ಕಲಬುರಗಿಯಲ್ಲಿ ಉತ್ತರಾದಿಶ್ರೀ: ಇಂದು ಎನ್‌ವಿ ಮೈದಾನದಲ್ಲಿ ಗುರುವಂದನೆ

| Published : Jul 21 2024, 01:16 AM IST

ಕಲಬುರಗಿಯಲ್ಲಿ ಉತ್ತರಾದಿಶ್ರೀ: ಇಂದು ಎನ್‌ವಿ ಮೈದಾನದಲ್ಲಿ ಗುರುವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಶನಿವಾರ ಕಲಬರಗಿಗೆ ಆಗಮಿಸಿದ್ದಾರೆ. ಗುರುಗಳು 23ರ ವರೆಗಿನ 3 ದಿನಗಳ ಕಾಲ ಕಲಬುರಗಿ ಮಹಾನಗರದಲ್ಲಿ ಹಲವಾರು ಧಾರ್ಮಿಕ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಶನಿವಾರ ಕಲಬರಗಿಗೆ ಆಗಮಿಸಿದ್ದಾರೆ. ಗುರುಗಳು 23ರ ವರೆಗಿನ 3 ದಿನಗಳ ಕಾಲ ಕಲಬುರಗಿ ಮಹಾನಗರದಲ್ಲಿ ಹಲವಾರು ಧಾರ್ಮಿಕ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದ್ದಾರೆ.

ಈ 3 ದಿನಗಳ ಕಾಲ ಗುರುಗಳು ನಗರದಲ್ಲಿ ವಿಶ್ವ ಮಧ್ವ ಮಹಾ ಪರಿಷತ್ತು, ಸತ್ಯಾತ್ಮ ಸೇನೆ ಸಂಘದವರು ಆಯೋಜಿಸಿರುವ ಗುರುವಂದನೆ, ಸಾಮೂಹಿಕ ಪಾರಾಯಣ ಸೇರಿದಂತೆ ಹಲವಾರು ಸಭೆ- ಸಮಾರಭಗಳ ಸಾನಿಧ್ಯವಹಿಸಲಿದ್ದಾರೆ.

ಶನಿವಾರ ಇಲ್ಲಿನ ಬ್ರಹ್ಮಪುರದಲ್ಲಿರುವ ಉತ್ತರಾದಿ ಮಠ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ಗುರುಗಳು ಸಾಮೂಹಿಕ ಪಾರಾಯಣದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 1ರಿದ ಸಂಜೆ 7ರ ವರೆಗೂ ಹೈದರಾಬಾದ್‌ನ ವೇದವ್ಯಾಸ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಮಗ್ರ ತರ್ಕತಾಂಡವ ಪರೀಕ್ಷೆ, ಅನುವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

21ರಂದು ಶ್ರೀಗಳು ಬ್ರಹ್ಮಪೂರ ಮಠದಲ್ಲಿ ನಡೆಯಲಿರುವ ಎಲ್ಲಾ ಪಾರಾಯಣ ಸಂಘಗಳ ಸಾಮೂಹಿಕ ಪಾರಾಯಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ಮಠದ ಅಂಗಳದಲ್ಲಿಯೇ ಭಕ್ತಾದಿಗಳಿಗೆ ಸಾಮೂಹಿಕವಾಗಿ ತಪ್ತ ಮುದ್ರೆ ಧಾರಣೆ ಮಾಡಲಿದ್ದಾರೆ. ಆಷಾಢ ಪೂರ್ಣಿಮೆ, ಗುರು ಪೂರ್ಣಿಮೆ ನಿಮಿತ್ತ ಮಠದಲ್ಲಿಯೇ ಗುರುಗಳಿಂದ ರುಕ್ಮಿಣಿ ಪಾಂಡುರಂಗ ದೇವರಿಗೆ, ವೃಂದಾವನಗಳಿಗೆ ಪೂಜೆ, ಪಂಚಾಮೃತಾದಿ ಅಭಿಷೇಕ ಪೂಜೆಗಳು ನಡೆಯಲಿವೆ.

ಅಂದೇ ಸಂಜೆ ಹೊತ್ತಲ್ಲಿ ಗುರುವಂದನೆ ಸಮಾರಂಭ ನೂತನ ವಿದ್ಯಾಲಯದ ಸತ್ಯಪ್ರಮೋದತೀರ್ಥ ಸಭಾ ಮಂಟಪದಲ್ಲಿ ನಡೆಯಲಿದೆ.

22ರಂದು ಶ್ರೀಗಳಿಂದ ಜೇವರ್ಗಿ ಕಾಲೋನಿ ರಾಯರ ಮಠದಲ್ಲಿ ಬೆ.8 ಗಂಟೆಗೆ ತಪ್ತ ಮುದ್ರೆ ಧಾರಣೆ ಕಾರ್ಯಕ್ರಮವಿರುತ್ತದೆ. ನಂತರ ಬೆ.9 ಗಂಟೆಗೆ ಬಸವೇಶ್ವರ ಕಾಲೋನಿ ರಾಯರ ಮಠದಲ್ಲಿಯೂ ಗುರುಗಳು ತಪ್ತ ಮುದ್ರಾಧಾರಣೆ ಕರ್ಯಕ್ರಮ ನಡೆಸಿಕೊಡಲಿದ್ದಾರೆ.

ಗುರು ವಂದನೆಯಲ್ಲಿ ಸೇವೆ ಸಲ್ಲಿಸುವವರಿಗೆ 108 ಜನರಿಗೆ ಅವಕಾಶವಿದೆ. ತಲಾ 2 ಸಾವಿರ ರು. ನಂತೆ ಗುರು ವಂದನೆ ಕಾಣಿಕೆ ಸಂಗಹಿಸಲಗುತ್ತಿದೆ. ಇದಕ್ಕಾಗಿ ಆಸಕ್ತರು ಸಮಾರಂಭ ಸಂಘಟಕರಾದ ರಾಮಮೂರ್ತಿ ಜೋಶಿ (63609 50218), ಮನೋಹರರಾವ ಕುಲಕರ್ಣಿ (94803 39529) ಅವರನ್ನು ಸಂಪರ್ಕಿಸಬಹುದಾಗಿದೆ.

ಉತ್ತರಾದಿ ಶ್ರೀಗಳ ಕಲಬುರಗಿಯ 3 ದಿನದ ದಿಗ್ವಿಜಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಮಠಾಧೀಶರಾದ ರಾಮಾಚಾರ್ಯ ಘಂಟಿ ಹಾಗೂ ಉತ್ತರಾದಿ ಮಠ ಬ್ರಹ್ಮಪುರ ಕಲಬುರಗಿಯ ವ್ಯವಸ್ಥಾಪಕರಾದ ವಿನೋದಾಚಾರ್ಯ ಗಲಗಲಿ ಕೋರಿದ್ದಾರೆ.