ವಕ್ಫ್ ಆಸ್ತಿವಿವಾದ ಅಂತ್ಯಗೊಳಿಸಲು ಒತ್ತಾಯ

| Published : Nov 13 2024, 12:45 AM IST

ಸಾರಾಂಶ

ಚಳ್ಳಕೆರೆ: ರಾಜ್ಯದಲ್ಲಿ ವಕ್ಫ್ ಆಸ್ತಿವಿವಾದನ್ನು ಸರ್ಕಾರ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಅಲ್ಪಸಂಖ್ಯಾತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಚಳ್ಳಕೆರೆ: ರಾಜ್ಯದಲ್ಲಿ ವಕ್ಫ್ ಆಸ್ತಿವಿವಾದನ್ನು ಸರ್ಕಾರ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಅಲ್ಪಸಂಖ್ಯಾತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ಎಸ್.ಎಚ್.ಸೈಯದ್, ರಾಜ್ಯದೆಲ್ಲೆಡೆ ವಕ್ಫ್ ಆಸ್ತಿ ವಿವಾದ ರೈತರಿಗೆ ಮಾರಕವಾಗಿದ್ದು, ಮುಖ್ಯಮಂತ್ರಿಗಳು ಈಗಾಗಲೇ ಕೆಲವೆಡೆ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಪದವನ್ನು ತೆಗೆದುಹಾಕುವಂತೆ ಸೂಚನೆ ನೀಡಿದ್ದಾರೆ. ಆದರೂ ರೈತರಲ್ಲಿ ಇನ್ನೂ ಭಯಮನೆಮಾಡಿದೆ. ಇದರಿಂದ ರೈತರ ಬದುಕು ಬೀದಿಗೆ ಬರಲಿದ್ದು, ಕೂಡಲೇ ಎಲ್ಲಾ ನೋಟಿಸ್ ವಾಪಾಸ್ ಪಡೆದು ರೈತ ಸಮುದಾಯಕ್ಕೆ ನೆಮ್ಮದಿ ಉಂಟುಮಾಡಬೇಕೆಂದು ಒತ್ತಾಯಿಸಿದರು.

ವಕ್ಫ್ ಆಸ್ತಿ ಬಗ್ಗೆ ಉಂಟಾಗಿರುವ ವಿವಾದವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ರೈತರೂ ಸೇರಿದಂತೆ ಯಾರಿಗೂ ಅನ್ಯಾಯವಾಗಬಾರದು. ಸರ್ಕಾರಿ ಶಾಲೆ, ದೇವಸ್ಥಾನ, ಮಠಮಂದಿರಗಳು ವಕ್ಫ್ ಆಸ್ತಿ ಎಂದು ಗುರುತಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ತುರ್ತು ಗಮನಹರಿಸಿ ವಕ್ಫ್ ಆಸ್ತಿವಿವಾದಕ್ಕೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.

ಮನವಿಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ಪಾಷ, ರಾಜ್ಯದ ರೈತರ ಹಿತದೃಷ್ಟಿಯಿಂದ ಸೂಕ್ತ ಸಮಯದಲ್ಲಿ ತಾವು ಮುಖ್ಯಮಂತ್ರಿಗಳಿಗೆ ವಕ್ಪ್ ಆಸ್ತಿ ವಿವಾದದ ಬಗ್ಗೆ ಮಾಡಿಕೊಂಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ನಿರ್ದೇಶಕರಾದ ಎಂ.ದಾದಾಪೀರ್, ಸಿ.ಆರ್.ಅಲ್ಲಾಭಕಾಕ್ಷ್, ಎಸ್.ಬಿ.ಜುಬೇರ್, ಬಷೀರ್‌ಹಯಾತ್ ಮುಂತಾದವರಿದ್ದರು.