ಸಾರಾಂಶ
ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ (ಪಿಎಲ್ಡಿ) ಅಧ್ಯಕ್ಷರಾಗಿ ನಾಗನೂರ ಭಾಗದ ನಾಗನೂರ ಗ್ರಾಮದ ಉಮೇಶ ಪಾಟೀಲ ಅವಿರೋಧ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ (ಪಿಎಲ್ಡಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಶುಕ್ರವಾರ ಜರುಗಿತು.ಅವಿರೋಧವಾಗಿ ಆಯ್ಕೆಯಾಗಿದ್ದ ನಾಗನೂರ ಭಾಗದ ನಾಗನೂರ ಗ್ರಾಮದ ಉಮೇಶ ಪಾಟೀಲ ಅಧ್ಯಕ್ಷರಾಗಿ ಹಾಗೂ ಮರಿಕಟ್ಟಿ ಭಾಗದ
ನಾವಲಗಟ್ಟಿ ಗ್ರಾಮದ ಶಿವಾನಂದ ಕಲ್ಲೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಚನ್ನಮ್ಮ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಇವರ ಮಾರ್ಗದರ್ಶನದಲ್ಲಿ ನಡೆಯಿತು.ಅಧ್ಯಕ್ಷ ಉಮೇಶ ಪಾಟೀಲ ಮಾತನಾಡಿ, ಆಡಳಿತ ಮಂಡಳಿಯ ಸಹಕಾರದೊಂದಿಗೆ ರೈತ ಸದಸ್ಯರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಬ್ಯಾಂಕಿನ ನೂತನ ನಿರ್ದೇಶಕರಾದ ಶಂಕರಗೌಡ ಪಾಟೀಲ, ಪರ್ವತಗೌಡ ಪಾಟೀಲ, ಶ್ರೀಶೈಲ ಯಡಳ್ಳಿ, ಶಂಕರಕುಮಾರ ಚಿಟ್ಟಿ, ಯಲ್ಲಪ್ಪ ಕೌಜಲಗಿ, ಅಕ್ಷರ ಆನಿಕಿವಿ, ಜಗದೀಶ ಬಜೇರಿ, ರುದ್ರಗೌಡ ಪಾಟೀಲ, ಮಾಲತಿ ಶಿವನಗೌಡ ಪಾಟೀಲ, ಲಕ್ಷ್ಮಪ್ಪ ಮಾಸ್ತಮರ್ಡಿ, ವಿರೇಶ ಏಕ್ಕೇರಿ, ಆನಂದ ಮೂಗಿ ಕಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ನಿರ್ದೇಶಕ ರಾಜು ಭೈರುಗೋಳ ವ್ಯವಸ್ಥಾಪಕ ಎಂ.ಟಿ. ಗಾಣಿಗೇರ ಸಿಬ್ಬಂದಿ ಇತರರು ಇದ್ದರು.ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಕ್ತರ್ ಚುನಾವಣಾಧಿಕಾರಿಗಳಾಗಿ ಹಾಗೂ ರೇಶ್ಮಾ ಮಕಾನದಾರ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸರ್ಕಾರದ ಯೋಜನೆಗಳನ್ನು ರೈತ ಸದಸ್ಯರಿಗೆ ವ್ಯವಸ್ಥತವಾಗಿ ಮುಟ್ಡಿಸುತ್ತಾ, ತಾಲೂಕು ಮಟ್ಟದ ಬ್ಯಾಂಕಿನ ಪ್ರಗತಿಗೆ ಶ್ರಮಿಸಬೇಕು.
-ಡಾ.ವಿಶ್ವನಾಥ ಪಾಟೀಲ ಮಾಜಿ ಶಾಸಕರು