ಸಾರಾಂಶ
ಬೇಲೂರು ಶ್ರೀ ಚನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ್ದು ಯುನೆಸ್ಕೋ ನಿರ್ದೇಶಕರಾದ ಪ್ಯಾರಿಸ್‌ನ ಡಾ. ಲಜಾರೇ ಪ್ಲೊನಡ್ಯೂ ಆಸಾಮೊ ಹಾಗೂ ಎಲಿಜಬೆತ್ ಕ್ರಿಸ್ಟೇನ್ ಗ್ಯೂಮೊಸ್ ಭೇಟಿ ನೀಡಿ ಮಾಹಿತಿ ಪಡೆದರು.
ಬೇಲೂರು : ಬೇಲೂರು ಶ್ರೀ ಚನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ್ದು ಯುನೆಸ್ಕೋ ನಿರ್ದೇಶಕರಾದ ಪ್ಯಾರಿಸ್‌ನ ಡಾ. ಲಜಾರೇ ಪ್ಲೊನಡ್ಯೂ ಆಸಾಮೊ ಹಾಗೂ ಎಲಿಜಬೆತ್ ಕ್ರಿಸ್ಟೇನ್ ಗ್ಯೂಮೊಸ್ ಭೇಟಿ ನೀಡಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಇದೊಂದು ವಿಶಿಷ್ಟ ಶಿಲ್ಪಕಲೆಯಯನ್ನು ಹೊಂದಿರುವ ದೇಗುಲ ಅತ್ಯತ್ಭುತವಾದ ಕಲೆ, ನಾಟ್ಯ ಸೇರಿದಂತೆ ಎಲ್ಲಾ ಕಲಾಕೃತಿಗಳಿಂದ ವಿಶ್ವದ ಹಲವು ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ೨೦೨೩ರಲ್ಲಿ ಯುನೆಸ್ಕೊ ವಿಶ್ವಪಾರಂಪರಿಕ ಪಟ್ಟಿಗೆ ಹೊಯ್ಸಳೇಶ್ವರ ದೇವಾಲಯವಾದ ಬೇಲೂರು ಮತ್ತು ಹಳೆಬೀಡನ್ನು ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ವಿಶ್ವ ಮಾನ್ಯತಾ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಪ್ರತಿನಿತ್ಯ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಮಾಹಿತಿಯನ್ನು ನೀಡಲು ಇಲ್ಲಿಗೆ ಬಂದಿದ್ದು ಮೊದಲ ಹಂತದಲ್ಲಿ ಪರಿಶೀಲನೆ ಮಾಡಿದ್ದು ಎರಡನೇ ಹಂತದಲ್ಲಿ ಸಂಪೂರ್ಣ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುವುದು. ಇಲ್ಲಿ ಯಾವ ರೀತಿ ತಾಣವನ್ನಾಗಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದೇವೆ ಎಂದರು.
ಯುನೆಸ್ಕೋ ಉಪ ಆಯುಕ್ತೆ ಜ್ಯೋತಿ ಹೊಸ ಅಗ್ರಹಾರ ಮಾತನಾಡಿ, ವಿಶ್ವಮಾನ್ಯತೆ ಪಟ್ಟಿಯ ೪೬ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೊದಲು ಇಲ್ಲಿಗೆ ಆಗಮಿಸಿದ್ದು ಬೇಲೂರು ಹಳೆಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಸ್ಥಳೀಯ ಅಧಿಕಾರಿಗಳ ಹಾಗೂ ದೇಗುಲಗಳ ಸಂಕ್ಷಿಪ್ತ ಮಾಹಿತಿ ದೇವಾಲಯದ ಅಕ್ಕಪಕ್ಕ ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಮಾಹಿತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ದೇವಾಲಯಕ್ಕೆ ಮತ್ತು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುವುದರ ಬಗ್ಗೆ ಆಯುಕ್ತರಿಗೆ ತಹಸೀಲ್ದಾರ್ ಎಂ ಮಮತಾ ಹಾಗೂ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಾ ನಾರಾಯಣಸ್ವಾಮಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಗೌತಮ್, ನಾಗರಾಜ್, ಜ್ಞಾನೇಶ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಯೊಗೇಶ್, ತಾಪಂ ಇಒ ಸತೀಶ್, ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ, ಪಿಎಸ್ಐ ಪ್ರವೀಣ್ ಕುಮಾರ್, ಡಾ.ಶ್ರೀವತ್ಸ ಎಸ್ ವಟಿ, ಆರೊಗ್ಯಾಧಿಕಾರಿ ಲೋಹಿತ್, ನಾಗರಾಜ್ ಹಾಜರಿದ್ದರು.