್ಯರ ಜೊತೆಗೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮಳೆ ಬಂದ್ರೆ ಸಾಕು ಚಿಕ್ಕಬಳ್ಳಾಪುರ ನಗರದ ಕೆಲವು ವಾರ್ಡುಗಳ ವಾಸಿಗಳು ಎಲ್ಲಿ ಎನಾಗುತ್ತೋ ಅನ್ನೋ ಭಯದಲ್ಲೆ ಬದುಕಬೇಕಾಗುತ್ತದೆ. 7,8,9 ನೇ ವಾರ್ಡಿನ ಪ್ರದೇಶ ತಗ್ಗು ಪ್ರದೇಶಗಳಿಲ್ಲಿವೆ. ಎರಡು ಮೂರನೆ ವಾರ್ಡುಗಳ ವಾಸಿಗಳು ರಾಜಕಾಲುವೆಗಳ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಕಂದವಾರ ಕರೆಯಿಂದ ಅಮಾನಿ ಗೋಪಾಲ ಕೃಷ್ಣ ಕೆರಗೆ ಹರಿದು ಹೋಗುವ ರಾಜಕಾಲುವೆ ಯಾವಾಗ ಉಕ್ಕಿ ಹರಿಯುತ್ತದೋ ಹೇಳಕ್ಕಾಗಲ್ಲ ಅನ್ನುವಂತಾಗಿದೆ.

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಮೂರು ದಿನಗಳ ಹಿಂದೆ ಬಿದ್ದ ಬಾರಿ ಮಳೆಗೆ 9 ನೇ ವಾರ್ಡು ಹೈರಾಣಾಗಿ ಹೋಗಿದೆ. ಅವೈಜ್ಞಾನಿಕ ವಾಗಿ ನಿರ್ಮಿಸಿದ ಯುಜಿಡಿ ಚೇಂಬರ್ ಗಳಿಗೆ ನುಗ್ಗಿದ ನೀರು ಉಕ್ಕಿ ಚರಂಡಿಗಳ ಮೂಲಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿವೆ ಮೂರು ದಿನಗಳಿಂದ ನಗರಸಭೆ ಅಧಿಕಾರಿಗಳಿಗೆ ಹೇಳಿದ್ರೂ ಎನೂ ಕ್ರಮ ಜರುಗಿಸಿಲ್ಲ ಎಂದು ಕುಪಿತಗೊಂಡ ನಾಗರೀಕರು ತಮ್ಮ ವಾರ್ಡಿನ ನಗರಸಭಾ ಸದಸ್ಯ ಆರ್.ಮಟಮಪ್ಪರೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಿದರು.ವಾರದೊಳಗೆ ಸರಿಪಡಿಸುವ ಭರವಸೆ

ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಪೌರಾಯುಕ್ತ ಮಂಜುನಾಥ್, ಕೂಡಲೆ ಸ್ಥಳಕ್ಕೆ ದಾವಿಸಿ ಎಲ್ಲೆಲ್ಲಿ ಎನೇನು ಸಮಸ್ಯೆಯಾಗುತ್ತಿದೆ ಎಂದು ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ಬಳಿಕ ಇಲ್ಲಿಯ ಅವಾಂತರಗಳನ್ನು ಸರಿಪಡಿಸಲು ಸ್ವಲ್ಪ ಸಮಯ ಕೇಳಿದರು. ಅದಕ್ಕೆ ಒಪ್ಪದ ಕಾಲೋನಿ ವಾಸಿಗಳು ರೇಗಾಡಿದರು. ಕೊನೆಗೂ ಸಮಾದಾನಪಡಿಸಿದ ಪೌರಾಯುಕ್ತರು ಒಂದು ವಾರದೊಳಗೆ ದುರಸ್ತಿ ಮಾಡಿಸುವ ಬರವಸೆ ನೀಡಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಆರ್.ಮಟಮಪ್ಪ, ಪಟೇಲ್ ನಾರಾಯಣಸ್ವಾಮಿ, ಕೃಷ್ಣಪ್ಪ, ಚಂದ್ರಶೇಖರ್, ಐರನ್ ಮಂಜಮ್ಮ, ಜೈ ಕಾಂತಮ್ಮ, ಸೋಮಶೇಖರ್, ರಮೇಶ್, ಚಿಕ್ಕ ಬೈರಪ್ಪ, ಅಂಜನಮ್ಮ,ವಿನೋದ್, ನವೀನ್, ಮತ್ತಿತರರು ಇದ್ದರು.