ಸಾರಾಂಶ
ಬಿಜೆಪಿ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಪಕ್ಷ ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸುತ್ತಿದೆ.
ಕುಕನೂರು: ಬಿಜೆಪಿ ಹೆಮ್ಮರವಾಗಿ ಬೆಳೆಯಲು ದೀನದಯಾಳ ಉಪಾಧ್ಯಾಯರ ಕೊಡುಗೆ ಅಪಾರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ದೀನದಯಾಳ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೇವಲ ಬೆರಳಣಿಕೆಯಷ್ಟು ಇದ್ದ ಬಿಜೆಪಿ ಸದಸ್ಯರ ಸಂಖ್ಯೆ ಇಂದು 14 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಬಿಜೆಪಿ ತನ್ನದೆ ಆದ ತತ್ವ, ಸಿದ್ಧಾಂತ ಹೊಂದಿದ್ದು, ಜನಮಾನಸ ಪಕ್ಷವಾಗಿದೆ. ಬಿಜೆಪಿ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಪಕ್ಷ ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಹಿರಿಮೆ ಎತ್ತಿ ಹಿಡಿದಿದ್ದಾರೆ. ಅಭಿವೃದ್ಧಿಯಿಂದ ಮರಿಚೀಕೆಯಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ರಾಷ್ಟ್ರದ ರಕ್ಷಣೆಗೆ ಎಲ್ಲ ಹಂತದಲ್ಲೂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.ಮುಖಂಡ ಬಸಲಿಂಗಪ್ಪ ಬೂತೆ, ಶಿವಕುಮಾರ ನಾಗಲಾಪೂರಮಠ ಮಾತನಾಡಿದರು. ಕುಕನೂರು ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಹಾಳಕೇರಿ, ಕರಬಸಯ್ಯ ಬಿನ್ನಾಳ, ಲಕ್ಷ್ಮಣ ಕಾಳಿ, ಪ್ರಕಾಶ ಬಿನ್ನಾಳ, ಪ್ರಕಾಶ ಬೋರಣ್ಣವರ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ, ಬಸವರಾಜ ಪೂಜಾರಿ ಇತರರಿದ್ದರು.