ಸಾರಾಂಶ
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುರೈತ ದಸರಾ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಿರುವ ಕೃಷಿ ವಸ್ತುಪ್ರದರ್ಶನವು ಅನ್ನದಾತರಿಗಾಗಿ ತಾಂತ್ರಿಕ ಕೃಷಿ ಜಗತ್ತನ್ನು ಅನಾವರಣಗೊಳಿಸಿದೆ.
ಈ ಕೃಷಿ ವಸ್ತುಪ್ರದರ್ಶನವು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಗಳ ಯೋಜನೆಗಳ ಪ್ರಚಾರ, ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಒಳಗೊಂಡಿದೆ.ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳ ವಿವರ, ಸಿರಿಧಾನ್ಯ, ರೇಷ್ಮೆ ಬೆಳಗಳ ವಿವರ, ಅರಣ್ಯ ಕೃಷಿ, ಬೆಳೆ ನಿರ್ವಹಣೆ ಮತ್ತು ರೋಗ ನಿಯಂತ್ರಣ ಕ್ರಮಗಳು, ಕೃಷಿ ಉಕರಣಗಳು ಸೇರಿದಂತೆ ಸಮಗ್ರ ಕೃಷಿಗೆ ಸಂಬಂಧಿಸಿದಂತೆ ವೈವಿಧ್ಯಮಯ ವಸ್ತುಗಳಿವೆ.
ಸಮಗ್ರ ಕೃಷಿ ಪದ್ಧತಿ, ಆಧುನಿಕ ರೇಷ್ಮೆ ನೂಲು ಬಿಚ್ಚಾಣಿಕೆ, ರೇಷ್ಮೆ ಗೂಡಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಅರಣ್ಯ ಇಲಾಖೆ ಮಳಿಗೆ, ಮಂಡ್ಯ ಬೆಲ್ಲ ಉತ್ಪಾದಕರ ಕಂಪನಿನಿಂದ ಸಾವಯವ ಬೆಲ್ಲ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಮೀನುಗಾರಿಗೆ ಸೇರಿದಂತೆ ವಿವಿಧ ಭ್ರೂಣಗಳ ಪ್ರದರ್ಶನ ಮಾಡಲಾಗಿತ್ತು. ಇದರಲ್ಲಿ ಹಸುವಿನ ಹೃದಯ, 8 ಕಾಲಿನ ಕುರಿಮರಿ, ಎರಡು ತಲೆಯ ಕರು, ಗೋದಿ ನಾಗರಹಾವು, ಎರಡರಿಂದ ಎಂಟು ತಿಂಗಳ ಹಸುವಿನ ಕರು ಭ್ರೂಣ ಹಾಗೂ ಬೆಳವಣಿಗೆಯ ಹಂತಗಳನ್ನು ಪ್ರಾತ್ಯಕ್ಷಿಕೆ ಇಡಲಾಗಿತ್ತು.ಲಕ್ಷಾಂತರ ಬೆಲೆ ಬಾಳುವ ಎತ್ತು, ಕುರಿ:
ಬೆಂಗಳೂರು ಉದ್ದ ಕಿವಿ ಮೇಕೆ ತಳಿಗಾರರ ಸಂಘದ ಉದ್ದ ಕಿವಿ ಮೇಕೆ, 3 ರಿಂದ 5 ಲಕ್ಷ ಲಕ್ಷ ಬೆಲೆ ಬಾಳುವ ಡಾರ್ಪರ್ ಕುರಿ, ಲಕ್ಷಾಂತರ ಬೆಲೆಯ ಹಳ್ಳಿಕಾರ್ ಎತ್ತುಗಳು, ಸುಮುಧ ಸಾವಯವ ತೋಟ, ಶ್ರೀ ಗಣೇಶ್ ಫಾರಂ ಹುಲ್ಲಹಳ್ಳಿ ಫಾರಂನ ಬಂಡೂರು ಕುರಿ, ದೇವಣಿ ತಳಿಯ ಹಸು, ಹಳ್ಳಿಕಾರ್, ಸಾಹೀವಾಲ್, ಗಿರ್, ಮಲನಾಡ್ ಗಿಡ್ಡ, ಥಾರ್ಪಾರ್ಕರ್ ತಳಿಯ ದೇಸಿ ಹಸುಗಳು, ಓಂಗೋಲ್, ಪುಂಗನೂರ್ ತಳಿಯ ಜಾನುವಾರು ಆಕರ್ಷಣೆಯಾಗಿವೆ.ಪಶುಸಂಗೋಪನ ಇಲಾಖೆ, ರೇಷ್ಮೆ ಇಲಾಖೆಯ ವಿವಿಧ ಮಳಿಗೆಗಳಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ಮತ್ತು ಕೃಷಿ ಮಾಡುವ ವಿಧಾನದ ಕುರಿತು ಪ್ರತಿಕೃತಿಗಳ ಮೂಲಕ ಮಾಹಿತಿ ನೀಡಿದರೇ, ಬೆಂಗಳೂರಿನ ಕೃಷಿ ವಿವಿ ಮಳಿಗೆ ಸಾವಯವ ಕೃಷಿ ಉತ್ಪನ್ನಗಳು, ಜಿಲ್ಲೆಯ ವಿವಿಧ ತಾಲೂಕಿನ ಜಮೀನಿನಲ್ಲಿ ಬೆಳೆದ ಬೆಳೆಗಳು ಪ್ರದರ್ಶನವಿದೆ. ತೋಟಗಾರಿಕೆಯ ಬೆಳೆಗಳ ಕುರಿತು ಸಸಿಗಳು ಮತ್ತು ಬೆಳೆ ಬೆಳೆಯುವುದು ಮತ್ತು ರೋಗ ತಡೆಯ ಮುನ್ನಚ್ಚರಿಕೆ ಕ್ರಮಗಳನ್ನು ಮೈಸೂರಿನ ತೋಟಗಾರಿಕೆ ಮಾಹಿತಿ ನೀಡುತ್ತಿದೆ.
