ವೀರಶೈವ ಸಮುದಾಯದ ಏಳಿಗೆಗೆ ಒಗ್ಗಟ್ಟು ಅಗತ್ಯ: ಶ್ರೀರೇಣುಕಾ ಶಿವಾಚಾರ್ಯಸ್ವಾಮಿ

| Published : Jul 29 2024, 12:45 AM IST

ಸಾರಾಂಶ

ಮನುಷ್ಯನ ಜೀವ ಅತ್ಯಮೂಲ್ಯ. ಇರುವಷ್ಟು ದಿನ ಸಮಾಜದ ಒಳಿತಿಗೆ, ಏಳ್ಗೆಗೆ ದುಡಿಯುವ ಮನಸ್ಸುಗಳಿಗೆ ಬೆಂಬಲವಾಗಿ ನಿಲ್ಲಬೇಕು. ಯೋಜನೆಗಳ ಸಮುದಾಯಕ್ಕೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನೂರಾರು ವರ್ಷಗಳ ಇತಿಹಾಸವಿರುವ ವೀರಶೈವ ಲಿಂಗಾಯತ ಸಮುದಾಯವು ಬಸವಾದಿ ಶರಣರ ತತ್ವ, ಸಿದ್ಧಾಂತದ ಅಡಿಯಲ್ಲಿ ಸಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನೂರಾರು ವರ್ಷಗಳ ಇತಿಹಾಸವಿರುವ ವೀರಶೈವ ಲಿಂಗಾಯತ ಸಮುದಾಯವು ಬಸವಾದಿ ಶರಣರ ತತ್ವ, ಸಿದ್ಧಾಂತದ ಅಡಿಯಲ್ಲಿ ಸಾಗುತ್ತಿದೆ. ಸಮುದಾಯದ ಏಳಿಗೆಗೆ ಎಲ್ಲರ ಐಕ್ಯತೆಯ ಒಗ್ಗಟ್ಟು ಅಗತ್ಯವಿದೆ ಎಂದು ವೈದ್ಯನಾಥಪುರ ಮಠದ ಶ್ರೀರೇಣುಕಾ ಶಿವಾಚಾರ್ಯಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕವು ಆಯೋಜಿಸಿದ್ದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಜೀವ ಅತ್ಯಮೂಲ್ಯ. ಇರುವಷ್ಟು ದಿನ ಸಮಾಜದ ಒಳಿತಿಗೆ, ಏಳ್ಗೆಗೆ ದುಡಿಯುವ ಮನಸ್ಸುಗಳಿಗೆ ಬೆಂಬಲವಾಗಿ ನಿಲ್ಲಬೇಕು. ಯೋಜನೆಗಳ ಸಮುದಾಯಕ್ಕೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದ ಬಸವಾದಿ ಶರಣರ ತತ್ವಗಳನ್ನು ಸಮುದಾಯವು ಅನುಷ್ಠಾನಗೊಳಿಸಿಗೊಂಡಿದ್ದರೆ ಇನ್ನಷ್ಟು ಮೇಲ್ಮಟ್ಟದಲ್ಲಿ ಬೆಳೆಯಬಹುದಿತ್ತು. ಶ್ರೇಷ್ಠ ಶರಣರು ಹಾಕಿಕೊಟ್ಟ ಮಾರ್ಗಗಳನ್ನು ನಾವು ಬಳಸಿಕೊಂಡು ಸಮುದಾಯದ ಒಗ್ಗಟ್ಟಿನ ಐಕ್ಯತೆಯ ಮಂತ್ರವಾಗಿ ಸಾಗಬೇಕಾಗಿದೆ ಎಂದರು.

ನೂತನ ಅಧ್ಯಕ್ಷ ಪರಮೇಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ ಸಮುದಾಯದವರ ಸದಸ್ಯತ್ವ ನೋಂದಣಿ, ಬಸವ ಭವನ ವಿದ್ಯಾರ್ಥಿ ನಿಲಯ ಸ್ಥಾಪನೆ ಹಾಗೂ ವೀರಶೈವ ಮಹಾಸಭಾದ ಅಭಿವೃದ್ಧಿಗೆ ಶಕ್ತಿ ತುಂಬಲು ಶ್ರಮಿಸುವುದಾಗಿ ಹೇಳಿದರು.

ಇದೇ ವೇಳೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಬಾದ ನೂತನ ನಿರ್ದೇಶಕರುಗಳಿಗೆ ಶ್ರೀಗಳು ಅಭಿನಂದಿಸಿ ಆಶೀರ್ವದಿಸಿದರು. ಉಪಾಧ್ಯಕ್ಷ ಬಸಪ್ಪಾಜಿ, ಮಹಿಳಾ ಘಟಕದ ಉಪಾಧ್ಯಕ್ಷೆ ಗೀತಾ, ಸಹ ಕಾರ್ಯದರ್ಶಿ ಬಸವರಾಜು, ಖಜಾಂಚಿ ಪಂಚಾಕ್ಷರಯ್ಯ, ಬ್ರಹ್ಮದೇವರಹಳ್ಳಿ ಮಹದೇವ್, ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಹಲವರು ಇದ್ದರು.