ದಾಬಸ್‍ಪೇಟೆ: ಸೋಂಪುರ ಹೋಬಳಿಯ ಮಾಕೇನಹಳ್ಳಿ ಕ್ರಷರ್‌ನಲ್ಲಿ ಕಳೆದ ಐದಾರು ದಿನಗಳಿಂದ ದರ ಏರಿಕೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕ್ರಷರ್ ಮಾಲೀಕರು ಮತ್ತು ಲಾರಿ ಚಾಲಕರ ನಡುವಿನ ಹಗ್ಗಜಗ್ಗಾಟ ಕೊನೆಗೆ ಸುಖಾಂತ್ಯ ಕಾಣದ ಹಿನ್ನೆಲೆಯಲ್ಲಿ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಯಲಚಗೆರೆ ನಟರಾಜು ಹಾಗೂ ಲಾರಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಮುಖಂಡರು ಇಬ್ಬರನ್ನು ಸಮಾಧಾನಪಡಿಸಿ ಸಭೆ ಮುಂದೂಡಿದರು.

ಕ್ರಷರ್ ಮಾಲೀಕರು ಏಕಾಏಕಿ ಸಾಮಗ್ರಿಗಳ ದರ ಏರಿಕೆ ಮಾಡಿ ಲಾರಿ ಮಾಲೀಕರಿಗೆ ಹೊರೆ ಮಾಡಿದ್ದಾರೆ. ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೇಕಾದರೆ ತೆಗೆದುಕೊಂಡು ಹೋಗಿ ಬೇಡವಾದರೆ ಬರಬೇಡಿ ಎಂದು ಉಡಾಫೆ ಉತ್ತರ ನೀಡುತ್ತಾರೆಂದು ಆಗ್ರಹಿಸಿ ಸೋಂಪುರ ಹೋಬಳಿಯ ಲಾರಿ ಮಾಲೀಕರು ಕ್ರಷರ್ ಮಾಲೀಕರ ವಿರುದ್ಧ ಏರುಧ್ವನಿಯಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಭಾರತೀಪುರ ಮೋಹನ್ ಕುಮಾರ್ ಮಾತನಾಡಿ, ಮಾಕೇನಹಳ್ಳಿ ಬಳಿ ಸುಮಾರು 6ಕ್ಕೂ ಅಧಿಕ ಕ್ರಷರ್ ಗಳಲ್ಲಿ ಸ್ಥಳೀಯ ಲಾರಿಗಳಿಗೆ, ಎಂ.ಸ್ಯಾಡ್ ಮತ್ತು ಫ್ರೀ ಸ್ಯಾಡ್ ಇತ್ಯಾದಿ ದಾಸ್ತೂನುಗಳಿಗೆ ಸರ್ಕಾರಿ ಆದೇಶ ವಿಲ್ಲದಿದ್ದರೂ ಟನ್ ಗೆ 150 ರೂಪಾಯಿ ಏರಿಕೆ ಮಾಡಿದ್ದಾರೆ ಮತ್ತು ಸ್ಥಳೀಯ ಲಾರಿಗಳಿಗೆ ದಾಸ್ತೂನು ನೀಡದೆ, ದೂರದ ಮಾದಾಪಟ್ಟಣದ ಭಾಗಕ್ಕೆ ಮಾರಾಟ ಮಾಡುತ್ತಿದ್ದರೇ, ಸ್ಥಳೀಯರಿಗೆ ಮೊದಲು ಆದ್ಯತೆ ನೀಡಿ ನಂತರ ಎಲ್ಲಿಗೆ ಬೇಕಾದರೂ ಎಂ.ಸ್ಯಾಡ್ ನೀಡಲಿ, ಮೊದಲ ಆದ್ಯತೆ ಸ್ಥಳೀಯರಿಗೆ ನೀಡಬೇಕು ಎಂದು ನಮ್ಮ ಆಗ್ರಹವಿದೆ ಎಂದರು.

ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜು ನೇತೃತ್ವದಲ್ಲಿ ಸಭೆ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು. ಇಂದು ಸಹ ರಾಜ್ಯ ಗಣಿ ಮಾಲೀಕರ ಸಂಘದ ಸಭೆ ಇದೇ ಶುಕ್ರವಾರ ನಡೆದ ನಂತರ ದರ ಕಡಿತ, ಇತ್ಯಾದಿ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದರು.

