ಸಾರಾಂಶ
ಗ್ರಾಮದ ಇಬ್ಬರು ರೈತರು ಕಿತ್ತಾಡಿಕೊಂಡು ತಮ್ಮ ಜಮೀನಿಗೆ ಮುಳ್ಳು ತಂತಿ ಬೇಲಿ ಹಾಕಿಕೊಂಡಿದ್ದರಿಂದ ಸ್ಮಶಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಗ್ರಾಮದಲ್ಲಿ ಸತೀಶ್ (42) ಎಂಬ ವ್ಯಕ್ತಿ ಮೃತ ಪಟ್ಟಿದ್ದು, ಸ್ಮಶಾನಕ್ಕೆ ತೆರಳುವ ರಸ್ತೆಗೆ ಬೇಲಿ ಹಾಕಿದ್ದರಿಂದ ಸ್ಮಶಾನಕ್ಕೆ ತೆರಳು ಸಾಧ್ಯವಾಗದೆ ರಸ್ತೆಯಲ್ಲೆ ಮೃತದೇಹವನ್ನು ಸುಟ್ಟು ಅಂತ್ಯ ಸಂಸ್ಕಾರ ಮಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸ್ಮಶಾನಕ್ಕೆ ತೆರಳಲು ಸಾಧ್ಯವಾಗದ ಕಾರಣ ವ್ಯಕ್ತಿಯ ಶವವನ್ನು ರಸ್ತೆ ಮಧ್ಯೆದಲ್ಲೇ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಇಬ್ಬರು ರೈತರು ಕಿತ್ತಾಡಿಕೊಂಡು ತಮ್ಮ ಜಮೀನಿಗೆ ಮುಳ್ಳು ತಂತಿ ಬೇಲಿ ಹಾಕಿಕೊಂಡಿದ್ದರಿಂದ ಸ್ಮಶಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಗ್ರಾಮದಲ್ಲಿ ಸತೀಶ್ (42) ಎಂಬ ವ್ಯಕ್ತಿ ಮೃತ ಪಟ್ಟಿದ್ದು, ಸ್ಮಶಾನಕ್ಕೆ ತೆರಳುವ ರಸ್ತೆಗೆ ಬೇಲಿ ಹಾಕಿದ್ದರಿಂದ ಸ್ಮಶಾನಕ್ಕೆ ತೆರಳು ಸಾಧ್ಯವಾಗದೆ ರಸ್ತೆಯಲ್ಲೆ ಮೃತದೇಹವನ್ನು ಸುಟ್ಟು ಅಂತ್ಯ ಸಂಸ್ಕಾರ ಮಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
ಈ ಹಿಂದಿನಿಂದಲೂ ಇದ್ದ ಸ್ಮಶಾನ ರಸ್ತೆ ತಮಗೆ ಸೇರಿದ್ದು ಎಂದು ಸ್ಮಶಾನ ರಸ್ತೆಗೆ ರೈತ ಅಂದಾನಿಗೌಡ ಬೇಲಿ ಹಾಕಿದ್ದಾರೆ. ನಂತರ ಪಕ್ಕದ ಜಮೀನಿನ ರೈತ ಕೂಡ ಸ್ಮಶಾನಕ್ಕೆ ತೆರಳಲು ಜಾಗ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸ್ಮಶಾನ ಸೇರಿದಂತೆ ಕೆರೆ ಹಾಗೂ ರೈತರ ಜಮೀನಿಗೆ ದಾರಿ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.ಸ್ಮಶಾನ ಜಾಗಕ್ಕೆ ರಸ್ತೆ ಇಲ್ಲದೇ, ಗ್ರಾಮಸ್ಥರು ರಸ್ತೆ ತಡೆದು ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಮಶಾನ ಜಾಗದ ರಸ್ತೆ ಬಿಡಿಸಿ ಕೊಡದಿದ್ದರೆ ಇನ್ನು ಮುಂದೆ ಗ್ರಾಮದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೂ ತಾಲೂಕು ಕಚೇರಿ ಎದುರು ಅಂತ್ಯ ಸಂಸ್ಕಾರ ನಡೆಸುವುದಾಗಿ ಎಚ್ಚರಿಸಿದ್ದಾರೆ.