ಸಾರಾಂಶ
ಐನಾಪುರ ಪಟ್ಟಣ ಪಂಚಾಯತಿಗೆ ಶುಕ್ರವಾರ ನಡೆದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಸರೋಜನಿ ಗಾಣಿಗೇರ, ಉಪಾಧ್ಯಕ್ಷೆಯಾಗಿ ರತ್ನವ್ವ ಮಾದರ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಐನಾಪುರ ಪಟ್ಟಣ ಪಂಚಾಯತಿಗೆ ಶುಕ್ರವಾರ ನಡೆದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಸರೋಜನಿ ಗಾಣಿಗೇರ, ಉಪಾಧ್ಯಕ್ಷೆಯಾಗಿ ರತ್ನವ್ವ ಮಾದರ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಹಿಂದುಳಿದ ಅರ್ವ ಅ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದವು.ಪಪಂನಲ್ಲಿ ಒಟ್ಟು 19 ಸ್ಥಾನಗಳ ಪೈಕಿ 13 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಬಿಜೆಪಿಯ 6 ಸದಸ್ಯರು ಇದ್ದಾರೆ.
ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸರೋಜನಿ ಸುರೇಶ ಗಾಣಿಗೇರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರತ್ನವ್ವ ಸದಾಶಿವ ಮಾದರ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ತಹಸೀಲ್ದಾರ್ ರಾಜೇಶ ಬುರ್ಲಿ ಅವಿರೋಧ ಆಯ್ಕೆ ಘೋಷಿಸಿದರು.ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರು ಹಾಗೂ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಚನೂರೆ, ಸುರೇಶ ಗಾಣಿಗೇರ ಸೇರಿದಂತೆ ಅನೇಕರು ಅಭಿನಂದಿಸಿದರು.
ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಬಳಿಕ ಮಾತನಾಡಿದ ಮುಖಂಡರಾದ ಅರುಣ ಗಾಣಿಗೇರ, ಹಾಗೂ ಸಂಜಯ ಕುಚನೂರೆ, ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಹಾಗೂ ಶಾಸಕರಿದ್ದಾರೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ರಾಜ್ಯದಲ್ಲಿ ಮಾದರಿ ಪಪಂ ಮಾಡಲು ಎಲ್ಲರೂ ಸೇರಿ ಪ್ರಯತ್ನಿಸುವುದಾಗಿ ಹೇಳಿದರು.
ಪಪಂ ಸದಸ್ಯರಾದ ಕುಮಾರ ಜಯಕರ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಬಿರಡಿ, ರಾಜು ಹರಳೆ, ಧರೆಪ್ಪಾ ಹರಳೆ, ಜಯಶ್ರೀ ಹರಳೆ, ಕಸ್ತೂರಿ ಮಡಿವಾಳರ, ಪ್ರಕಾಶ ನಿಡೋಣಿ, ರತ್ನವ್ವಾ ಮಾದರ,ಲಕ್ಕವ್ವಾ ಅಡಿಸೇರಿ ಹಾಗೂ ಮುಖಂಡರಾದ ಸುರೇಶ ಗಾಣಿಗೇರ, ಸುರೇಶ ಅಡಿಸೇರಿ, ಸುಭಾಸಗೌಡ ಪಾಟೀಲ, ಚಮನರಾವ್ ಪಾಟೀಲ, ಅಪ್ಪಾಸಾಬ ಚೌಗುಲಾ, ಸತೀಶ ಗಾಣಿಗೇರ, ಪ್ರಕಾಶ ಗಾಣಿಗೇರ, ಅಮೀತ ಗಾಣಿಗೇರ, ಗುರುರಾಜ ಮಡಿವಾಳರ, ಡಾ.ಅರವಿಂದರಾವ್ ಕಾರ್ಚಿ, ಸುನೀಲ ಅವಟಿ, ರಾಜು ಮದನೆ, ಸಂಜಯ ಸಲಗರೆ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.