ಯುದ್ಧದ ಪರಿಣಾಮ ಪೆಟ್ರೋಲ್ ಡೀಸೆಲ್ ಖರೀದಿಗೆ ದೊಡ್ಡ ಅಡೆತಡೆ ಬಂದಿದೆ. ಇದರಿಂದಾಗಿ ಡಿಸೇಲ್, ಪೆಟ್ರೋಲ್ ಕಡಿಮೆ ಬಳಸಿ ಚಿನ್ನ ಖರೀದಿ ನಿಲ್ಲಿಸಿ ಎಂದು ಪ್ರಧಾನಿ ಹೇಳಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ: ಯುದ್ಧದ ಪರಿಣಾಮ ಪೆಟ್ರೋಲ್ ಡೀಸೆಲ್ ಖರೀದಿಗೆ ದೊಡ್ಡ ಅಡೆತಡೆ ಬಂದಿದೆ. ಇದರಿಂದಾಗಿ ಡಿಸೇಲ್, ಪೆಟ್ರೋಲ್ ಕಡಿಮೆ ಬಳಸಿ ಚಿನ್ನ ಖರೀದಿ ನಿಲ್ಲಿಸಿ ಎಂದು ಪ್ರಧಾನಿ ಹೇಳಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರದ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರಣದಿಂದ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬಾರಿ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಕರೆಕೊಟ್ಟಿದ್ದಾರೆ ಎಂದರು ಹೇಳಿದರು.

ಇದು ಸದುದ್ದೇಶದ ಕರೆ. ಯಾವುದರ ಖರೀದಿಗೆ ನಾವು ಹೊರದೇಶಗಳನ್ನು ಅವಲಂಬಿಸಿದ್ದೇವೆಯೋ, ಅದಕ್ಕೆ ಮಿತಿ ಹಾಕಿಕೊಳ್ಳಬೇಕಾಗಿದೆ. ಆ ಮೂಲಕ ನಾವು ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ಒಂದು ವರ್ಷ ಈ ಕರೆಯನ್ನು ಪಾಲಿಸಿ. ಅಷ್ಟರಲ್ಲಿ ಸಮಸ್ಯೆಗಳು ಬಗೆಹರಿಯಬಹುದು. ಆಗ ನಾವು ವಿಪತ್ತಿನಿಂದ ಪಾರಾಗುತ್ತೇವೆ ಎನ್ನುವುದು ಪ್ರಧಾನಿಗಳ ಆಶಯ. ಹಾಗಾಗಿ ನಾವು ಎಲ್ಲರೂ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದರು.

ನಾವು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕು. ಆ ಮೂಲಕ ನಾವು ರಾಷ್ಟ್ರೀಯ ಕಾರ್ಯಕ್ಕೆ ನಮ್ಮ ಕೊಡುಗೆ ಕೊಡಲು ಸಾಧ್ಯವಿದೆ ಎಂದು ತಿಳಿಸಿದರು.

ಸುಧಾಕರ್‌ ನಿಧನಕ್ಕೆ ಸಂತಾಪ: ಸಚಿವ ಡಿ ಸುಧಾಕರ್ ನಿಧನ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಸಿ.ಟಿ. ರವಿ ಸಾಂತ್ವನ ಹೇಳಿದರು. ಸಚಿವ ಡಿ ಸುಧಾಕರ್ ಅವರ ಸಾವು ಅನಿರೀಕ್ಷಿತ. ಕಳೆದ 25 ದಿನಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದರು.