ಸಮಾಜದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ: ಸೋಮನಗೌಡ ಮಾಲಿಪಾಟೀಲ

| Published : Sep 10 2024, 01:30 AM IST

ಸಾರಾಂಶ

ಸಮಾಜದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರು ಶ್ರಮಿಸುವುದು ಅಗತ್ಯವಾಗಿದೆ. ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಸೋಮನಗೌಡ ಮಾಲಿಪಾಟೀಲ ಹೇಳಿದರು.

ಲಕ್ಷ್ಮೇಶ್ವರ: ಸಮಾಜದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ. ಸಮಾಜದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸೋಮನಗೌಡ ಮಾಲಿಪಾಟೀಲ ಹೇಳಿದರು.

ಪಟ್ಟಣದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೋಮನಗೌಡ ಮಾಲಿಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರು ಶ್ರಮಿಸುವುದು ಅಗತ್ಯವಾಗಿದೆ. ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಸಮಾಜದ ಏಳ್ಗೆಗೆ ತಮ್ಮ ಕೖಲಾದ ಸೇವೆ ಸಲ್ಲಿಸುವ ಮೂಲಕ ಸಮಾಜದ ಪ್ರಗತಿಗೆ ಕಾಣಿಕೆ ನೀಡಬೇಕು. ಸಮಾಜದಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜಕ್ಕೆ ಕಾಣಿಕೆ ನೀಡುವ ಕಾರ್ಯ ಮಾಡಬೇಕು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆ ಎತ್ತುವ ಮೂಲಕ ಅವರ ಕುಟುಂಬದ ಕಷ್ಟಕ್ಕೆ ನೆರವಾಗುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಸಮಾಜದ ಸಂಘಟನೆಯಲ್ಲಿ ಯುವಕರು ತೊಗಡಿಕೊಳ್ಳುವುದು ಪ್ರಮುಖ ಕಾರ್ಯವಾಗಬೇಕು. ಕಷ್ಟದಲ್ಲಿರುವ ಸಮಾಜದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯವಾಗಬೇಕು. ಸಮಾಜದ ಸಂಘಟನೆಗೆ ಹರಿಹರದ ಪಂಚಮಸಾಲಿ ಮಠ ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಈ ವೇಳೆ ದೇವಣ್ಣ ಬಳಿಗಾರ, ಮಂಜುನಾಥ ಮಾಗಡಿ, ಚಂಬಣ್ಣ ಬಾಳಿಕಾಯಿ ಮಾತನಾಡಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾಲಾ ದಂದರಗಿ, ರುದ್ರಗೌಡರ ಪೊಲೀಸ್ ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ನೀಲಪ್ಪ ಕರ್ಜಕಣ್ಣವರ, ಶಾರಕ್ಕ ಮಹಾಂತಶೆಟ್ಟರ್‌, ಎಂ.ಆರ್. ಪಾಟೀಲ, ಪ್ರವೀಣ ಬಾಳಿಕಾಯಿ ಇದ್ದರು. ಸಮಾರಂಭದಲ್ಲಿ ತಾಲೂಕಿನ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಎಸ್.ಎಫ್. ಆದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕಳಸಾಪೂರ ಸ್ವಾಗತಿಸಿದರು. ಚಂದ್ರು ಮಾಗಡಿ ನಿರ್ವಹಿಸಿದರು.ಲಕ್ಷ್ಮೇಶ್ವರ: ಸಮಾಜದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ. ಸಮಾಜದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸೋಮನಗೌಡ ಮಾಲಿಪಾಟೀಲ ಹೇಳಿದರು.

ಪಟ್ಟಣದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೋಮನಗೌಡ ಮಾಲಿಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರು ಶ್ರಮಿಸುವುದು ಅಗತ್ಯವಾಗಿದೆ. ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಸಮಾಜದ ಏಳ್ಗೆಗೆ ತಮ್ಮ ಕೖಲಾದ ಸೇವೆ ಸಲ್ಲಿಸುವ ಮೂಲಕ ಸಮಾಜದ ಪ್ರಗತಿಗೆ ಕಾಣಿಕೆ ನೀಡಬೇಕು. ಸಮಾಜದಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜಕ್ಕೆ ಕಾಣಿಕೆ ನೀಡುವ ಕಾರ್ಯ ಮಾಡಬೇಕು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆ ಎತ್ತುವ ಮೂಲಕ ಅವರ ಕುಟುಂಬದ ಕಷ್ಟಕ್ಕೆ ನೆರವಾಗುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಸಮಾಜದ ಸಂಘಟನೆಯಲ್ಲಿ ಯುವಕರು ತೊಗಡಿಕೊಳ್ಳುವುದು ಪ್ರಮುಖ ಕಾರ್ಯವಾಗಬೇಕು. ಕಷ್ಟದಲ್ಲಿರುವ ಸಮಾಜದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯವಾಗಬೇಕು. ಸಮಾಜದ ಸಂಘಟನೆಗೆ ಹರಿಹರದ ಪಂಚಮಸಾಲಿ ಮಠ ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಈ ವೇಳೆ ದೇವಣ್ಣ ಬಳಿಗಾರ, ಮಂಜುನಾಥ ಮಾಗಡಿ, ಚಂಬಣ್ಣ ಬಾಳಿಕಾಯಿ ಮಾತನಾಡಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾಲಾ ದಂದರಗಿ, ರುದ್ರಗೌಡರ ಪೊಲೀಸ್ ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ನೀಲಪ್ಪ ಕರ್ಜಕಣ್ಣವರ, ಶಾರಕ್ಕ ಮಹಾಂತಶೆಟ್ಟರ್‌, ಎಂ.ಆರ್. ಪಾಟೀಲ, ಪ್ರವೀಣ ಬಾಳಿಕಾಯಿ ಇದ್ದರು. ಸಮಾರಂಭದಲ್ಲಿ ತಾಲೂಕಿನ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಎಸ್.ಎಫ್. ಆದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕಳಸಾಪೂರ ಸ್ವಾಗತಿಸಿದರು. ಚಂದ್ರು ಮಾಗಡಿ ನಿರ್ವಹಿಸಿದರು.