ಸಾರಾಂಶ
ಚಿತ್ರಕ್ಕೆ ಯುಐ ಎಂದು ಟೈಟಲ್ ನೀಡಲಾಗಿದ್ದು, ಬಹಳಷ್ಟು ಸಸ್ಪೇನ್ಸ್ ಚಿತ್ರದಲ್ಲಿದೆ. ಪ್ರತಿಯೊಬ್ಬರು ಚಿತ್ರ ನೋಡಿ, ಅವರೇ ಅದರ ಅರ್ಥ ಹೇಳಬೇಕು. ಬಹುತೇಕ ಎಲ್ಲ ಚಿತ್ರದಲ್ಲಿ ಹೀರೋ ಮತ್ತು ಹೀರೋಯಿಸಂ ಇರುತ್ತದೆ. ಆದರೆ, ಈ ಚಿತ್ರದಲ್ಲಿ ನಮ್ಮ ಪ್ರೇಕ್ಷಕರೇ ಹೀರೋಗಳಾಗಿದ್ದಾರೆ.
ಹುಬ್ಬಳ್ಳಿ:
ಕನ್ನಡಿಗರ ಬಹುನಿರೀಕ್ಷಿತ ಯುಐ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಡಿ. 20ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ ಎಂದು ನಟ ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು.ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಜಿ. ಮನೋಹರ್ ಹಾಗೂ ಶ್ರೀಕಾಂತ ಕೆ.ಪಿ. ಚಿತ್ರವನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಕನ್ನಡ, ಹಿಂಡಿ, ತೆಲಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದರು.
ಚಿತ್ರಕ್ಕೆ ಯುಐ ಎಂದು ಟೈಟಲ್ ನೀಡಲಾಗಿದ್ದು, ಬಹಳಷ್ಟು ಸಸ್ಪೇನ್ಸ್ ಚಿತ್ರದಲ್ಲಿದೆ. ಪ್ರತಿಯೊಬ್ಬರು ಚಿತ್ರ ನೋಡಿ, ಅವರೇ ಅದರ ಅರ್ಥ ಹೇಳಬೇಕು. ಬಹುತೇಕ ಎಲ್ಲ ಚಿತ್ರದಲ್ಲಿ ಹೀರೋ ಮತ್ತು ಹೀರೋಯಿಸಂ ಇರುತ್ತದೆ. ಆದರೆ, ಈ ಚಿತ್ರದಲ್ಲಿ ನಮ್ಮ ಪ್ರೇಕ್ಷಕರೇ ಹೀರೋಗಳಾಗಿದ್ದಾರೆ. ಎಲ್ಲರೂ ಚಿತ್ರ ನೋಡಿ ವಿಜೃಂಭಣೆ ಮಾಡುವುದೇ ನನಗೆ ಖುಷಿಯ ವಿಷಯ. ನೀವು ಚಿತ್ರಮಂದಿರಕ್ಕೆ ಬರಲಿಲ್ಲ ಅಂದರೆ, ನಿಮಗೆ ಮತ್ತು ನಮಗೆ ಇಬ್ಬರಿಗೂ ಲಾಸ್ ಆಗುವುದು ನಿಶ್ಚಿತ ಎಂದರು.ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ನವೀನ ಮಾತನಾಡಿ, ಉಪೇಂದ್ರ ಅವರು 9 ವರ್ಷ ನಂತರ ನಿರ್ದೇಶನ ಮಾಡಿದ ಚಿತ್ರ ಇದಾಗಿದೆ. ಅತ್ಯುತ್ತಮ ಕಥಾ ಹಂದರ ಹೊಂದಿದ್ದು, ಪ್ರತಿಯೊಬ್ಬರು ಚಿತ್ರದ ವೀಕ್ಷಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೇಣುಗೋಪಾಲ, ಶಿವಾನಂದ ಮುತ್ತಣ್ಣವರ, ಡಾ. ವಿಜಯಕುಮಾರ ಅಪ್ಪಾಜಿ ಸೇರಿದಂತೆ ಹಲವರಿದ್ದರು.