ಪಹಲ್ಗಾಮ್ ನರಮೇಧ ವಿರುದ್ಧ ನಿಲ್ಲದ ಆಕ್ರೋಶ

| Published : Apr 25 2025, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ ಜಮ್ಮು- ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿ ಆಲಮೇಲ ಬ್ಲಾಕ್ ಕಾಂಗ್ರೆಸ್‌ನಿಂದ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಆಲಮೇಲ

ಜಮ್ಮು- ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿ ಆಲಮೇಲ ಬ್ಲಾಕ್ ಕಾಂಗ್ರೆಸ್‌ನಿಂದ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಆಲಮೇಲ ಪಪಂ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿ, ಭಾರತದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನವೇ ಕಾರಣ. ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. 26 ಜನ ಅಮಾಯಕ ಪ್ರವಾಸಿಗರ ಭೀಕರ ಹತ್ಯೆಯ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ರಮೇಶ ಭಂಟನೂರ ಮಾತನಾಡಿ, ಭೂಲೋಕದ ಸ್ವರ್ಗ ಕಾಶ್ಮೀರ ಕಣಿವೆ ಭಾಗದಲ್ಲಿ ಪದೇ ಪದೇ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ. ಇದು ಮತೀಯ ಸಾಮರಸ್ಯ ಕದಡುವ ಹೀನ ಕೃತ್ಯ. ಸರ್ಕಾರ ಬೇಗನೆ ಉಗ್ರಗಾಮಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಡಾಕ್ಟರ್ಸ್ ಸೆಲ್ ಅಧ್ಯಕ್ಷ ಡಾ.ಸಮೀರ ಹಾದಿಮನಿ ಮಾತನಾಡಿ, ನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುವ ಪಹಲ್ಗಾಮ್ ಪ್ರದೇಶದಲ್ಲಿ ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ, ಭಯೋತ್ಪಾದನೆಯೇ ಒಂದು ಧರ್ಮವಾಗಿದ್ದು, ಇಡೀ ಜಗತ್ತಿಗೆ ಅಂಟಿದ ಪಿಡುಗಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಕಚೇರಿಯಿಂದ ಅಂಬೇಡ್ಕರ್ ವೃತ್ತದ ವರೆಗೆ ಕಪ್ಪುಪಟ್ಟೆಕಟ್ಟಿಕೊಂಡು ಮೇಣದ ಬತ್ತಿಯೊಂದಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ತೆಲ್ಲೂರ, ಪಪಂ ಸದಸ್ಯ ಭಾಗ್ಯವಂತ ಆಲಮೇಲಕರ, ಯುಥ್ ಕಾಂಗ್ರೆಸ್ ಅಧ್ಯಕ್ಷ ಯೂನುಸ್ ದೇವರಮನಿ, ಸಂತೋಷ ಜರಕರ್, ಮಲ್ಲು ಅಚಲೇರಿ, ಬಾಬು ಕೊತ್ತಂಬರಿ, ಈರಣ್ಣ ಕಲ್ಲೂರ, ಸೈಫನ್ ಜಮಾದಾರ, ಮುನ್ನಾ ಚೌಧರಿ, ಶಶಿ ಗಣಿಯಾರ, ಸಂತೋಷ ಮೇಲಿನಮನಿ, ಯಲ್ಲಪ್ಪ ಬುರುಡ, ಬಶೀರ ತಾಂಬೋಳಿ(ಸಿನಿಯರ್), ಸೈಪನ್ ಪ್ಯಾಟಿ, ದಯಾನಂದ ನಾರಾಯಣಕರ, ಅಪ್ಪುಗೌಡ ಪಾಟೀಲ, ಮಹಾದೇವಿ ಬಂಡಿವಡ್ಡರ, ಶೈಲಾ ಹೊಸಮನಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.