ಭಾರಿ ವಾಗ್ವಾದ : ಈಗಾಗಲೇ ಕಳೆದ ವಾರ ಸಾಂಕೇತಿಕವಾಗಿ ಸ್ಥಳೀಯ ಮುಖಂಡರು ಪ್ರತಿಭಟನೆ ನಡೆಸಿ, ನಿನ್ನೇ ಸೋಮವಾರದವರೆಗೆ ಸಮಸ್ಯೆ ಬಗೆಹರಿಸಲು ಗಡುವು ನೀಡಿದ್ದರು, ಜುಲೈ 28 ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆ, ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜು ಮತ್ತು ಲಾರಿ ಚಾಲಕರ ಸಂಘದ ಉಮೇಶ್, ವಿವೇಕ್ ನಡುವೆ ಬಾರಿ ಮಾತಿನ ಚಕಮಕಿ ನಡೆಯಿತು.


ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷರ ವಿರುದ್ದ ಆಕ್ರೋಶ : ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜು ಏಕಸ್ವಾಮ್ಯತೆ ಸಾಧಿಸಲು ಮುಂದಾಗಿದ್ದಾರೆ, ಈ ನಡೆ ಸರಿಯಿಲ್ಲಾ ಎಂದು ಛೀಮಾರಿ ಹಾಕಿ, ಪರಸ್ಪರ ಏರು ಚರ್ಚೆ ನಡೆದು, ವಾಗ್ವಾದಕ್ಕೆ ಕಾರಣವಾಯಿತು, ಲಾರಿ ಮಾಲೀಕರು ಕ್ರಷರ್ ಮಾಲೀಕರು ಮತ್ತು ಸಂಘದ ಅಧ್ಯಕ್ಷರ ನಡೆಗೆ ಅಕ್ರೋಶ ವ್ಯಕ್ತಪಡಿಸಿ ಖಂಡಿಸಿದರು. ಇಬ್ಬರು ಮಾಲೀಕರು ಅನಗತ್ಯ ಹಠಕ್ಕೆ ಬಿದ್ದರೆ ಕ್ರಷರ್ ಮಾಲೀಕರ ಮುಂದೆ ಆಗುವ ತೊಂದರೆಗಳಿಗೆ ತಾವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಲಾರಿ ಮಾಲೀಕರು ಸಭೆಯನ್ನು ಮುಂದೂಡಿದರು.

ಈ ಸಂದರ್ಭದಲ್ಲಿ ಲಾರಿ ಮಾಲೀಕರುಗಳಾದ ಪೆಮ್ಮನಹಳ್ಳಿ ದೇವರಾಜು, ಹೆಚ್.ಪಿ.ಸುರೇಶ್, ಕರವೇ ಮಂಜುನಾಥ್, ಅಲ್ಪಯ್ಯನಪಾಳ್ಯ ವೆಂಕಟೇಶ್, ಪೆಮ್ಮನಹಳ್ಳಿ ಮಂಜುನಾಥ್, ನಾಗರಾಜು, ಉಮೇಶ್, ವಿವೇಕ್, ಅನಿಲ್ ಕುಮಾರ್, ಐಸಾಮಿಪಾಳ್ಯ ಶ್ರೀಧರ್, ಶ್ರೀಪತಿಹಳ್ಳಿ ಮಂಜುನಾಥ್, ಹಲವಾರು ಲಾರಿ ಮಾಲೀಕರು ಉಪಸ್ಥಿತರಿದ್ದರು.

ಫೆÇೀಟೋ 2 : ಸೋಂಪುರ ಹೋಬಳಿಯ ಮಾಕೇನಹಳ್ಳಿಯ ಕ್ರಷರ್ ಬಳಿ ಸ್ಥಳೀಯ ಲಾರಿ ಮಾಲೀಕರು ಕ್ರಷರ್ ಮಾಲೀಕರ ನಡುವೆ ನಡೆದ ಸಭೆಯಲ್ಲಿ ಕ್ರಷರ್ ಮಾಲೀಕರು ಹಾಗೂ ಲಾರಿ ಮಾಲೀಕರು ನಡುವೆ ಮಾತಿನ ಚಕಮಕಿ ನಡೆಯಿತು