ಸಾರಾಂಶ
ರಾಮದುರ್ಗ ಪುರಸಭೆಯ ಕೊನೆಯ ಅವಧಿಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಬಿಜೆಪಿಯ ಲಕ್ಷ್ಮೀ ಜಗದೀಶ ಕಡಕೋಳ, ಉಪಾಧ್ಯಕ್ಷರಾಗಿ ಸರಿತಾ ಗೋವಿಂದ ದೂತ ಅವಿರೋಧವಾಗಿ ಆಯ್ಕೆಯಾದರು.
ರಾಮದುರ್ಗ: ಸ್ಥಳೀಯ ಪುರಸಭೆಯ ಕೊನೆಯ ಅವಧಿಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಬಿಜೆಪಿಯ ಲಕ್ಷ್ಮೀ ಜಗದೀಶ ಕಡಕೋಳ, ಉಪಾಧ್ಯಕ್ಷರಾಗಿ ಸರಿತಾ ಗೋವಿಂದ ದೂತ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶಂಕರ ರೇವಣಸಿದ್ದಪ್ಪ ಸುಳಿಭಾವಿ ಮತ್ತು ಬಿಜೆಪಿಯ ಲಕ್ಷ್ಮೀ ಜಗದೀಶ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸರಿತಾ ಗೋವಿಂದ ದೂತ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ನ ಶಂಕರ ರೇವಣಸಿದ್ದಪ್ಪ ಸುಳಿಭಾವಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪುರಸಭೆ ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಕಾರ್ಯನಿರ್ವಹಿಸಿದರು.