5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

| Published : Mar 04 2024, 01:15 AM IST

5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಇಲಾಖೆ ಅವಿರತ ಶ್ರಮದಿಂದ ಮತ್ತು ಸಾರ್ವಜನಿಕರ ಸಹಕಾರದಿಂದ ಪೋಲಿಯೊ ಮುಕ್ತವಾಗಿರುವುದು ತುಂಬಾ ಖುಷಿ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಮ್ಮ ದೇಶದ ಆರೋಗ್ಯ ಇಲಾಖೆ ಅವಿರತ ಶ್ರಮದಿಂದ ಮತ್ತು ಸಾರ್ವಜನಿಕರ ಸಹಕಾರದಿಂದ ಪೋಲಿಯೊ ಮುಕ್ತವಾಗಿರುವುದು ತುಂಬಾ ಖುಷಿ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ಸ್ಟೇಷನ್ ಏರಿಯಾ ವ್ಯಾಪ್ತಿಯ ಅಂಬಾಭವಾನಿ ಮಂದಿರದ ಹತ್ತಿರ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೊ ಪ್ರಕರಣಗಳು ಕಂಡುಬರುತ್ತಿರುವ ಕಾರಣ ಮುನ್ನೆಚ್ಚರಿಕೆಯಾಗಿ ನಮ್ಮಲ್ಲಿ ಇನ್ನೂ ಪೋಲಿಯೊ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಆದ್ದರಿಂದ ನಗರ ಮತ್ತು ಜಿಲ್ಲೆಯ ಎಲ್ಲಾ ಎಲ್ಲಾ ಸಾರ್ವಜನಿಕರು ತಮ್ಮ 5 ವರ್ಷದ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೊ ಹನಿ ಹಾಕಿಸಿ, ನಿಮ್ಮ ಮಕ್ಕಳು ಜೊತೆಗೆ ದೇಶವನ್ನು ಬಲಿಷ್ಠ ರಾಷ್ಟ್ರವಾಗಿಸಲು ಕೈಜೋಡಿಸಬೇಕು ಎಂದೂ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಡಾ. ಸುಶೀಲಾ ಮಾತನಾಡಿ, ಪೋಷಕರು ತಮ್ಮ ಐದು ವರ್ಷದ ಒಳಗಿನ ಎಲ್ಲ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ದು ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಿ ಎಂದು ಹೇಳಿದರು.

ಕಾಯಿಲೆ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಭುಲಿಂಗ ಮಾನಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಒಟ್ಟು 5 ವರ್ಷದ ಮಕ್ಕಳ ಗುರಿ 14164 ಇದ್ದು ಇಂದೆ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು 39 ಲಸಿಕಾ ತಂಡಗಳನ್ನು, ಮೇಲ್ವಿಚಾರಣೆಗೆ 8 ಅಧಿಕಾರಿಗಳನ್ನು ಮತ್ತು 5 ಚಾಲಿತ ತಂಡಗಳನ್ನು ರಚಿಸಲಾಗಿದೆ. ಈ ಕಾರ್ಯಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಶಾಲಾ ಮಕ್ಕಳ ಮೂಲಕ ಪ್ರಭಾತಪೇರಿ, ಮಾಡಿಸಿ ಜಾಗೃತಿವಮೂಡಿಸಲಾಗಿದೆ ಮತ್ತು ಪಂಚಾಯಿತಿ, ನಗರ ಸಭೆ ಮೂಲಕ ಆಟೋ ಮತ್ತು ಟಂಟಂ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮಲ್ಲಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಮುಬಾಸಿರ ಅಹ್ಮದ್ ಸಾಜಿದ್, ಡಾ. ಸುನಿಲ್ ಕುಮಾರ್, ನಗರ ಸಭೆ ಪೌರಾಯುಕ್ತ ಲಕ್ಷ್ಮಿಕಾಂತರಡ್ಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಹಣಮಂತ ರಡ್ಡಿ,ಡಾ. ವೀನಿತಾ ಆರೋಗ್ಯ ಸಿಬ್ಬಂದಿಗಳಾದ ಸವಿತಾ ಮುದ್ನಾಳ, ಸಕ್ಕುಬಾಯಿ ಆಶಾ ಕಾರ್ಯಕರ್ತೆಯರು ಶಾಂತಮ್ಮ, ಶಾಂತಾ, ಶಾರದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.