ಯುಪಿಎಂಸಿ: ವೃತ್ತಿ ಆಧಾರಿತ ಕೋರ್ಸ್‌ಗಳ ಮಾಹಿತಿ ಕಾರ್ಯಕ್ರಮ

| Published : Jul 29 2025, 01:50 AM IST

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಅಧ್ಯಯನ ಘಟಕದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸಿಎ, ಸಿಎಸ್, ಸಿಎಂಎ - ವೃತ್ತಿ ಆಧಾರಿತ ಕೋರ್ಸ್ ಗಳ ಮಾಹಿತಿ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಅಧ್ಯಯನ ಘಟಕದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸಿಎ, ಸಿಎಸ್, ಸಿಎಂಎ - ವೃತ್ತಿ ಆಧಾರಿತ ಕೋರ್ಸ್ ಗಳ ಮಾಹಿತಿ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜುಲೈ ೨೬ರಂದು ಜರುಗಿತು.ಟ್ಯಾಪ್ಮಿ ಮಣಿಪಾಲದ ಪ್ರಾಧ್ಯಾಪಕರಾದ ಪ್ರೊ. ನಂದನ್ ಪ್ರಭು ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು, ಸಿಎ., ಸಿಎಂಎ., ಸಿಎಸ್., ಐಸಿಡಬ್ಲೂಎ ಕೋರ್ಸ್‌ಗಳನ್ನು ಮಾಡುವ ಕುರಿತು ವಿವರವಾಗಿ ತಿಳಿಸಿದರು.

ಒಂದು ವಿಷಯದಲ್ಲಿ ಆಸಕ್ತಿ ಇಲ್ಲದೆ ಹೋದಲ್ಲಿ ತರಗತಿಗೆ ಗೈರುಹಾಜರಾಗುವುದಲ್ಲ, ಬದಲಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾರ್ಗ ಕಂಡುಕೊಳ್ಳಬೇಕು, ಸಾಧಿಸಬೇಕೆಂಬ ಉತ್ಕಟ ಪ್ರಜ್ಞೆ ಜಾಗ್ರತವಾಗಬೇಕು, ಪಲಾಯನ ಮಾರ್ಗ ಸಾಧನೆಗೆ ತೊಡಕನ್ನುಂಟು ಮಾಡುತ್ತದೆ, ಭಾಷಾ ಜ್ಞಾನ, ಭಾಷಾ ಕೌಶಲಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕು ಹಾಗೆಯೇ ಪದವಿಯೊಂದಿಗೆ ಕಂಪ್ಯೂಟರ್ ಆಧಾರಿತ ತಾಂತ್ರಿಕ ತರಬೇತಿ ಪಡೆಯುವುದು ತುಂಬಾ ಅಗತ್ಯ ಅದನ್ನು ನಿಮ್ಮ ಕಾಲೇಜಿನಲ್ಲಿ ನೀಡುತ್ತಿರುವುದು ನಿಮಗೆ ವರದಾನವಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಉಪನ್ಯಾಸಕ ರಾಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.