ಸೇವೆಯಲ್ಲಿನ ತನ್ಮಯತೆ ಯಾವುದೇ ಪ್ರಶಸ್ತಿಗಿಂತ ಮಿಗಿಲು: ಎ.ಐ. ಬಾಗೇವಾಡಿ

| Published : Jun 03 2024, 12:31 AM IST

ಸೇವೆಯಲ್ಲಿನ ತನ್ಮಯತೆ ಯಾವುದೇ ಪ್ರಶಸ್ತಿಗಿಂತ ಮಿಗಿಲು: ಎ.ಐ. ಬಾಗೇವಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ನಿವೃತ್ತಯಾದ ಮುಖ್ಯಶಿಕ್ಷಕಿ ಜೆ.ಎಂ.ಜಮಾದಾರ ಅವರನ್ನು ಸಿಬ್ಬಂದಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಾತೃ ಹೃದಯದ ದೇವತೆಯಾದ ಮುಖ್ಯ ಶಿಕ್ಷಕಿಯ ನಿವೃತ್ತಿ ನಮಗೆ ನೋವು ತಂದಿದೆ ಎಂದು ಸಹ ಶಿಕ್ಷಕರು ಕಣ್ಣೀರು ಹಾಕಿದ ಸಂದರ್ಭ ನಿಜಕ್ಕೂ ಅಭಿಮಾನ ಮತ್ತು ಸಂತಸ ಮೂಡಿಸಿದೆ. ಮುಖ್ಯಶಿಕ್ಷಕರೊಬ್ಬರು ಸಹ ಶಿಕ್ಷಕರಿಂದ ಹೀಗೆ ಹೇಳಿಸಿಕೊಳ್ಳುವುದು ಹೆಮ್ಮೆ ಮಾತ್ರವಲ್ಲ, ಅದೊಂದು ದೊಡ್ಡ ಪ್ರಶಸ್ತಿಗೆ ಸಮ ಎಂದು ಉರ್ದು ಶಾಲೆಗಳ ಸಿಆರ್‌ಪಿ ಎ.ಐ. ಬಾಗೇವಾಡಿ ಹೇಳಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜೆ.ಎಂ. ಜಮಾದಾರ ಅವರ ಸೇವಾ ನಿವೃತ್ತಿ ನಿಮಿತ್ತ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಚರರೊಂದಿಗೆ ಉತ್ತಮ ಸಹಕಾರದೊಂದಿಗೆ ಇಲಾಖೆ ಕಾರ್ಯಗಳನ್ನು ಚೆನ್ನಾಗಿ ನಿರ್ವಹಿಸುವ ಮೂಲಕ ಜಮಾದಾರ ಅವರು ಆದರ್ಶ ವ್ಯಕ್ತಿಯಾಗಿದ್ದಾರೆ. ಎಷ್ಟು ವರ್ಷ ಸೇವೆ ಮಾಡಿದ್ದಾರೆ ಎಂಬುದು ಮುಖ್ಯವಲ್ಲ, ಹೇಗೆ ಸೇವೆ ಸಲ್ಲಿಸಿದ್ದಾರೆ ಎಂಬುವುದು ಮುಖ್ಯ. ಈ ನಿಟ್ಟಿನಲ್ಲಿ ಜಮಾದಾರ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.ಶಿಕ್ಷಕ ಎಸ್.ಎಸ್. ಯಡವಣ್ಣವರ ಮಾತನಾಡಿ, ಜಮಾದಾರ ಅವರೊಬ್ಬ ಉತ್ತಮ ಮಾರ್ಗದರ್ಶಿ ಮಾತೃವಲ್ಲ, ಎಲ್ಲರನ್ನು ಸಮಾಧಾನದಿಂದ ಮುನ್ನಡೆಸಿಕೊಂಡು ಸಾಗುವ ಮಾತೃ ಹೃದಯದವರಾಗಿದ್ದರು. ಅವರ ನಿವೃತ್ತಿಯು ನಮಗೆಲ್ಲ ನೋವು ತಂದಿದೆ ಎಂದರು.

ಸೇವಾ ನಿವೃತ್ತಿ ಹೊಂದಿದ ಜೆ.ಎಂ. ಜಮಾದಾರ ಅವರಿಗೆ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಸನ್ಮಾನಿಸಿ, ಗೌರವಿಸಿದರು. ಎಸ್‌ಡಿಎಂಸಿ ಸದಸ್ಯ ಜೆ.ಜಿ. ಅತ್ತಾರ ಅಧ್ಯಕ್ಷತೆ ವಹಿಸಿದ್ದರು. ಎ.ಎಚ್. ಬುರ್ಶಿ, ಎಸ್.ಎಂ. ನದಾಫ್‌, ವೈ.ಆರ್. ಪಟೇಲ, ಎಸ್.ಎ. ಗದ್ಯಾಳ, ಜ್ಯೋತಿ ಹಿರೇಮಠ, ಅನ್ನಪೂರ್ಣ ಮೂಕೈಗೋಳ ಸೇರಿದಂತೆ ಅಡುಗೆ ಸಿಬ್ಬಂದಿ ಇದ್ದರು. ಶಿಕ್ಷಕ ಎಸ್.ಎಂ. ನದಾಫ ಸ್ವಾಗತಿಸಿ, ನಿರ್ವಹಿಸಿದರು.