ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಪಡೆದ ವಿ.ಗುರುರಾಜ್‌ಗೆ ಸನ್ಮಾನ

| Published : May 11 2025, 01:19 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಪಡೆದ ವಿ.ಗುರುರಾಜ್‌ಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಾದ ಕೆ.ಆರ್.ಗಗನ (611), ಬಿ.ಎಂ.ನಂದಿತ (606), ನಿವೇದಿತ (606), ಮೊಹಮ್ಮದ್ ಯೂಸುಫ್ (605 ), ಅಂಕಗಳನ್ನು ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಗಳಿಸಿದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಗುರುರಾಜ್‌ಗೆ ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮುಖ್ಯ ಶಿಕ್ಷಕಿ ಶಕುಂತಲಾ ವಿದ್ಯಾರ್ಥಿಯನ್ನು ಅಭಿನಂದಿಸಿ ಮಾತನಾಡಿ, ಶಾಲೆಗೆ ಪರೀಕ್ಷೆಯಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ ವಿದ್ಯಾರ್ಥಿಗಳಾದ ಕೆ.ಆರ್.ಗಗನ (611), ಬಿ.ಎಂ.ನಂದಿತ (606), ನಿವೇದಿತ (606), ಮೊಹಮ್ಮದ್ ಯೂಸುಫ್ (605 ), ಅಂಕಗಳನ್ನು ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಶಾಲೆಯ 35 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. 166 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಗುರುರಾಜ್ ಸಹ ಕನ್ನಡ ಭಾಷೆ ಪರೀಕ್ಷೆ ಮತ್ತೊಮ್ಮೆ ಬರೆಯಲು ಸಜ್ಜಾಗಿದ್ದಾನೆ. ಇಂಗ್ಲಿಷ್ ಭಾಷೆ ಮರು ಮೌಲ್ಯಮಾಪನದಲ್ಲಿ ಇನ್ನೂ ಹೆಚ್ಚಿನ ಅಂಕ ಸಿಗಬಹುದು ಎಂಬ ನಂಬಿಕೆ ಅವನಿಗೂ ಮತ್ತು ನಮಗೂ ಸಹ ಇದೆ. ಅವನ ನಿರೀಕ್ಷೆ ಹೆಚ್ಚಿನ ಅಂಕ ಸಿಗುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.

ಸನ್ಮಾನ ಸ್ವೀಕರಿಸಿದ ವಿ.ಗುರುರಾಜ್ ಮಾತನಾಡಿ, ಪರೀಕ್ಷೆಯಲ್ಲಿ 612 ಅಂಕಗಳಿಗಿಂತ ಇನ್ನು ಹೆಚ್ಚಿನ ಅಂಕ ಬರುತ್ತದೆ ಎಂಬ ನಂಬಿಕೆಯಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಸಲ್ಲಿಸಿದ್ದೇನೆ. ಕನ್ನಡದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಲು ಎರಡನೇ ಬಾರಿ ಕನ್ನಡ ಭಾಷೆ ಪರೀಕ್ಷೆ ತೆಗೆದುಕೊಂಡಿದ್ದೇನೆ ಎಂದರು.

ನನ್ನ ಈ ಸಾಧನೆಗೆ ಶಾಲೆ ಶಿಕ್ಷಕರು ಕಾರಣ. ಹಬ್ಬದ ದಿನಗಳಲ್ಲೂ ಸಹ ಶಿಕ್ಷಣ ನೀಡುತ್ತಿದ್ದರು. ವಿಶೇಷ ತರಗತಿ ನಡೆಸುತ್ತಿದ್ದರಿಂದ ಇಷ್ಟು ಅಂಕ ಬರಲು ಸಹಕಾರಿಯಾಗಿದೆ. ಮನೆಯಲ್ಲಿ ಉತ್ತಮ ವಾತಾವರಣವಿತ್ತು. ಯಾವುದೇ ಕೌಟುಂಬಿಕ ಒತ್ತಡವಿಲ್ಲದೆ ಎಲ್ಲರ ಸಹಕಾರದಿಂದ ವ್ಯಾಸಂಗ ಮಾಡಿದ್ದರಿಂದ ಉತ್ತಮ ಅಂಕ ಬರಲು ಸಾಧ್ಯವಾಗಿದೆ ಎಂದರು.

ಈ ವೇಳೆ ಶಿಕ್ಷಕರಾದ ಕೆ.ಎಂ.ಬಸವರಾಜು, ಮಹೇಶ, ಡಿ.ಪಿ.ಮಲ್ಲೇಶ್, ಮಹೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.