ವಿಧಾನ ಪರಿಷತ್ನ ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಜಯಭೇರಿ ಬಾರಿಸಿರುವುರು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
- ಇವಿಎಂ ಬೇಡ ಅಂದವರು ಈಗ ಬ್ಯಾಲೆಟ್ ಬೇಡ ಅಂದ್ರೂ ಅಚ್ಚರಿ ಇಲ್ಲ: ಬಿ.ಶ್ರೀರಾಮುಲು ಲೇವಡಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಿಧಾನ ಪರಿಷತ್ನ ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಜಯಭೇರಿ ಬಾರಿಸಿರುವುರು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ಮನೆಯ ನಾಲ್ಕೂ ಕ್ಷೇತ್ರಗಳಲ್ಲೂ ಗೆದ್ದಿರುವ ಎನ್ಡಿಎ ಅಭ್ಯರ್ಥಿಗಳಿಗೆ ಅಭಿನಂದಿಸುತ್ತೇನೆ. ಈ ಅಭೂತಪೂರ್ವ ಗೆಲುವಿನ ಫಲಿತಾಂಶವು ಮುಂಬರುವ ವಿಧಾನಸಭೆ ಚುನಾವಣೆಗೂ ದಿಕ್ಸೂಚಿಯಾಗಿದೆ ಎಂದರು.ಶಿಕ್ಷಕರು, ಪದವೀಧರ ಮತದಾರರು ಇಂದು ಎಲ್ಲ ಯೋಚನೆ ಮಾಡಿಯೇ ಮತದಾನ ಮಾಡಿದ್ದಾರೆ. ಒಂದು ಕಡೆ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಖಜಾನೆಯಲ್ಲಿ ದುಡ್ಡು ಇಲ್ಲವೆಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಇದು ಬರಿಗೈ ಸರ್ಕಾರ ಎಂಬುದಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಗಂಭೀರ ಬರದಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಕೈ ಖಾಲಿ ಇದ್ದಂತೆಯೇ ಕಾಂಗ್ರೆಸ್ ಕೈ ಒಂಟಿ ಕೈ, ದೋಚುವ ಕೈ ಆಗಿದೆ. ಶಿಕ್ಷಕರು ಮತ್ತು ಪದವೀಧರ ಮತದಾರರು ಕಾಂಗ್ರೆಸ್ ಸರ್ಕಾರಕ್ಕೆ ಗಟ್ಟಿಯಾದ ಉತ್ತರ, ಸಂದೇಶವನ್ನೇ ನೀಡಿದ್ದಾರೆ. ಇವಿಎಂ ಮೇಲೆ ವಿಶ್ವಾಸವೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಬ್ಯಾಲೆಟ್ ಪೇಪರ್ನಲ್ಲೂ ಪರಿಷತ್ನ ನಾಲ್ಕೂ ಕ್ಷೇತ್ರಗಳ ಶಿಕ್ಷಕರು, ಪದವೀಧರ ಮತದಾರರು ಉತ್ತರ ನೀಡಿದ್ದಾರೆ. ಬ್ಯಾಲೆಟ್ ಪೇಪರ್ ಚುನಾವಣೆ ಬಳಿಕ ಈಗ ಮುಂದೆ ಕಾಂಗ್ರೆಸ್ಸಿನವರು ಏನು ಹೋರಾಟ ಇರುತ್ತದೋ ನೋಡೋಣ ಎಂದು ಅವರು ಲೇವಡಿ ಮಾಡಿದರು.ತಮಗೆ ಇವಿಎಂ ಬೇಡವೇ ಬೇಡ ಎನ್ನುತ್ತಿದ್ದವರು ಈಗ ಪರಿಷತ್ನ ನಾಲ್ಕೂ ಕ್ಷೇತ್ರಗಳ ಚುನಾವಣಾ ಫಲಿತಾಂಶದ ನಂತರ ಇವಿಎಂ ಅಷ್ಟೇ ಅಲ್ಲ, ಬ್ಯಾಲೆಟ್ ಪೇಪರ್ ಸಹ ಬೇಡವೆಂದರೂ ಅಚ್ಚರಿ ಇಲ್ಲ. ಇನ್ನು ಮುಂದೆ ಕಾಂಟ್ರ್ಯಾಕ್ಟ್ ಆಧಾರದ ಮೇಲೆ ಅಧಿಕಾರ ಕೊಡಿ ಅಂತಾರಷ್ಟೇ. ಮೇಲ್ಮನೆಯ ನಾಲ್ಕೂ ಕ್ಷೇತ್ರಗಳ ಗೆಲುವು ಬಿಜೆಪಿ-ಜೆಡಿಎಸ್ ಪಕ್ಷಗಳ ಒಗ್ಗಟ್ಟಿನ ಗೆಲುವಾಗಿದೆ ಎಂದು ತಿಳಿಸಿದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ ಟಿ.ದಾಸಕರಿಯಪ್ಪ, ಸಮಾಜದ ಮುಖಂಡರಾದ ಕೃಷ್ಣಕುಮಾರ, ದುರುಗೇಶ, ಮೂರ್ತೆಪ್ಪ, ಮಂಜುನಾಥ, ಮಾರುತಿ, ವಿಜಯ್ ಇತರರು ಇದ್ದರು.- - -
(ಬಾಕ್ಸ್-1)* ಡಿಕೆಶಿ ಸಿಎಂ ಆದ ನಂತರ ಸಚಿವ-ಶಾಸಕರ ಬೆಂಬಲವೇ ಇಲ್ಲ: ಶ್ರೀರಾಮುಲು ಟೀಕೆ
- ರಾಜ್ಯದ ಬೊಕ್ಕಸ ಖಾಲಿ ಮಾಡಿ, ಹೈಕಮಾಂಡ್ ಖಜಾನೆ ತುಂಬುವ ಕೆಲಸ: ಆರೋಪದಾವಣಗೆರೆ: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾದ ನಂತರ ಯಾವುದೇ ಸಚಿವರು, ಶಾಸಕರ ಬೆಂಬಲವೂ ಇಲ್ಲದಂತಾಗಿ, ಈಗ ಬರಿಗೈ ಮುಖ್ಯಮಂತ್ರಿ ಆಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.
ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ, ಅಧಿಕಾರಿಗಳು ಮುಖ್ಯಮಂತ್ರಿ ಮಾತನ್ನೇ ಕೇಳುತ್ತಿಲ್ಲ. ಡಿ.ಕೆ.ಶಿವಕುಮಾರಗೆ ಸಚಿವರು, ಶಾಸಕರ ಬೆಂಬಲ ಸಹ ಇಲ್ಲ. ಸಿದ್ದರಾಮಯ್ಯ ಸಹ ಸಿಎಂ ಡಿ.ಕೆ.ಶಿವಕುಮಾರಗೆ ಬೆಂಬಲ ಕೊಡುತ್ತಿಲ್ಲ. ಸಚಿವರು, ಶಾಸಕರು ಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿಯಾಗಿ ಒಪ್ಪುವ ಸ್ಥಿತಿಯಲ್ಲಿಲ್ಲ. ಕರ್ನಾಟಕ ರಾಜ್ಯದ ಖಜಾನೆ ಖಾಲಿ ಮಾಡಿ, ಹೈಕಮಾಂಡ್ ಖಜಾನೆ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರೆ ಮೊದಲ ಪ್ರಾಶಸ್ತ್ಯ ದೆಹಲಿಯಾಗಿದೆ. ದೆಹಲಿಯಲ್ಲಿರುವ ನಾಯಕರು ಸಂತೋಷವಾಗಿರಬೇಕು. ಕಾಂಗ್ರೆಸ್ ನಾಯಕರ ಪಾಲಿಗೆ ಕರ್ನಾಟಕವು ಎಟಿಎಂ ಆಗಿದೆ. ರಾಜ್ಯದ ಜನರು, ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರಕ್ಕೆ ಅದ್ಯಾವುದರ ಪರಿವೆಯೂ ಇಲ್ಲ. ಸರ್ಕಾರದ ಬೇಜವಾಬ್ಧಾರಿಯಿಂದಾಗಿ ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಮುಂ ಬರುವ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆ ಎಂದು ರಾಮುಲು ತಿಳಿಸಿದರು.
ವಿಧಾನಸಭೆಗೆ ನಡೆಯುವ 2028ರ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಯುವ ಮುಖಂಡ ಶ್ರೀನಿವಾಸ ಟಿ.ದಾಸಕರಿಯಪ್ಪ ಶಾಸಕರಾಗಿ ಆಯ್ಕೆಯಾಗುತ್ತಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಮತದಾರರು ತಮ್ಮ ಹೆಸರು ಬಿಟ್ಟು ಹೋಗಿದೆಯೆಂದು ಆಕ್ಷೇಪಣೆ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್ಸಿನವರು ಮಾತ್ರ ಆಕ್ಷೇಪಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.ಬೋಗಸ್ ಮತದಾರರನ್ನು ಪಟ್ಟಿಗೆ ಸೇರಿಸಿ, ಹಿಂಬಾಗಿಲಿನಿಂದ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್ಸಿಗೆ ಎಸ್ಐಆರ್ ಪ್ರಕ್ರಿಯೆಯಿಂದಾಗಿ ಮತ ಭೀತಿ ಕಾಡುತ್ತಿದೆ. ಇಡೀ ದೇಶದಲ್ಲಿ 13 ಕೋಟಿ ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 1 ಕೋಟಿ ಮತದಾರರ ಹೆಸರು ಡಿಲೀಟ್ ಆಗಿವೆ ಎಂದು ಶ್ರೀರಾಮುಲು ಎಸ್ಐಆರ್ ಪ್ರಕ್ರಿಯೆ ಸಮರ್ಥಿಸಿಕೊಂಡರು.
