ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠವಾದದು: ಶ್ರೀಶೈಲ ಜಗದ್ಗುರುಮನುಷ್ಯ, ಉತ್ತಮ ಸಂಸ್ಕಾರ ಪಡೆದುಕೊಳ್ಳಬೇಕಾದರೆ ಜ್ಞಾನ (ವಿದ್ಯೆ) ಬಹುಮುಖ್ಯವಾದದು. ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠವಾದದು, ನಾವು ಗಳಿಸಿದ ಹಣ (ಆಸ್ತಿ)ವನ್ನು ಯಾರು ಬೇಕಾದರೂ ಕದಿಯಬಹುದು. ಆದರೆ ಜ್ಞಾನ ಸಂಪತ್ತನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹೀಗಾಗಿ ಜ್ಞಾನ ಸಂಪತ್ತು ಎಲ್ಲದಕ್ಕಿಂತಲೂ ಬಹು ದೊಡ್ಡದು. ಜ್ಞಾನ ಸಂಪತ್ತು ಗಳಿಸುವುದರೊಂದಿಗೆ ಸಂಸ್ಕಾರ ಪಡೆದುಕೊಳ್ಳಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.