ಕಳೆದ ಮಾರ್ಚ್ ತಿಂಗಳಲ್ಲಿ ಮಾದರಿಯಾಗಿ ನೆರವೇರಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ ಹಾಗು ನೂತನ ಬ್ರಹ್ಮರಥ ಸಮರ್ಪಣಾ ಸಮಾರಂಭದ ಸಂಸ್ಮರಣೆಯ ದಾಖಲಾತಿಗಾಗಿ ಸ್ಮರಣ ಸಂಚಿಕೆಯೊಂದನ್ನು ಹೊರತರಲು ನಿರ್ಧರಿಸಿ ಡಾ.ಶ್ರೀಧರ ಭಟ್ ನೇತೃತ್ವದಲ್ಲಿ ವಿವಿಧ ಸಮಿತಿಗಳ ಸಂಚಾಲಕರನ್ನೊಳಗೊಂಡ ಸ್ಮರಣ ಸಂಚಿಕೆ ಸಮಿತಿಯನ್ನು ರಚಿಸಲಾಗಿದೆ.
ಬೆಳ್ತಂಗಡಿ: ಕಳೆದ ಮಾರ್ಚ್ ತಿಂಗಳಲ್ಲಿ ಮಾದರಿಯಾಗಿ ನೆರವೇರಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ ಹಾಗು ನೂತನ ಬ್ರಹ್ಮರಥ ಸಮರ್ಪಣಾ ಸಮಾರಂಭದ ಸಂಸ್ಮರಣೆಯ ದಾಖಲಾತಿಗಾಗಿ ಸ್ಮರಣ ಸಂಚಿಕೆಯೊಂದನ್ನು ಹೊರತರಲು ನಿರ್ಧರಿಸಿ ಡಾ.ಶ್ರೀಧರ ಭಟ್ ನೇತೃತ್ವದಲ್ಲಿ ವಿವಿಧ ಸಮಿತಿಗಳ ಸಂಚಾಲಕರನ್ನೊಳಗೊಂಡ ಸ್ಮರಣ ಸಂಚಿಕೆ ಸಮಿತಿಯನ್ನು ರಚಿಸಲಾಗಿದೆ.
ಬ್ರಹ್ಮಕಲಶೋತ್ಸವದ ಧಾರ್ಮಿಕ, ವೈದಿಕ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಮರಣೀಯ ನೆನಪುಗಳನ್ನು ದಾಖಲಿಸುವ ಪ್ರಯತ್ನವಾಗಿ ಸ್ಮರಣಸಂಚಿಕೆಯಲ್ಲಿ ವಿಶೇಷ ಅನುಭವಗಳನ್ನು ಕ್ರೋಢೀಕರಿಸಿ ದಾಖಲಾರ್ಹ ಕೃತಿಯಾಗಿ ಹೊರತರುವ ಕುರಿತು ಯೋಚಿಸಲಾಗಿದೆ ಎಂದು ದೇವಸ್ಥಾನದ ಅಂವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.ಸಚಿತ್ರ ಲೇಖನ, ವಿಶೇಷ ವರದಿ ಗಳನ್ನೊಳಗೊಂಡ ಸಂಗ್ರಹಾರ್ಹ ಸ್ಮರಣಸಂಚಿಕೆಯನ್ನು ಮುಂದಿನ ಮಾರ್ಚ್ ನಲ್ಲಿ ನಡೆಯಲಿರುವ ದೇವಸ್ಥಾನದ ಪ್ರತಿಷ್ಠ ವರ್ಧಂತಿ ವೇಳೆ ಬಿಡುಗಡೆಗೊಳಿಸುವ ಸಂಕಲ್ಪ ಹೊಂದಲಾಗಿದೆ. ಪ್ರತಿಯೊಬ್ಬರಲ್ಲು ಬ್ರಹ್ಮಕಲಶೋತ್ಸವದ ಬಗೆಗೆ ವಿಶೇಷ ಅನುಭವ, ಸ್ಮರಣಾರ್ಹ ಘಟನೆಗಳು ಚಿತ್ತಭಿತ್ತಿಯಲ್ಲಿವೆ. ಸ್ಮರಣ ಸಂಚಿಕೆಗೆ ಸೂಕ್ತ ಹೆಸರನ್ನು ಸೂಚಿಸಲು ಅವಕಾಶವಿದೆ. ಸಂಚಿಕೆಯ ಸ್ವರೂಪ, ದಾಖಲೀಕರಣ, ವಿವಿಧ ಮಾಹಿತಿ ಸಂಗ್ರಹ ಕುರಿತು ಸಂಪಾದಕ ಡಾ.ಶ್ರೀಧರ ಭಟ್ ಮಾಹಿತಿ ನೀಡಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಶೇಖರ್ ಟಿ.,ವೇಣುಗೋಪಾಲ್, ರಮೇಶ್ ಮಯ್ಯ, ರಾಮಕೃಷ್ಣ ಮಡಪುಳಿತ್ತಾಯ , ರವೀಂದ್ರ ಶೆಟ್ಟಿ ಸುರಭಿ, ಭರತ್ ಕುಮಾರ್ ,ಶರತ್ ಕುಮಾರ್, ಹಿರಿಯ ಪತ್ರಕರ್ತ ಅಶ್ರಫ್ ಅಲಿ ಕುಞ ಸಂಜೀವ ಶೆಟ್ಟಿ ಕುಂಟಿನಿ, ದಿನೇಶ್ ಕೋಟಿಯಾನ್ , ಸಾಂತೂರು ಶ್ರೀನಿವಾಸ ತಂತ್ರಿ , ಉಷಾ ಶಶಿಧರ್ ಮತ್ತಿತರರಿದ್ದರು.