ಕನ್ನಡಪ್ರಭ ರೈತ ರತ್ನ ಪ್ರಶಸ್ತಿ ಪಡೆದ ಪ್ರಗತಿಪರ ರೈತ ಧನಪಾಲಗೆ ರಾಷ್ಟ್ರ ಪ್ರಶಸ್ತಿ

| Published : Jul 28 2024, 11:37 AM IST

Dhanapal
ಕನ್ನಡಪ್ರಭ ರೈತ ರತ್ನ ಪ್ರಶಸ್ತಿ ಪಡೆದ ಪ್ರಗತಿಪರ ರೈತ ಧನಪಾಲಗೆ ರಾಷ್ಟ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ 2023ನೇ ಸಾಲಿನ ಸಮಗ್ರ ಕೃಷಿಯಲ್ಲಿ ರೈತ ರತ್ನ ಪ್ರಶಸ್ತಿ ವಿಜೇತರಾದ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಪ್ರಗತಿಪರ ರೈತ ಧನಪಾಲ ಯಲ್ಲಟ್ಟಿ ಅವರು ಭಾರತೀಯ ಸಕ್ಕರೆ ತಂತ್ರಜ್ಞಾನ ಸಂಸ್ಥೆ ಕೊಡಮಾಡುವ ರೈತ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಬಕವಿ-ಬನಹಟ್ಟಿ :  ಕನ್ನಡಪ್ರಭ 2023ನೇ ಸಾಲಿನ ಸಮಗ್ರ ಕೃಷಿಯಲ್ಲಿ ರೈತ ರತ್ನ ಪ್ರಶಸ್ತಿ ವಿಜೇತರಾದ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಪ್ರಗತಿಪರ ರೈತ ಧನಪಾಲ ಯಲ್ಲಟ್ಟಿ ಅವರು ಭಾರತೀಯ ಸಕ್ಕರೆ ತಂತ್ರಜ್ಞಾನ ಸಂಸ್ಥೆ ಕೊಡಮಾಡುವ ರೈತ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಕಬ್ಬಿನ ಹೊಸ ತಳಿಗಳ ಬಳಕೆ, 4, 5 ಮತ್ತು ೬ ಅಡಿಗಳ ಪಟ್ಟಾ ಪದ್ಧತಿ, ಗುನಿ ಪದ್ಧತಿಯಲ್ಲಿ ಮಿಶ್ರ ಬೆಳೆಯಾಗಿ ಚವಳಿಕಾಯಿ, ಪಪ್ಪಾಯಿ, ಟೊಮೆಟೋ, ಹೂಕೋಸು, ಸ್ವೀಟ್ ಕಾರ್ನ್, ಚಂಡು ಹೂ ಬೆಳೆ ವಿಧಾನ ಅಳವಡಿಕೆ ಮಾಡುವ ಮೂಲಕ ಮತ್ತು ಕಳೆದ ಸಾಲಿನ ಕನ್ನಡಪ್ರಭ ರೈತರತ್ನ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರು ಈ ಬಾರಿಯ ರಾಷ್ಟ್ರಮಟ್ಟದ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.2024, ಜೂ.30ರಂದು ರಾಜಸ್ಥಾನದ ಜೈಪೂರದಲ್ಲಿ ನಡೆಯಲಿರುವ ೮೨ನೇ ವಾರ್ಷಿಕ ಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ಸಕ್ಕರೆ ಏಕ್ಸ್‌ಪೋ-೨೦೨೪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಅವರು ವಿವಿಧ ಮಿಶ್ರಬೆಳೆಗಳಲ್ಲಿ ಹೊಸತನವನ್ನು ಮೂಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಸಂದಿದೆ.

ಸಾಧಕ ರೈತ ಧನಪಾಲ ಅವರಿಗೆ ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ, ಸಮೀರವಾಡಿ ಜಿಬಿಎಲ್ ಎಕ್ಜಿಕ್ಯೂಟಿವ್ ಡೈರೆಕ್ಟರ್ ಬಿ.ಆರ್.ಭಕ್ಷಿ, ಕೇನ್ ಜನರಲ್ ಮ್ಯಾನೇಜರ್ ವಿ.ಎಸ್.ಖನಬೂರ, ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾವೀರ ದಾನಿಗೊಂಡ ಹಾಗೂ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಭಹಾರೈಸಿದ್ದಾರೆ.-