ಪ್ರತಿ ನೃತ್ಯಕ್ಕೆ ವೇಷಭೂಷಣ, ಕಲೆ ಆಕಾರ ವಿಕಾರಗಳು, ಬೆಂಕಿ ಹಿಡಿದು ನೃತ್ಯಗಳು ಒಂದುಹಂತದಲ್ಲಿ ನೆರೆದಿದ್ದ ಜನರನ್ನು ಬಿಗಿಹಿಡಿದು ಕೂಡಿಸಿತ್ತು.

ಕಾರಟಗಿ: ನಾಡಿನ ಕಲೆ,ಸಾಹಿತ್ಯ,ನೃತ್ಯ, ಸಂಸ್ಕೃತಿ, ಇತಿಹಾಸ, ಪುರಾಣ, ಕವಾಲಿ ಮತ್ತು ಜಾನಪದ ಹೀಗೆ ಇದ್ದವು ಎನ್ನುವುದನ್ನು ರಾಜ್ಯ ವಿವಿಧ ಜಿಲ್ಲೆಗಳ ಮಕ್ಕಳ ತಮ್ಮ ಪ್ರತಿಭೆಯ ಮೂಲಕ ಆನಾವರಣಗೊಳಿಸಿ ನೆರೆದಿದ್ದ ಅಪಾರ ಸಂಖ್ಯೆ ಪ್ರೇಕ್ಷರನ್ನು ಹಿಡಿದಿಟ್ಟುಕೊಂಡು ಸುಪ್ತ ಪ್ರತಿಭೆ ಪ್ರದರ್ಶಿಸಿದರೆ ಕಲೆ ಸಂಸ್ಕೃತಿಯಗಳ ಕಾರಂಜಿ ನಿರಂತರ ಚಿಮ್ಮುತ್ತಿತ್ತು. ಪ್ರತಿಭಾ ಕಾರಂಜಿಗೆ ಎರಡು ದಿನಗಳ ಈ ಮಕ್ಕಳ ಕಲರವಕ್ಕೆ ಭತ್ತದ ಕಣಜ ವೇದಿಕೆಯಾಗಿ ಮಕ್ಕಳ ಪ್ರತಿಭೆ ಕಣ್ಮನ ತುಂಬಿಕೊಂಡು ಸಾಕ್ಷಿಯಾಯಿತು.

ಇಲ್ಲಿನ ಸಿದ್ದೇಶ್ವರ ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳನ್ನು ಪ್ರದರ್ಶಿಸಿದ ನಮ್ಮ ಕನ್ನಡ ನಾಡಿನ ಮಕ್ಕಳು ಅಕ್ಷರಶ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎನ್ನುವುದನ್ನು ನಿರೂಪಿಸಿದರು. ಆ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲ್ಲೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿತು.

ಮೇಳೈಸಿದ ಕಲೆಗಳು: ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆಗಳು ಮಕ್ಕಳ ಕಲರವಕ್ಕೆ ವೇದಿಕೆಯಾಗಿತ್ತು. ನಾಡಿನ ಸಾಂಸ್ಕೃತಿಕ ಪರಂಪರೆ ಸಾರುವ ಅನೇಕ ಜಾನಪದಗಳ ಕಲೆಗಳಾದ ಗೊರವರ ಕುಣಿತ, ಲಂಬಾಣಿ ನೃತ್ಯ ಸೋಮನ ಕುಣಿತ, ಮೋಹರಾಮ್ ಕುಣಿತ, ಪೂಜಾ ಕುಣಿತ, ನಂದಿಕೋಲು ಕುಣಿತ, ಸುಗ್ಗಿ ಹಬ್ಬದ ನೃತ್ಯಗಳು ಹೀಗೆ ವೈವಿಧ್ಯಮ ಜಾನಪದ ಕಲೆಗಳು ಅನಾವರಣಗೊಂಡವು. ಬೆಂಗಳೂರು, ಮೈಸೂರು, ಹಳೇ ಮೈಸೂರು, ಹಾಸನ, ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗ ಒಟ್ಟು 35 ಜಿಲ್ಲೆಗಳಿಂದ ಬಂದ ಮಕ್ಕಳು ಜನಮನ ಸೇರಿ ನಿರ್ಣಾಯಕರನ್ನು ಸೊರೆಗೊಳ್ಳುಸಿದರು.