- - -(ಬಾಕ್ಸ್-2)
* ಸಿದ್ದು ಪರ ಮಾತನಾಡಿದ ಮೊದಲ ವ್ಯಕ್ತಿ ನಾನು ದಾವಣಗೆರೆ: ಮೋಸದ ಪ್ರಪಂಚದಲ್ಲಿ ಯಾರೂ ನಿಲ್ಲುವುದಕ್ಕೆ ಆಗುವುದಿಲ್ಲ. ಸಿದ್ದರಾಮಯ್ಯಗೆ ತೊಂದರೆಯಾದಾಗ ಅವರ ಪರ ಮಾತನಾಡಿದ ಮೊದಲ ವ್ಯಕ್ತಿ ನಾನು ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲವೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕಪ್ಪುಚುಕ್ಕೆ ಇಟ್ಟುಕೊಂಡು, ರಾಜಕಾರಣ ಮಾಡಿದ ವ್ಯಕ್ತಿಯಲ್ಲ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ನಾನು ಸ್ಪರ್ಧಿಸಿದ್ದೆ. ಅಷ್ಟು ದೊಡ್ಡ ಮನುಷ್ಯನಿಗೆ ಕಳಂಕ ತಂದ ವೇಳೆ ತನಿಖೆ ಆಗಬೇಕಲ್ಲವೇ? ಈ ಬಗ್ಗೆ ಸಮಗ್ರ ತನಿಖೆಯಾಗಿ, ಸತ್ಯಾಸತ್ಯತೆ ಹೊರಬರಲಿ ಎಂದು ಅವರು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನಮ್ಮ ಭಾಗದಲ್ಲಿ ಬಹಳಷ್ಟು ಗೌರವವಿದೆ. ಆದರೆ, ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆ ಬಾಯಿಬಡುಕ. ಸೋಷಿಯಲ್ ಮೀಡಿಯಾ ಮಂತ್ರಿ. ತನ್ನ ಇಲಾಖೆಯಲ್ಲೇ ಏನಾಗುತ್ತಿದೆಯೆಂಬುದು ಗೊತ್ತಿಲ್ಲದ ಮಂತ್ರಿ ಪ್ರಿಯಾಂಕ್ ಖರ್ಗೆ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಯಾರಿಗೆ ಪಾಪ್ಯುಲಾರಿಟಿ ಇರೋದಿಲ್ಲವೋ ಅವರು ಈ ರೀತಿ ಚೀಪ್ ಪಾಪ್ಯುಲಾರಿಟಿ ಮಾಡುತ್ತಾರೆ. ಗಾಂಧಿ ಕುಟುಂಬವನ್ನು ಮೆಚ್ಚಿಸಲು ನರೇಂದ್ರ ಮೋದಿ ಸಾಹಬರನ್ನು ಬೈಯ್ಯುವ ಕೆಲಸ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆಗೆ ದೇಶದ ಜನರ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ತಾಕೀತು ಮಾಡಿದರು.
ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್ ಜೂಜಾಟ ಎಲ್ಲೆಡೆ ನಡೆದಿದೆ. ಎಲ್ಲ ಕಡೆ ಮಟ್ಕಾ,ಇಸ್ಪೀಟ್ ಜೋರಾಗಿ ನಡೆಯುತ್ತಿದ್ದು, ಡ್ರಗ್ಸ್ ದಂಧೆಯೂ ಜೋರಾಗಿ ನಡೆಯುತ್ತಿದೆ. ಭ್ರಷ್ಟಾಚಾರವು ಮಿತಿ ಮೀರಿದೆ. ವಿಧಾನಸೌಧದ ಪ್ರತಿಯೊಂದು ಕಲ್ಲು ಸಹ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿವೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂಬುದು ಸ್ವತಃ ಆಡಳಿತ ಪಕ್ಷದವರಿಗೂ ಅರಿವಿದೆ ಎಂದು ತಿಳಿಸಿದರು.ಏನನ್ನೇ ಕೇಳಿದರೂ ಗ್ಯಾರಂಟಿ ಅನ್ನುವ ಕಾಂಗ್ರೆಸ್ಸಿನವರು ಒಂದು ಅರ್ಥ ಮಾಡಿಕೊಳ್ಳಬೇಕು. ನಾವ್ಯಾರೂ ಗ್ಯಾರಂಟಿಗಳ ವಿರುದ್ಧವಾಗಿಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಿ. ರಾಜ್ಯದ ಮುಖ್ಯಮಂತ್ರಿಯೇ ಜೇಬು ಖಾಲಿ ಅಂತಾ ಹೇಳಿದರೆ ಯಾರನ್ನು ಕೇಳಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
- - --28ಕೆಡಿವಿಜಿ1:
ದಾವಣಗೆರೆಯಲ್ಲಿ ಬಿಜೆಪಿ ಯುವ ಮುಖಂಡ ಶ್ರೀನಿವಾಸ ಟಿ.ದಾಸಕರಿಯಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು.