ರೈತ ಮುಖಂಡ ದಲೈವಾಲ ಬಂಧನ ಖಂಡಿಸಿ ಪ್ರತಿಭಟನೆ

| Published : Nov 27 2024, 01:04 AM IST

ರೈತ ಮುಖಂಡ ದಲೈವಾಲ ಬಂಧನ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಉತ್ಪನ್ನಗಳಿಗೆ ಎಂಎಸ್‌ ಪಿ ಕಾನೂನು ಖಾತ್ರಿ ಕಾಯ್ದೆ ಜಾರಿ ಮಾಡದೆ ಮುಖಂಡರನ್ನು ಬಂಧಿಸಿರುವುದು ಸರ್ಕಾರದ ದಬ್ಬಾಳಿಕೆ

ಫೋಟೋ- 26ಎಂವೈಎಸ್12

----ಕನ್ನಡಪ್ರಭ ವಾರ್ತೆ ಮೈಸೂರು

ರೈತ ಮುಖಂಡ ಜಗಜಿತ್‌ ಸಿಂಗ್‌ ದಲೈವಾಲ ಬಂಧನ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳಗಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು

ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದ ಜಗಜಿತ್ ಸಿಂಗ್ ದಲೆವಾಲ ಅವರನ್ನು ಪೊಲೀಸರ ಸರ್ಪಗಾವಲಿನಲ್ಲಿ ಬಂಧಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಎಂಎಸ್‌ ಪಿ ಕಾನೂನು ಖಾತ್ರಿ ಕಾಯ್ದೆ ಜಾರಿ ಮಾಡದೆ ಮುಖಂಡರನ್ನು ಬಂಧಿಸಿರುವುದು ಸರ್ಕಾರದ ದಬ್ಬಾಳಿಕೆ ವರ್ತನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ದವಸ ಧಾನ್ಯಗಳನ್ನು ಬೇರೆ ದೇಶಗಳಿಗೆ ಕೊಡುತ್ತಾರೆ. ಆದರೆ, ಕನಿಷ್ಟ ಬೆಂಬಲ ಬೆಲೆ ನೀಡುವುದಿಲ್ಲ. ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಪ್ರಧಾನಿ ಮೋದಿ ಚುನಾವಣೆ ಸಮಯದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ, ಬೆಳೆಗಳಿಗೆ ಎಂಎಸ್‌ ಪಿ, ಸ್ವಾಮಿನಾಥನ್ ಕಾಯ್ದೆ ಸೇರಿದಂತೆ ಎಲ್ಲವನ್ನೂ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಚುನಾವಣಾ ಭಾಷಣಗಳಲ್ಲಿ ವೋಟ್ ಪಡೆಯುದಕ್ಕೆ ಸುಳ್ಳು ಭಾಷಣ ಮಾಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಯಾವ ಕಾಯ್ದೆಯನ್ನೂ ಜಾರಿಗೆ ತರುವುದಿಲ್ಲ. ಈ ರೀತಿ ಮೋಸ ಮಾಡುವುದನ್ನು ಬಿಟ್ಟು ನುಡಿದಂತೆ ನಡೆಯಿರಿ ಎಂದು ಅವರು ಒತ್ತಾಯಿಸಿದರು.

ಕೂಡಲೇ ಎಂಎಸ್‌ ಪಿ ಕಾಯ್ದೆ ಜಾರಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ರೈತ ಮುಖಂಡರಾದ ಕಿರಗಸೂರು ಶಂಕರ್, ಬರಡನಪುರ ನಾಗರಾಜು, ರೂಪಾ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಸಾತಗಳ್ಳಿ ಬಸವರಾಜ್, ವರಕೂಡು ನಾಗೇಶ್, ಕಾಟೂರು ಮಹದೇವಸ್ವಾಮಿ, ನಾಗೇಶ್, ಕಿರಗಸೂರು ಪ್ರಸಾದನಾಯಕ್, ಪರಶಿವಮೂರ್ತಿ, ಗೌರಿಶಂಕರ್, ಕೋಟೆ ಸುನೀಲ್, ವಾಜಮಂಗಲ ಮಹದೇವನಾಯಕ್, ಕುರುಬೂರು ಗುರುಸ್ವಾಮಿ, ಆದಿಬೆಟ್ಟಹಳ್ಳಿ ರವಿ, ಕುಮಾರ್, ರಾಜೇಶ್ ಮೊದಲಾದವರು ಇದ್ದರು.