ಸಾರಾಂಶ
ಕಿನ್ನಿಗೋಳಿ ಸಮೀಪದ ಉಳಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರ ಲೇಖನ ಸಂಕಲನ ‘ಸುಪ್ತ ಭಾವದ ತಪ್ತ ಧ್ವನಿಗಳು’ ಹೊತ್ತಗೆಯ ಅನಾವರಣ ಇತ್ತೀಚೆಗೆ ನೆರವೇರಿತು.
ಮೂಲ್ಕಿ: ಮೋಹನದಾಸ ಸುರತ್ಕಲ್ ಅವರ ಸುಪ್ತ ಭಾವದ ತಪ್ತ ಧ್ವನಿಗಳು ಹೊತ್ತಗೆಯು ದೇವಮುಖ, ರಾಜಮುಖ, ಪ್ರಜಾ ಮುಖ ಚಿಂತನೆಗಳ ಬರಹಗಳನ್ನು ಒಳಗೊಂಡಿದೆ. ವೇದೋಪನಿಷತ್‌ಗಳ ದೀರ್ಘ ಅಧ್ಯಯನ ಹೊಂದಿರುವ ಮೋಹನದಾಸರ ಬರಹಗಳು ಕೂಡಾ ಸ್ಪಷ್ಟವಾಗಿ ಜನಮನ ತಲುಪುವಂತಿದೆ ಎಂದು ಕಟೀಲು ಕ್ಷೇತ್ರದ ಅರ್ಚಕ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದ್ದಾರೆ.
ಕಿನ್ನಿಗೋಳಿ ಸಮೀಪದ ಉಳಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ನಡೆದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರ ಲೇಖನ ಸಂಕಲನ ‘ಸುಪ್ತ ಭಾವದ ತಪ್ತ ಧ್ವನಿಗಳು’ ಹೊತ್ತಗೆಯ ಅನಾವರಣ ಸಂದರ್ಭ ಅವರು ಆರ್ಶೀವಚನ ನೀಡಿ ಮಾತನಾಡಿದರು.ಪುಸ್ತಕ ಬಿಡುಗಡೆ ಮಾಡಿದ ಸತ್ಯವಾಣಿ ವಿದ್ಯಾಪೀಠ ಬೆಂಗಳೂರಿನ ಪ್ರಾಚಾರ್ಯ ಮತ್ತು ನಿರ್ದೇಶಕ ಡಾ.ಎನ್.ಎ ಪ್ರಸಾದ ಶೆಟ್ಟಿ ಮಾತನಾಡಿ, ಪತ್ರಕರ್ತರಾಗಿದ್ದ ಮೋಹನದಾಸರ ವ್ಯಕ್ತಿತ್ವ ಬಹುಮುಖವಾಗಿದ್ದು ಕ್ಷೇತ್ರ ಮತ್ತು ಸಾಹಿತ್ಯವನ್ನು ಸಾಮನವಾಗಿ ಆರಾಧಿಸುತ್ತಾರೆಂದು ಹೇಳಿದರು.
ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕ್ಷೇತ್ರದಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಚಂಡಿಕಾಯಾಗ ಸೇವೆ ಮಾಡಿದ ಕೆ.ಸುಧಾಕರ ಆಳ್ವ ಮತ್ತು ಕೆ.ಸುಧಾಕರ ಶೆಟ್ಟಿ ಕಾವೂರು ದಂಪತಿಗಳನ್ನು ಸನ್ಮಾನಿಸಲಾಯಿತು. ವೇ.ಮೂ.ರಮಾನಾಥ ಭಟ್ ಮೂಲ್ಕಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಚೇತನಾ ಮೋಹನದಾಸ್, ಕಾರ್ಯದರ್ಶಿ ಶುಭಲಕ್ಷೀ, ಪ್ರಥಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿ, ಪ್ರಸ್ಥಾಪಿಸಿದರು. ರಾಧಾ ಶೆಣೈ ಕಿನ್ನಿಗೋಳಿ ವಂದಿಸಿದರು.