ಕನ್ನಡಪ್ರಭ ವಾರ್ತೆ ಅಂಕೋಲಾ

ಪಾಂಡಿಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಅರ್ತಮೆಟಿಕ್ ಸ್ಪರ್ಧೆ ಹಾಗೂ 17ನೇ ರಾಷ್ಟ್ರಮಟ್ಟದ ವೇದಗಣಿತದ ಸ್ಪರ್ಧೆಯಲ್ಲಿ ಅಂಕೋಲಾ, ಕಾರವಾರ (ನಂದನಗದ್ದಾ) ಮತ್ತು ಕುಮಟಾದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ನ್ಯಾಷನಲ್ ಅಬಾಕಸ್ ಅಂಕೋಲಾ, ಅಬಾಕಸ್ ಮೆಮೋರಿ ಕ್ಲಾಸ್ ಕುಮಟಾ ಹಾಗೂ ನಂದನಗದ್ದಾ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಖುಷಿ ನಾಯಕ, ಅಶ್ವಿಕ್ ಗಾಂವಕರ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಪ್ರಥಮ ರ‍್ಯಾಂಕ್‌ನ್ನು ಶೌರ್ಯ ಶೆಟ್ಟಿ, ಆರುಶಿ ನಾಯ್ಕ, ಅದ್ರಿತ್ ಕುಮಾರ, ಸುಹಾನಿ ಡೋರಾ, ಶ್ರೀಕರ ಹೆಗಡೆ, ಶ್ರೀಧರ ಹೆಗಡೆ, ನಿರೀಕ್ಷಾ ನಾಯ್ಕ, ಸಂಸ್ಕೃತಿ ಉಪ್ಪೂರ್, ರಕ್ಷಾ ಪಟಗಾರ, ಪ್ರದ್ಯುಮ್ನ ನಾಯ್ಕ, ಜಿತೇಶ ನಾಯ್ಕ ಪಡೆದರು. ತನ್ಮಯ್ ನಾಯಕ, ಶ್ರವಂತ ನಾಯ್ಕ, ಶಮಿನ್ ಶೇಖ್, ಪ್ರಜ್ವಲ್ ನಾಯ್ಕ, ಆಯುಷ್ ಹೆಗಡೆ ದ್ವಿತೀಯ ರ‍್ಯಾಂಕ್ ಪಡೆದರು. ಜೀವನ ನಾಯ್ಕ, ಪ್ರಜ್ವಲ್ ಪಿ. ನೈನಿಕಾ, ಆರ್ಯ ಬಾಳೆರಿ, ಶ್ರೇಯಾ ಕೋಲ್ವೆಕರ, ವೇದಿಕಾ ಪೆಡ್ನೆಕರ ತೃತೀಯ ರ‍್ಯಾಂಕ್ ಗಳಿಸಿದ್ದಾರೆ.ಮಣಿಕಂಠ ನಾಯಕ, ಅನುಪ್ ಕೋಟಿ, ಅದಿತಿ ಕೋಟಿ, ಪ್ರಣಮ್ ಎಸ್,ಎಚ್., ಶ್ರೀರಾಮ ಮಡಿವಾಳ, ತನ್ಮಯ ಗೌಡ, ರಿಷಬ್ ನಾಯ್ಕ, ತ್ರಿಶುಲ್ಯಾ ನಾಯ್ಕ, ವೇದಾ ಗೌಡ, ರಿತಿಕಾ ನಾಯ್ಕ, ನಾಗರಾಜ ಶೆಟ್ಟಿ, ತನ್ವಿ ಗಾಂವಕರ, ತನ್ವಿ ಅಂಗಡಿ, ಪ್ರಥಮ ಕಾಂಬಳೆ ಪ್ರಥಮ ರನ್ನರ್‌ ಅಪ್ ಆಗಿದ್ದಾರೆ.

ಧನ್ಯಾ ನಾಯ್ಕ, ಜೆ. ಸಾನ್ವಿ, ಪವನ್ ನಾಯ್ಕ, ನಾದಶ್ರೀ ಪಟಗಾರ, ವಿರಾಜ ಪಾವಸ್ಕರ, ಕ್ರಿಶಿಕಾಶ್ರೀ ಅಹಿಲಿಜಿ, ಪ್ರಥ್ವಿರಾಜ್ ಶೇಟ್, ಗನಶ್ರೀ ಬಡಗೇರಿ, ಚತುರ್ಥ ರ‍್ಯಾಂಕ್ ಕೌಸ್ತುಬ ಶಾನಭಾಗ, ಕಾರ್ತಿಕ ನಾಯಕ, ಧ್ರುವ ಜೆ.ಆರ್. ಅದ್ವಿಕಾ ನಾಯ್ಕ, ಖುಷಿ ರೇವಣಕರ, ದಿಯಾ ಬಿ. ಎನ್. ರಿತಿಶಾ ನಾಯಕ, ಅಕ್ಷತಾ ರಾಯ್ಕರ, ಅಥರ್ವ ರಾಯ್ಕರ ದ್ವಿತೀಯ ರನ್ನರ್‌ ಅಪ್ ಆಗಿದ್ದಾರೆ.


ವೇದಗಣಿತದಲ್ಲಿ ಪ್ರಥಮ ಭಟ್ ಪ್ರಥಮ, ಪ್ರಜ್ವಲ್ ನಾಯ್ಕ ದ್ವಿತೀಯ, ಅಕ್ಷತಾ ರಾಯ್ಕರ, ಸಾನ್ವಿ ದೇವರಬಾವಿ ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ಜಯಶ್ರೀ ಪಿ. ಶೆಟ್ಟಿ, ಅರ್ಜುನ ಪಿ. ಶೆಟ್ಟಿ, ಪ್ರಶಾಂತ ಪಿ. ಶೆಟ್ಟಿ, ಶ್ರೀಧರ ವಿ. ಶೆಟ್ಟಿ, ಶಿಕ್ಷಕಿ ಜೀವಿಕಾ ಶೆಟ್ಟಿ, ಸುಷ್ಮಾ ಶೆಟ್ಟಿ, ಶಾಲಿನಿ ಪಾಟೀಲ ತರಬೇತಿ ನೀಡಿದ್ದರು.