ಮೋದಿಯಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಳ

| Published : Apr 25 2024, 01:08 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುನಗುಂದ: ಉದ್ಯೋಗ ಹೆಚ್ಚಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ರೈಲು, ಬ್ಯಾಂಕ್, ವಿಮಾನಯಾನ ಹೀಗೆ ಅನೇಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ ಪರಿಣಾಮ ಪ್ರಧಾನಿ ಮೋದಿಯವರಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಉದ್ಯೋಗ ಹೆಚ್ಚಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ರೈಲು, ಬ್ಯಾಂಕ್, ವಿಮಾನಯಾನ ಹೀಗೆ ಅನೇಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ ಪರಿಣಾಮ ಪ್ರಧಾನಿ ಮೋದಿಯವರಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಹುನಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ, ಆದರೆ, ಇನ್ನೊಂದು ಬಾರಿ ಮೊದಿಯನ್ನು ಪ್ರಧಾನಿ ಮಾಡಿದರೆ ಸಂವಿಧಾನ ಬದಲಾವಣೆ, ಪ್ರಜೆಗಳ ಮೇಲೆ ಸಾಲದ ಹೊರೆ, ರೈತರು, ಮಹಿಳೆಯರು ಹಾಗೂ ನಿರುದ್ಯೋಗ ಹೆಚ್ಚಾಗಿ ಯುವಕರು ಕಂಗಾಲಾಗುವ ಸಂದಿಗ್ಧ ಸ್ಥಿತಿಗೆ ತಲುಪುತ್ತೇವೆ ಎಂದು ತಿಳಿಸಿದರು.

ಹುನಗುಂದ ಕ್ಷೇತ್ರಕ್ಕೆ ಗದ್ದಿಗೌಡರ ಕೊಡುಗೆ ಏನು?:ಆಲಮಟ್ಟಿ-ಕೊಪ್ಪಳ ರೈಲ್ವೆ ಆಗಬೇಕಿತ್ತು. ಕುಡಚಿ-ರಾಯಚೂರ 20 ವರ್ಷಗಳ ಹಿಂದೆ ಸಂಸದರಾಗಿದ್ದ ಸಿದ್ದು ನ್ಯಾಮಗೌಡರು ಅಡಿಗಲ್ಲು ಹಾಕಿದ್ದರು. 20 ವರ್ಷ ಪಿ.ಸಿ.ಗದ್ದಿಗೌಡರ ಸಂಸದರಾಗಿದ್ದರು. ಆ ಯೋಜನೆ ಅಲ್ಲಿಯೇ ಬಿದ್ದಿದೆ. ಅದು ಇದುವರೆಗೂ 10 ಕಿ.ಮೀ ಆಗಿಲ್ಲ. ತಾಲೂಕಿಗೆ ರೈಲ್ವೆ ಆಗಬೇಕು ಎಂದು ಅನೇಕರು ಹೋರಾಟ ಮಾಡಿದರು. ಇದೀಗ ಪಕ್ಕದ ಕುಷ್ಟಗಿಗೆ ರೈಲ್ವೆ ಬಂದಿದೆ. ಕುಷ್ಟಗಿಯಿಂದ ಇಳ‍ಕಲ್ಲ ಬಂದು ಮುದಗಲ್ಲಗೆ ಹೋಗಿದೆ. ಅದನ್ನು ಹುನಗುಂದವರೆಗೂ ತರುವ ಕೆಲಸವನ್ನು ಸಂಸದರು ಮಾಡಬೇಕಿತ್ತು. ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಇತ್ತು. 20 ವರ್ಷ ದೆಹಲಿಗೆ ಹೋಗುವುದು ಊಟ ಮಾಡುವುದು ಮಲಗುವುದು ಮಾತ್ರ ಆಗಿದೆ ಎಂದು ವ್ಯಂಗ್ಯವಾಡಿದರು.

ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಜಿಲ್ಲೆ ಬಹಳಷ್ಟು ಹಿಂದುಳಿದಿದ್ದು, ಅಭಿವೃದ್ಧಿ ಯೋಜನೆಗಳಿಂದ ವಂಚಿತಗೊಂಡಿದೆ. ರೈಲ್ವೆ, ನೀರಾವರಿ ಸೇರಿ ಅನೇಕ ಸೌಲಭ್ಯವನ್ನು ಪಡೆದು ಹೆಚ್ಚಿನ ಅಭಿವೃದ್ಧಿ ಆಗಬಹುದಿತ್ತು. ಇದಕ್ಕೆಲ್ಲ ಕೈಕಟ್ಟಿ ಕುಳಿತ ಬಿಜೆಪಿ ಅಭ್ಯರ್ಥಿಗೆ ಈಗ ಮತ ನೀಡದೆ, ಬಾಗಲಕೋಟೆ ಕ್ಷೇತ್ರದ ಮಗಳಾದ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ದೀಪಾ ಸುಂಕದ, ಸಂತೃಪ್ತಿ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಪರ್ವೇಜ್‌ ಖಾಜಿ, ಶರಣು ಬೆಲ್ಲದ, ಮೈನು ಧನ್ನೂರ, ಮಹಾಂತೇಶ ಅವಾರಿ, ಗುರುಲಿಂಗಪ್ಪ ಇಂಗಳಗೇರಿ, ರವಿ ಹುಚನೂರ, ಸಂಜೀವ ಜೋಷಿ, ವೀರಣಗೌಡ ಮೇಟಿ, ಮೆಹಬೂಬ ಸರಕಾವಸ, ಸಂಗಣ್ಣ ಗಂಜೀಹಾಳ, ಗಂಗಮ್ಮ ಎಮ್ಮಿ, ಸಂಗಪ್ಪ ಹೂಲಗೇರಿ, ಮಹಾಲಿಂಗಯ್ಯ ಹಿರೇಮಠ, ಜೈನಸಾಬ ಹಗೇದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.