ಸಾರಾಂಶ
ರಾಮನಗರ: ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಸರ್ಕಾರಿ ಶಾಲೆಗಳಲ್ಲಿಯೂ ಯೂನಿಟ್ ಟೆಸ್ಟ್ ಪದ್ಧತಿಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಾರಿಗೊಳಿಸಿದೆ.
ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ(ಎಲ್ ಬಿಎ) ಅನುಷ್ಠಾನಗೊಳ್ಳಲಿದೆ. ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.ರಾಜ್ಯದಲ್ಲಿರುವ ಖಾಸಗಿ ಶಾಲೆಗಳಲ್ಲಿ ಪ್ರತಿಯೊಂದು ವಿಷಯದ ಪಠ್ಯಪುಸ್ತಕಗಳಲ್ಲಿನ ಪ್ರತಿ ಪಾಠದ ನಂತರ ಯೂನಿಟ್ ಟೆಸ್ಟ್ (ಘಟಕ ಪರೀಕ್ಷೆ) ಕೊಡುತ್ತಾರೆ. ಪ್ರತಿ ಯೂನಿಟ್ ಟೆಸ್ಟ್ 10 ರಿಂದ 20 ಅಂಕಗಳಿಗೆ ನಡೆಯುತ್ತವೆ. ಹೀಗೆ ನಡೆಯುವ ಯೂನಿಟ್ ಟೆಸ್ಟ್‌ಗಳಿಂದ ಶಿಕ್ಷಕರು ಆ ಪಾಠವನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡಿರುವುದನ್ನು ದೃಢಿಕರಿಸಿಕೊಂಡು ಮುಂದಿನ ಪಾಠಕ್ಕೆ ಹೋಗುವುದು ವಾಡಿಕೆಯಾಗಿದೆ.
ಈಗ ಸರ್ಕಾರದ ನಿಯಮದಂತೆ ಎಲ್ಲಾ ಶಾಲೆಗಳು ವರ್ಷದಲ್ಲಿ ನಾಲ್ಕು ರಚನಾತ್ಮಕ ಮೌಲ್ಯಮಾಪನಗಳು (ಎಫ್.ಎ) ಮತ್ತು ಎರಡು ಸಂಕಲನಾತ್ಮಕ ಮೌಲ್ಯಮಾಪನ (ಎಸ್ಎ) ನಡೆಯುತ್ತಿವೆ. ಇದನ್ನು ಹೊರತುಪಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯೂನಿಟ್ ಟೆಸ್ಟ್‌ಗಳನ್ನು ಅನುಸರಿಸುತ್ತಿದ್ದರು. ಇದು ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ವಿಶ್ಲೇಷಿಸಲು ಸಾಧ್ಯವಾಗುತ್ತಿದೆ.ಪ್ರತಿ ಪಾಠದ ನಂತರ ಪರೀಕ್ಷೆ :
ಇದೀಗ ಸರ್ಕಾರ ತನ್ನ ಶಾಲೆಗಳಲ್ಲೂ ಇದೇ ಮಾದರಿಯಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲು ಮುಂದಾಗಿದೆ. ಪಾಠ ಆಧಾರಿತ ಮೌಲ್ಯಾಂಕನವನ್ನು (ಲೆಸನ್ ಬೇಸ್ಡ್ ಅಸೆಸ್ಮೆಂಟ್) 1 ರಿಂದ 10ನೇ ತರಗತಿಗಳಿಗೆ ಅಳವಡಿಸಿಕೊಳುತ್ತಿದೆ. ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕಸಿರಿಸಲು ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ ನಡೆಸಲು ಉದ್ದೇಶಿಸಿದೆ.ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಮೂಲಕ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ದಪಡಿಸಿದೆ. ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸಲು ಡಿಎಸ್‌ಇಆರ್‌ಟಿಸಿ ಈಗಾಗಲೆ ಸುತ್ತೋಲೆಯನ್ನು ಶಾಲೆಗಳಿಗೆ ರವಾನಿಸಿದೆ.
ಪಾಠ ಆಧಾರಿತ ಮೌಲ್ಯಾಂಕನದ ಮೂಲಕ ಸರ್ಕಾರ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡಗಳನ್ನು ಕಡಿಮೆ ಮಾಡುವುದು, ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಭನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮಥ್ಯವನ್ನು ಹೆಚ್ಚಿಸುವುದು. ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು, ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಊ ಇನ್ಕೂಸ್ಲಿವ್ ಅಸೆಸ್ಮೆಮಟ್ ಗೆ ಪ್ರೇರಣೆ ನೀಡುವುದು ಇವು ವಿದ್ಯಾರ್ಥಿಗಳ ಪ್ರಗತಿಗೆ ಪೂಕರವಾಗಿರಲಿದೆ.ಶಿಕ್ಷಕರ ಮೌಲ್ಯಮಾಪನದ ಸಾಮರ್ಥ್ಯವನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು. ಪ್ರತಿ ಹಂತದ ವಿದ್ಯಾರ್ತಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು. ಪಾಠ ಆಧಾರಿತ ಮೌಲ್ಯಾಂಕ ಚೌಕಟ್ಟು ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾನಕ್ಕೆ (ಸಿಸಿಇ) ಪೂರಕವಾಗಿಸುವುದನ್ನು ಸಹ ಡಿಎಸ್‌ಇಆರ್‌ಟಿಸಿ ಉದ್ದೇಶಿಸಿದೆ.
ಡಿಎಸ್‌ಇಆರ್‌ಟಿಸಿ ಸಿದ್ದಪಡಿಸಿರುವ ಪ್ರಶ್ನೆಕೋಠಿಯಲ್ಲಿ 1ರಿಂದ 7ನೇ ತರಗತಿಗಳಿಗೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ರಚಿಸಿದೆ. 8ರಿಂದ 10ನೇ ತರಗತಿಗಳಿಗೆ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಮಾಧರಿಯಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಬಹು ಆಯ್ಕೆ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ರಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.ಸರ್ಕಾರ ಉದ್ದೇಶಿಸಿರುವ ನೂತನ ಎಲ್.ಬಿ.ಎ ಪದ್ದತಿಯನ್ನು ಅನುಷ್ಠಾನಕ್ಕೆ ತರಲು ಶಾಲಾ ಮುಖ್ಯಶಿಕ್ಷಕರ ಹಂತ, ತಾಲೂಕು ಶಿಕ್ಷಣಾಧಿಕಾರಿಗಳ ಹಂತ ಮತ್ತು ಡಿಡಿಪಿಐ ಹಂತದಲ್ಲಿ ಜವಾಬ್ದಾರಿಗಳನ್ನು ನಿಗದಿ ಪಡಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಕೋಟ್...............ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಯನ ಮುಗಿದ ನಂತರ ಪರೀಕ್ಷೆ ಮಾಡುವುದರಿಂದ ಅರ್ಥೈಸಿಕೊಳ್ಳುವುದು, ಕಲಿಕೆಯ ಗುಣಮಟ್ಟದ ಬಗ್ಗೆ ಖಾತ್ರಿಗೆ ಸಹಕಾರಿಯಾಗಲಿದೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲು ಅನುಕೂಲವಾಗುತ್ತದೆ.
- ಬಸವರಾಜೇಗೌಡ, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂ.ದಕ್ಷಿಣ ಜಿಲ್ಲೆ19ಕೆಆರ್ ಎಂಎನ್ 5.ಜೆಪಿಜಿ
ಸಂಗ್ರಹ ಚಿತ್ರ.