ಬೆಳ್ತಂಗಡಿ: ಬ್ಯೂಟೀಪಾರ್ಲರ್ ವೃತ್ತಿಯಲ್ಲಿ ಪ್ರತಿಯೊಬ್ಬರೂ ಸೃಜನಶೀಲತೆ ಅಳವಡಿಸಿಕೊಂಡರೆ ಬೆಳವಣಿಗೆ ಹೊಂದಲು ಅನುಕೂಲ. ಸಮಯಪಾಲನೆ, ಶಿಸ್ತು ಜೊತೆಗೆ ಇರಲಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ‌ ಮಾಧ್ಯಮ ( ಕೇಂದ್ರೀಯ ಪಠ್ಯ), ಉಜಿರೆ ಮುಖ್ಯೋಪಾಧ್ಯಾಯ ಮನಮೋಹನ್ ನಾಯಕ್ ಹೇಳಿದ್ದಾರೆ.ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ 35 ದಿನಗಳ ಕಾಲ‌ ನಡೆದ ವಸತಿಯುತ ಮಹಿಳಾ ಬ್ಯೂಟೀಪಾರ್ಲರ್ ನಿರ್ವಹಣೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನೀಲ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಅತಿಥಿ ಉಪನ್ಯಾಸಕಿ ಮಾಧವಿ.‌ಎಂ. ರೈ ಇದ್ದರು. ಶೈಲಜಾ ತರಬೇತಿ ಅನುಭವ ಹಂಚಿಕೊಂಡರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ್ ಕೆ. ಜೈನ್ ವಂದಿಸಿದರು.