ಇಲ್ಲಿಯ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಗೆ ಮಂಗಳವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಬ್ಬೇಘಟ್ಟದ ಡಿ.ಕೆ.ಉಗ್ರೇಗೌಡ ಉಪಾಧ್ಯಕ್ಷರಾಗಿ ಮಲ್ಲಾಘಟ್ಟದ ಪ್ರೇಮಕುಮಾರಿ ಹುಚ್ಚೇಗೌಡ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇಲ್ಲಿಯ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಗೆ ಮಂಗಳವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಬ್ಬೇಘಟ್ಟದ ಡಿ.ಕೆ.ಉಗ್ರೇಗೌಡ ಉಪಾಧ್ಯಕ್ಷರಾಗಿ ಮಲ್ಲಾಘಟ್ಟದ ಪ್ರೇಮಕುಮಾರಿ ಹುಚ್ಚೇಗೌಡ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಡಿ.ಕೆ.ಉಗ್ರೇಗೌಡ ಮಾತನಾಡಿ, ಈಗ ಸರ್ಕಾರದಿಂದ 7 ಕೋಟಿ ಅನುದಾನ ದೊರೆತಿದೆ. ಈಗಾಗಲೇ 3 ಕೋಟಿ ರುಗಳನ್ನು ರೈತರಿಗೆ ಸಾಲವಾಗಿ ನೀಡಲಾಗಿದೆ. ಉಳಿದ 4 ಕೋಟಿ ರುಗಳನ್ನು ಎಲ್ಲಾ ನಿರ್ದೇಶಕರ ಸಹಕಾರ ಪಡೆದು, ಪಕ್ಷಾತೀತವಾಗಿ ಅಗತ್ಯವಿರುವ ರೈತರಿಗೆ ವಿತರಿಸಲಾಗುವುದು. ತಮ್ಮ ಸಹಕಾರ ಸಂಘದ ಹಳೇ ಕಟ್ಟಡ ತೆರವುಗೊಳಿಸಿರುವ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ಕೆಲವು ತಾಂತ್ರಿಕ ತೊಂದರೆಗಳು ಇದ್ದವು. ಈಗ ಎಲ್ಲವೂ ಪರಿಹಾರಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾದ ಷಡಕ್ಷರಿ ಹಾಗೂ ಮಂತ್ರಿ ಮಹೋದಯರನ್ನು ಕರೆಸಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಲು ಸಹಕರಿಸಿದ ನಿರ್ದೇಶಕರು, ಮತ್ತು ಎಲ್ಲಾ ಸಹಕಾರಿ ಬಂಧುಗಳಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು. ನೂತನ ಅಧ್ಯಕ್ಷ ಡಿ.ಕೆ.ಉಗ್ರೇಗೌಡ ಮತ್ತು ಉಪಾಧ್ಯಕ್ಷೆ ಪ್ರೇಮಕುಮಾರಿ ಹುಚ್ಚೇಗೌಡರನ್ನು ಎಲ್ಲಾ ನಿರ್ದೇಶಕರು, ತಾಲೂಕು ಸರ್ಕಾರಿ ಪಡಿತರ ಸಂಘಗಳ ಅಧ್ಯಕ್ಷ ಕಡೆಹಳ್ಳಿ ರಾಮಚಂದ್ರು, ಹುಲಿಕಲ್ ನ ಎಚ್.ಬಿ.ಜಗದೀಶ್‌, ಮುಖಂಡರಾದ ಮಾಚೇನಹಳ್ಳಿ ರಾಮಣ್ಣ, ಕಾಂತರಾಜು, ಮಂಜೇಗೌಡ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.