ಸಾರಾಂಶ
ಕ್ರೀಡಾಕೂಟ ಏರ್ಪಡಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟ ಮೂಡಿಸುವ ಕಾರ್ಯ ಮಾಡಿದ್ದಾರೆ.
ಭಟ್ಕಳ: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲ ಮೈದಾನದಲ್ಲಿ ವಿಶ್ವಕರ್ಮ ಗೆಳೆಯರ ಬಳಗದಿಂದ ಏರ್ಪಡಿಸಲಾಗಿದ್ದ ವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಜಾನನ ಎನ್.ಆಚಾರ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿಶ್ವಕರ್ಮ ಗೆಳೆಯರ ಬಳಗದ ಯುವಕರು ಅತ್ಯಂತ ಕ್ರೀಯಾಶೀಲರಾಗಿ ಸಮಾಜದ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡಾ ಭಾಗವಹಿಸುವವರಾಗಿದ್ದಾರೆ. ಇಂತಹ ಕ್ರೀಡಾಕೂಟ ಏರ್ಪಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟ ಮೂಡಿಸುವ ಕಾರ್ಯ ಮಾಡಿದ್ದಾರೆ. ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸುವಂತೆ ಕರೆ ನೀಡಿದರು.ಅಧ್ಯಕ್ಷತೆಯನ್ನು ವಿಶ್ವಕರ್ಮ ಕ್ರೀಡಾ ಸಂಘದ ಅಧ್ಯಕ್ಷ ಗಜಾನನ ಕೆ.ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಕ್ರೀಡೆ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಗೆ ಯಾವ ರೀತಿಯ ಸೌಲಭ್ಯ, ಮೀಸಲಾತಿ ದೊರೆಯುವುದನ್ನು ನಾವು ನೋಡುತ್ತೇವೆ. ಇಂದು ಆಟವಾಡುತ್ತಿರುವ ಒಂದು ಪ್ರತಿಭೆ ಅಂತಹ ಉತ್ತಮ ಹಂತ ತಲುಪಿದರೆ ಅದು ಸಮಾಜಕ್ಕೆ ಮೇಲಾಗಿ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಗಜಾನನ ಶಂಕರ ಆಚಾರ್ಯ ಮಾತನಾಡಿದರು. ರವಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೊಗೇಶ ಆಚಾರ್ಯ ಪ್ರಾರ್ಥಿಸಿದರು.