ಸಮಜದಿಂದ ಅಸ್ಪೃಶ್ಯತೆ ತೊಲಗಿಸಬೇಕು

| Published : Mar 07 2025, 11:47 PM IST

ಸಾರಾಂಶ

ಎಲ್ಲರೂ ಅಸ್ಪೃಶ್ಯತೆಯನ್ನು ನಿವಾರಣೆಗೆ ಶ್ರಮಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಬಾಲ್ಯ ವಿವಾಹ ತಡೆಗಟ್ಟುವುದು ಹಾಗೂ ಸಮಾಜಕ್ಕೆ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡುವುದಕ್ಕೆ ಫೋಕಸ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಮಾಜ ಕಲ್ಯಾಣ ಇಲಾಖೆ ಹಾಗೂ ಫೋಕಸ್ ಸಂಸ್ಥೆಯಿಂದ ೨೦೨೪ -೨೫ನೇ ಸಾಲಿನ ಪರಿಶಿಷ್ಟ ಪಂಗಡ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ನಿಯಂತ್ರಣ ಕುರಿತು ವಿಚಾರದ ಸಂಕೀರ್ಣ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಬೇಕು, ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಬಾಲ್ಯ ವಿವಾಹ ತಡೆಗಟ್ಟುವುದು ಹಾಗೂ ಸಮಾಜಕ್ಕೆ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡುವುದಕ್ಕೆ ಫೋಕಸ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂವಿಧಾನದಡಿ ಎಲ್ಲರೂ ಒಂದೇ

ಫೋಕಸ್ ಸಂಸ್ಥೆಯ ಹರೀಶ್ ಮಾತನಾಡಿ, ಜಗತ್ತಿನ ಅತ್ಯಂತ ಪವಿತ್ರವಾದ ಸಂವಿಧಾನ ನಮ್ಮ ಭಾರತ ಸಂವಿಧಾನ ಅದರ ಅಡಿಯಲ್ಲಿ ಎಲ್ಲರೂ ಸಮಾನವಾದ ಬದುಕು ಮತ್ತು ಹಕ್ಕುಗಳನ್ನ ಪಡೆದು ನೆಮ್ಮದಿಯಿಂದ ಬಾಳುವ ವ್ಯವಸ್ಥೆಯನ್ನ ಸಂವಿಧಾನ ಕಲ್ಪಿಸಿಕೊಟ್ಟಿದೆ. ಆಗಾಗಿ ನಾವೆಲ್ಲರು ಸಮಾನರು ಕೀಳು ಮೇಲು ಎಂಬ ಭೇದಭಾವ ಮಾಡದೆ ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಹಿರೇಕರಪ್ಪನಳ್ಳಿ ಎಲ್ಲಪ್ಪ ಮಾತ್ತಾನಾಡಿ, ಪ್ರಕೃತಿಗೆ ಇಲ್ಲದ ತಾರತಮ್ಯ ಈ ಮನುಷ್ಯನಿಗೆ ಯಾಕೆ ಎಂಬುದು ಪ್ರಶ್ನೆಯಾಗಿ ಉಳಿದಿದೆ ಅಲ್ಲದೆ ಈ ಆಧುನಿಕ ಜಗತ್ತಿನ ನಾವು ಮುಂದುವರಿದಷ್ಟು ಪ್ರಜ್ಞವಂತ ಸಮಾಜ ಇನ್ನಷ್ಟು ಅಸ್ಪೃಶ್ಯತೆ ಆಚರಣಿಯಲ್ಲಿ ತೊಡಗಿರುವುದು ವಿಷಾದನಿಯ ಎಂದು ಬೇಸರ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಈ ಸಾಮಾಜಿಕ ಪಿಡುಗನ್ನ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಅಂಜಲಿದೇವಿ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿಕುಮಾರ್,ಕಲಾವಿದರಾದ ರವಿಚಂದ್ರನ್,ನಾಗಪ್ಪ,ಸಾವಿತ್ರಮ್ಮ,ಭುವಿದ್ರ,ಸರಸ್ವತಿ,ಗಾಯತ್ರಿ ಶಾಂತಮ್ಮ, ಸಮಾಜ ಕಲ್ಯಾಣ ಇಲಾಖೆಯ ಬಾನು ಪ್ರಕಾಶ್ ಇದ್ದರು.