ಹಾನಗಲ್ಲ: ಬಿ.ಎಸ್. ಅಕ್ಕಿವಳ್ಳಿ ನೇತೃತ್ವದ ಜನನಾಯಕ ದಿ.ಸಿ.ಎಂ. ಉದಾಸಿ ಅಭಿಮಾನಿ ಬಳಗದ ಶಿಕ್ಷಣಾಭಿವೃದ್ಧಿ ಸಮಿತಿ ೧೫ ಸ್ಥಾನಗಳಲ್ಲಿ ೧೪ ಸ್ಥಾನ ಗೆಲ್ಲುವ ಮೂಲಕ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿದೇಶಕರ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿದೆ.

ಕಳೆದ ಐದಾರು ತಿಂಗಳಿನಿಂದ ಭಾರೀ ಚರ್ಚೆಯಲ್ಲಿದ್ದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿ.ಎಸ್. ಅಕ್ಕಿವಳ್ಳಿ ನೇತೃತ್ವದ ಜನನಾಯಕ ದಿ.ಸಿ.ಎಂ.ಉದಾಸಿ ಅಭಿಮಾನಿ ಬಳಗದ ಶಿಕ್ಷಣಾಭಿವೃದ್ಧಿ ಸಮಿತಿ ಹಾಗೂ ಪ್ರೊ.ಚಿಕ್ಕಾವಲಿ ಮಂಜುನಾಥ ನೇತೃತ್ವದ ಹಾನಗಲ್ಲ ತಾಲೂಕು ಶಿಕ್ಷಣಾಭಿಮಾನಿಗಳ ಪಕ್ಷಾತೀತ ವೇದಿಕೆ ತಲಾ ೧೫ ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಭಾನುವಾರ ನಡೆದ ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ಬಿ.ಎಸ್. ಅಕ್ಕಿವಳ್ಳಿ ನೇತೃತ್ವದ ತಂಡ ೧೪ ಸ್ಥಾನಗಳನ್ನು ಗೆಲ್ಲುವ ಮೂಲಕ ಜಯ ಸಾಧಿಸಿದೆ. ಪ್ರೊ. ಚಿಕ್ಕಾವಲಿ ಮಂಜುನಾಥ ಮಾತ್ರ ಗೆಲ್ಲುವ ಮೂಲಕ ಇಡೀ ತಂಡ ಒಂದು ಸ್ಥಾನಕ್ಕೆ ಸಮಾಧಾನ ಪಡುವಂತಾಗಿದೆ.

ಬಿ.ಎಸ್. ಅಕ್ಕಿವಳ್ಳಿ ನೇತೃತ್ವದ ಜನನಾಯಕ ದಿ.ಸಿ.ಎಂ. ಉದಾಸಿ ಅಭಿಮಾನಿ ಬಳಗದ ಶಿಕ್ಷಣಾಭಿವೃದ್ಧಿ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಯಲ್ಲಪ್ಪ ಶೇರಖಾನೆ (೫೦೬), ಪರಿಶಿಷ್ಟ ಪಂಗಡದ ಅಭ್ಯರ್ಥಿ ಪ್ರಕಾಶಗೌಡ ಪಾಟೀಲ (೫೨೪), ಹಿಂದುಳಿದ ವರ್ಗದ ಆಶೋಕ ಹಂಗರಗಿ (೫೨೮) ಹಾಗೂ ಭಾಸ್ಕರ ಹುಲಮನಿ (೪೨೮), ಮಹಿಳಾ ಮೀಸಲು ಕ್ಷೇತ್ರದ ಮಂಜುಳಾ ಬೇದ್ರೆ (೪೭೮), ರೇಖಾ ಶೆಟ್ಟರ (೪೮೦), ಸಾಮಾನ್ಯ ಕ್ಷೇತ್ರದ ನಾಗರಾಜ ಉದಾಸಿ (೬೧೪), ರವಿಚಂದ್ರ ಪುರೋಹಿತ (೪೭೮), ಬಿ.ಎಸ್. ಅಕ್ಕಿವಳ್ಳಿ (೪೬೫), ರವಿ ಮೂಡ್ಲಿಯವರ (೪೫೩), ಸುರೇಶ ರಾಯ್ಕರ (೪೪೯), ಮಾಲತೇಶ ಚಿಕ್ಕಣ್ಣನವರ (೪೪೦), ರವಿರಾಜ ಕಲಾಲ (೪೧೭), ಬಿ.ಎಸ್. ಕೂಕನಗೌಡ್ರ (೪೧೪) ಆಯ್ಕೆಯಾದರು. ಪ್ರೊ. ಚಿಕ್ಕಾವಲಿ ಮಂಜುನಾಥ ನೇತೃತ್ವದ ಹಾನಗಲ್ಲ ತಾಲೂಕು ಶಿಕ್ಷಣಾಭಿಮಾನಿಗಳ ಪಕ್ಷಾತೀತ ವೇದಿಕೆಯ ಪ್ರೊ.ಚಿಕ್ಕಾವಲಿ ಮಂಜುನಾಥ (೩೯೯) ಮತ ಪಡೆದು ಆಯ್ಕೆಯಾದರು. ೯೧೧ ಮತಗಳು ಚಲಾವಣೆಯಾಗಿದ್ದವು.

