ಪರಿಹಾರ ಹಣ ಒಳ್ಳೆಯ ಕೆಲಸಕ್ಕೆ ಬಳಸಿ: ಶಾಸಕ ಕಂದಕೂರು

| Published : Jun 19 2024, 01:03 AM IST

ಪರಿಹಾರ ಹಣ ಒಳ್ಳೆಯ ಕೆಲಸಕ್ಕೆ ಬಳಸಿ: ಶಾಸಕ ಕಂದಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಸರ್ಗಿಕ ವಿಕೋಪ, ಆಕಸ್ಮಿಕವಾಗಿ ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಧನ ಚೆಕ್ ಶಾಸಕ ಶರಣಗೌಡ ಕಂದಕೂರು ವಿತರಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನೈಸರ್ಗಿಕ ಆಕಸ್ಮಿಕ ದುರ್ಘಟನೆಗಳಲ್ಲಿ ಸಾವುನ್ನಪ್ಪಿದ ವ್ಯಕ್ತಿಗಳ ಕುಟುಂಬಸ್ಥರಿಗೆ ಸರ್ಕಾರ ನೀಡಿರುವ ಪರಿಹಾರ ಧನ ತಮ್ಮ ಮಕ್ಕಳ ಶಿಕ್ಷಣ ಹಾಗೂ ಒಳ್ಳೆಯ ಕೆಲಸಗಳಿಗಾಗಿ ಬಳಸಿಕೊಳ್ಳಬೇಕೆಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ತಿಳಿಸಿದರು.

ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲ ದಿನಗಳ ಹಿಂದೆ ಗುರುಮಠಕಲ್ ಮತಕ್ಷೇತ್ರದ ಮಲ್ಹಾರ ಗ್ರಾಮದ ಯುವ ರೈತ ಮಹೇಶ ಮಲ್ಲಿಕಾರ್ಜುನ ಪೂಜಾರಿ ವಿದ್ಯುತ್ ಸ್ಪರ್ಶದಿಂದ, ರಾಂಪೂರ ಜಿ. ಗ್ರಾಮದಲ್ಲಿ ಚಂದಪ್ಪ ಸಿಡಿಲು ಬಡಿದು, ಗುರುಮಠಕಲ್‌ನಲ್ಲಿ ಅತೀ ಮಳೆಯಿಂದ ಮನೆ ಬಿದ್ದು ಮಾನಸಿ ತಿಮ್ಮಯ್ಯ ಎಂಬ ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ಧನ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಗುರುಮಠಕಲ್ ತಹಸೀಲ್ದಾರ್ ನೀಲಪ್ರಭಾ, ಜೆಸ್ಕಾಂ ಎಂಜಿನನೀಯರ್ ಮೋಸಿನ್, ಗುರುಮಠಕಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಾಪಣ್ಣ ಮನ್ನೆ, ಪ್ರಕಾಶ ನೀರಟ್ಟಿ, ಮಲ್ಲಿಕಾರ್ಜುನ ಅರುಣಿ, ಮಹಿಪಾಲರಡ್ಡಿ ಮಲ್ಹಾರ, ರಾಮರಡ್ಡಿ ಹಳಿಮನಿ, ರಾಜು ಉಡುಪಿ ಸೇರಿದಂತೆ ಹಲವರಿದ್ದರು.