ಪ್ರತಿ ನೃತ್ಯಕ್ಕೆ ವೇಷಭೂಷಣ, ಕಲೆ ಆಕಾರ ವಿಕಾರಗಳು, ಬೆಂಕಿ ಹಿಡಿದು ನೃತ್ಯಗಳು ಒಂದುಹಂತದಲ್ಲಿ ನೆರೆದಿದ್ದ ಜನರನ್ನು ಬಿಗಿಹಿಡಿದು ಕೂಡಿಸಿತ್ತು. ಉತ್ತರ ಕರ್ನಾಟಕದ ಭಾವೈಕತೆ ಸಾರುವ ಆಲಾಯಿ ಕುಣಿತ ಅಂದರೆ ಮೊಹರಂ ಕುಣಿತವು ಜನರನ್ನು ಆಕರ್ಷಿಸಿತು. ಇಂದಿನ ಯುವಪೀಳಿಗೆಯ ಮಕ್ಕಳಿಗೆ ಇಂತಹ ನೆಲಮೂಲದ ಜಾನಪದ ಕಲೆಗಳ ನೃತ್ಯ ಮಾಡಿದ್ದು ನಾಡಿನ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿತು.

ಕವ್ವಾಲಿ: ಇನ್ನು ಕೆಪಿಸಿ ಶಾಲೆ ಒಳಾಂಗಣದ ಸಭಾಂಗಣದಲ್ಲಿ ಸಮಾನಂತರ ವೇದಿಕೆಯಲ್ಲಿ ಜರುಗಿದ ಕವ್ವಾಲಿ ನೃತ್ಯವು ರಾಜ್ಯ ವಿವಿಧ ಜಿಲ್ಲೆಗಳ ತಂಡಗಳು ಪಾಲ್ಗೊಂಡು ಲಯ, ತಾಳ ಹಾಗೂ ವಾದ್ಯಗಳೊಂದಿಗೆ ಜನರನ್ನು ಆಕರ್ಷಿಸಿತು.

ಭರತನಾಟ್ಯ: ಮರ್ಲಾನಹಳ್ಳಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಜರುಗಿದ ಭರತನಾಟ್ಯ ಕಲೆ ವಿವಿಧ ಜಿಲ್ಲೆಯ ತಂಡಗಳು ಪ್ರದರ್ಶಿಸಿದರು. ಒಂದೊಂದು ಜಿಲ್ಲೆ ವಿವಿಧ ಭರತನಾಟ್ಯ ನೃತ್ಯ ಮಾಡಿದರು. ಹೀಗೆ ನೆಲದ ಮೂಲಕದ ಜಾನಪದ ಕಲೆಗಳು ಆನಾವರಣಗೊಂಡಿರುವುದಲ್ಲೆ ಶಾಲಾ ಮಕ್ಕಳಲ್ಲಿ ಕೆಲ ಆಸಕ್ತಿ ಅಭಿರುಚಿ, ಹೆಚ್ಚಿಸುವಂತೆ ಮಾಡಿತು. ಜಾನಪದ ನೃತ್ಯಗಳಲ್ಲಿ ಮಕ್ಕಳು ಮಾಡಿದ ಸಾಹಸ, ಕಸರತ್ತುಗಳೂ ಗಮನ ಸೆಳೆದವು. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಜರುಗಿದ ಎರಡು ದಿನಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲ್ಲೋತ್ಸವ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತು.

ರೊಟ್ಟಿ, ಕಾಳುಪಲ್ಲೆ: ಎರಡನೇ ದಿನವೂ ಸಹ ಎಲ್ಲ ಸ್ಪರ್ಧಾಗಳು, ಶಿಕ್ಷಕರು ಮತ್ತು ಮಕ್ಕಳೊಂದಿಗೆ ಬಂದ ಪಾಲಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮರ್ಲಾನಹಳ್ಳಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು ಊಟಕ್ಕೆ ಭಾನುವಾರ ಬೆಳಗ್ಗೆ ರೈಸ್‌ಬಾತ್, ಲೆಮೆನ್ ರೈಸ್, ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಹೆಸರು ಕಾಳು ಪಲ್ಲೆ, ಅನ್ನ, ಸಾಂಬರ್, ಹಣ್ಣುಮಿಶ್ರಿತ ಮೊಸರನ್ನ, ಪುಡಿ ಮತ್ತು ಉಪ್ಪಿನ ಕಾಯಿ ಬಡಿಸಲಾಯಿತು. ಬೆಂಗಳೂರು, ಮೈಸೂರು ಕರಾವಳಿ ಭಾಗದವರು ಊಟದ ಮತ್ತು ವ್ಯವಸ್ಥೆ ನೆನೆದರು.