ಮರು ಆಯ್ಕೆ: ಈ ಹಿಂದಿನ ಆಡಳಿತಮಂಡಳಿಯಲ್ಲಿದ್ದ ಬಿ.ಎಸ್. ಅಕ್ಕಿವಳ್ಳಿ, ರೇಖಾ ಶೆಟ್ಟರ, ರವಿಚಂದ್ರ ಪುರೋಹಿತ, ಅಶೋಕ ಹಂಗರಗಿ, ಸುರೇಶ ರಾಯ್ಕರ, ಬಿ.ಎಸ್. ಕೂಕನಗೌಡ್ರ ಮರು ಆಯ್ಕೆಗೊಂಡರು.

ವಿಜಯೋತ್ಸವ: ನಂತರ ನಡೆದ ವಿಜಯೋತ್ಸವದಲ್ಲಿ ಗಣ್ಯರಾದ ಕಲ್ಯಾಣಕುಮಾರ ಶೆಟ್ಟರ, ಮಹೇಶ ಕಮಡೊಳ್ಳಿ, ಸದಾನಂದ ಮೆಳ್ಳಿಹಳ್ಳಿ, ಮಾಲತೇಶ ಸೊಪ್ಪಿನ, ರಾಜಶೇಖರಗೌಡ ಕಟ್ಟೇಗೌಡರ, ಸಿದ್ದಲಿಂಗಣ್ಣ ಕಮಡೊಳ್ಳಿ, ರಾಘವೇಂದ್ರ ತಹಶೀಲ್ದಾರ, ರಾಮನಗೌಡ ಪಾಟೀಲ, ಭೋಜರಾಜ ಕರೂದಿ, ಮಧುಮತಿ ಪೂಜಾರ, ಚಂದ್ರು ಉಗ್ರಣ್ಣನವರ, ಶೋಭಾ ಉಗ್ರಣ್ಣನವರ, ಮಾಲತೇಶ ಗಂಟೇರ, ಚಂದ್ರು ಆನವಟ್ಟಿ, ರಾಜು ಗೌಳಿ, ಎಸ್.ಎಂ. ಕೋತಂಬರಿ, ರಾಮು ಯಳ್ಳೂರ, ಹನುಮಂತಪ್ಪ ಮಲಗುಂದ, ಬಿ.ಎಸ್. ಕುಲಕರ್ಣಿ, ಬಸವರಾಜ ಹಾದಿಮನಿ ಮೊದಲಾದ ನಾಯಕರು ಪಾಲ್ಗೊಂಡಿದ್ದರು.