ಸಾಮಾಜಿಕ ಅರಣ್ಯ ವಿಭಾಗ ವತಿಯಿಂದ ಶ್ರೀಗಂಧ, ರಕ್ತಚಂದನ, ಹುಣಸೆ, ತೇಗ, ಸಿಲ್ವರ್, ಹೆಬ್ಬೇವು ಗಿಡಗಳು ಮೆರಗು ತಂದಿವೆ. ಟಿಲ್ಲರ್ಸ್ ಅಂಡ್ ಟ್ರ್ಯಾಕ್ಟರ್ಸ್, ಕೃಷಿ ಪಂಪ್ ಸೆಟ್‌ಗಳ ನವೀನ ಮಾದರಿಯ ಪೈಪ್ಸ್, ಸಲಕರಣೆಗಳಿವೆ. ರಾಸಾಯನಿಕ ಮುಕ್ತ ಬೆಲ್ಲ, ಹಾಲಿನ ಉತ್ಪನ್ನಗಳ ಪೇಡಾ, ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದಲ್ಲಿವೆ.ಕೃಷಿ ಯಂತ್ರೋಪಕರಣ:
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನಾವೀನ್ಯ ಯಂತ್ರೋಪಕರಣಗಳು ವಸ್ತುಪ್ರದರ್ಶನಲ್ಲಿ ಗಮನ ಸೆಳೆದವು. 6, 9 ಎಚ್‌ಪಿ ಪವರ್ ಟಿಲ್ಲರ್‌ಗಳು, ಸೈಕಲ್ ವೀಡರ್, ಪವರ್ ವೀಡರ್ ಪ್ರದರ್ಶನದ ಜೊತೆಗೆ ಕೃಷಿ ಉಪಕರಣಗಳ ಮಾರಾಟ ರಿಯಾಯಿತಿ ದರದಲ್ಲಿತ್ತು.ಅಲ್ಲದೆ, ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಇತ್ತು. ಫರ್ಟಿಲೈಜರ್ಸ್ ಕಂಪನಿಗಳ ಮಳಿಗೆಗಳು ರಾಸಾಯನಿಕ ಗೊಬ್ಬರದ ಬಗ್ಗೆ ಅರಿವು ನೀಡಿದವು. ಬೆಳೆಗೆ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸಬೇಕು, ರೋಗ ಬರದಂತೆ ನಿಯಂತ್ರಿಸುವುದು ಮಾದರಿಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಸೇರಿ ಹಲವು ಮಾಹಿತಿ ಲಭ್ಯವಿದೆ.
ಬೂಮ್ ಸ್ಪ್ರೇಯರ್ ಆಕರ್ಷಣೆರೈತ ದಸರಾ ಕೃಷಿ ವಸ್ತುಪ್ರದರ್ಶನದಲ್ಲಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಬೃಹತ್ ಬೂಮ್ ಸ್ಪ್ರೇಯರ್ ಎಲ್ಲರ ಗಮನ ಸೆಳೆಯಿತು. ಇದರ ಬೆಲೆ 19 ಲಕ್ಷವಾಗಿದ್ದು, ರೈತರಿಗೆ 7 ಲಕ್ಷ ಸಬ್ಸಿಡಿ ಸಿಗುತ್ತದೆ. ಇದು 600 ಲೀಟರ್ ಸಾಮರ್ಥ್ಯ ಹೊಂದಿದ್ದು, 45 ನಿಮಿಷದಲ್ಲಿ 5 ಎಕರೆಗೆ ಕ್ರಿಮಿನಾಶಕ ಸಿಂಪಡಿಸಬಹುದು. ಇದು ಹೆಚ್ಚು ಎತ್ತರ ಬೆಳೆಯದ ದವಸ ಧಾನ್ಯ ಬೆಳೆಗಳಿಗೆ ಬಳಸಬಹುದಾಗಿದೆ.