ಸಾರಾಂಶ
ಹಿಂದೂಗಳು ಒಗ್ಗಟ್ಟಾದಾಗ ಮಾತ್ರ ಸನಾತನ ಧರ್ಮ, ಹಿಂದುತ್ವ ಉಳಿಯಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಗಣರಾಜ್ ಭಟ್ ಕೆದಿಲ ಹರಿಹರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
- ಹಿಂದೂ ಮಹಾಗಣಪತಿ ಸಮಿತಿ ಗಣೇಶೋತ್ಸವದಲ್ಲಿ ಗಣರಾಜ್ ಭಟ್ ಕೆದಿಲ
- - -ಕನ್ನಡಪ್ರಭ ವಾರ್ತೆ ಹರಿಹರ ಹಿಂದೂಗಳು ಒಗ್ಗಟ್ಟಾದಾಗ ಮಾತ್ರ ಸನಾತನ ಧರ್ಮ, ಹಿಂದುತ್ವ ಉಳಿಯಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಗಣರಾಜ್ ಭಟ್ ಕೆದಿಲ ಅಭಿಪ್ರಾಯಪಟ್ಟರು.
ನಗರದ ಹಿಂದೂ ಮಹಾಗಣಪತಿ ಸಮಿತಿಯಿಂದ ನಡೆಯುತ್ತಿರುವ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ದಿಕ್ಸೂಚಿ ಭಾಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿದ್ದವರನ್ನು ಹಾಗೂ ಬೀಳುತ್ತಿರುವವರನ್ನು ರಕ್ಷಿಸುವುದೇ ನಿಜವಾದ ಧರ್ಮ ಎನ್ನುವ ಸಂಸ್ಕಾರ ನಮ್ಮ ಪೂರ್ವಿಕರು ಹೇಳಿಕೊಟ್ಟಿದ್ದಾರೆ. ಅದರೆ ಎಂದಿಗೂ ಇನ್ನೊಬ್ಬರ ಮೇಲೆ ಕಲ್ಲನ್ನು ಎಸೆಯಿರಿ ಎಂದು ಹೇಳಿಕೊಟ್ಟಿಲ್ಲ ಎಂದರು.ಇಂದು ನಾವೆಲ್ಲರೂ ಆಲೋಚನೆ ಮಾಡುವ ಕಾಲ ಬಂದಿದೆ. ದೇವಾನುದೇವತೆಗಳು, ಪುಣ್ಯ ಪುರುಷರು, ಋಷಿ ಮುನಿಗಳು ನಡೆದಾಡಿದ ಈ ಪುಣ್ಯಭೂಮಿ ಭಾರತ. ಇಲ್ಲಿ ನಂಬಿಕೆ ಎನ್ನುವುದು ಮೂಢನಂಬಿಕೆಯಲ್ಲ, ಅದು ಮೂಲನಂಬಿಕೆ ಎಂದು ಅರಿಯ ಬೇಕಾಗಿದೆ ಎಂದರು.
ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಗೌಡರ ಬಸವರಾಜ್, ಉಪಾಧ್ಯಕ್ಷ ಸ್ವಾತಿ ಹನುಮಂತ, ಕಾರ್ಯದರ್ಶಿ ಎಚ್. ದಿನೇಶ್, ಸಹ ಕಾರ್ಯದರ್ಶಿ ಚಂದ್ರಕಾಂತ್ ಗೌಡ, ಡಾ. ಖಮಿತ್ಕರ್, ರಾಜು ರೋಖಡೆ, ರವಿ ರಾಯ್ಕರ್, ಪ್ರಶಾಂತ್ ಐರಣಿ, ಶಿವು, ಮಹೇಶ್, ಸಚಿನ್ ಹಾಗೂ ಇತರರು ಉಪಸ್ಥಿತರಿದ್ದರು.- - - -24ಎಚ್‍ಆರ್‍ಆರ್1:
ಹರಿಹರದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣರಾಜ್ ಭಟ್ ಕೆದಿಲ ಗಣಪತಿ ದರ್ಶ ಪಡೆದರು.