ಸಾರಾಂಶ
ಸಂಪ್ರೀತ್ ಸಂತೋಷ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿದ್ದು, ಬೆಂಗಳೂರಿನಲ್ಲಿ ಪ್ರೌಢಶಾಲೆ, ಪಿಯುಸಿ ವ್ಯಾಸಂಗ ಮುಗಿಸಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಎಂ.ಎ.ಸಾರ್ವಜನಿಕ ಆಡಳಿತ ವಿಷಯದಲ್ಲಿ ಟಾಪರ್ ಆಗಿ ಸಂಪ್ರೀತ್ ಸಂಜಯ್ ಹೊರಹೊಮ್ಮಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೪ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಂಡ್ಯದ ಗಾಂಧೀನಗರದ ಸಂಪ್ರೀತ್ ಸಂತೋಷ್ ಅವರು ೬೫೨ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ೨೦೨೩ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೮೬೪ನೇ ರ್ಯಾಂಕ್ ಪಡೆದು ಹೈದರಾಬಾದ್‌ನಲ್ಲಿ ಐಆರ್‌ಎಸ್ ತರಬೇತಿ ಪಡೆಯುತ್ತಿದ್ದಾರೆ. ಇವರ ತಂದೆ ಎಸ್.ಎಚ್.ಸಂತೋಷ್‌ಕುಮಾರ್ ಕೂಡ ಕೆಎಎಸ್ ಅಧಿಕಾರಿಯಾಗಿ ಸಹಕಾರ ಸಂಘಗಳ ಜಂಟಿ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು, ಹಾಲಿ ಮಂಡ್ಯ ವಿವಿ ಸಮಾಜ ಕಾರ್ಯ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಆರತಿ ಗೃಹಿಣಿಯಾಗಿದ್ದಾರೆ.ಸಂಪ್ರೀತ್ ಸಂತೋಷ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿದ್ದು, ಬೆಂಗಳೂರಿನಲ್ಲಿ ಪ್ರೌಢಶಾಲೆ, ಪಿಯುಸಿ ವ್ಯಾಸಂಗ ಮುಗಿಸಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಎಂ.ಎ.ಸಾರ್ವಜನಿಕ ಆಡಳಿತ ವಿಷಯದಲ್ಲಿ ಟಾಪರ್ ಆಗಿ ಸಂಪ್ರೀತ್ ಸಂಜಯ್ ಹೊರಹೊಮ್ಮಿದ್ದರು.
ಯುಪಿಎಸ್ಸಿ: ಎಂ.ಆರ್.ನಿಖಿಲ್‌ಗೆ ೭೨೪ನೇ ರ್ಯಾಂಕ್ಕನ್ನಡಪ್ರಭ ವಾರ್ತೆ ಮಂಡ್ಯ
ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯ ತಾಲೂಕು ಮೊಡಚಾಕನಹಳ್ಳಿ ಮೂಲದ ಎಂ.ಆರ್.ನಿಖಿಲ್ ೭೨೪ನೇ ರ್ಯಾಂಕ್ ಗಳಿಸಿದ್ದಾರೆ. ನಗರಸಭೆ ನಿವೃತ್ತ ಆಯುಕ್ತ ಎಂ.ಎಲ್.ರಮೇಶ್ ಹಾಗೂ ಡಾ.ಬಿ.ಕೆ.ಪ್ರತಿಮಾ ಅವರ ಪುತ್ರ ಎಂ.ಆರ್.ನಿಖಿಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಪೂರೈಸಿ ಬಳಿಕ ಪ್ರೌಢಶಾಲೆ, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಜೆ.ಸಿ.ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ನಿಖಿಲ್ ಸಹೋದರ ಎಂ.ಆರ್.ಜಗದೀಶ್‌ಕುಮಾರ್ ಬಿಇ, ಎಂ.ಎಸ್.ವ್ಯಾಸಂಗ ಮಾಡಿ ಜರ್ಮನಿಯ ಏರೋನಾಟಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಡಾ.ಬಿ.ಕೆ.ಪ್ರತಿಮಾ ಅವರು ಶ್ರೀರಂಗಪಟಣ್ಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರು ಆಗಿದ್ದಾರೆ.